
ಬಂಜಾರ ಟ್ರಸ್ಟ್ ನೌಕರ ಸಂಘದಿಂದ ನಿವೃತ್ತಿ, ವೃತ್ತಿ ನಿರತ ಹಿರಿಯ ನೌಕರರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ,25- ನಗರದ ಬಂಜಾರ ಸಮಾಜದ ಶ್ರೀ ಸಂತ ಸೇವಾಲಾಲ್ ಮಾತಾ ಮರಿಯಮ್ಮ ದೇವಸ್ಥಾನ ಬಂಜಾರ ಹಿಲ್ಸ್ನಲ್ಲಿ ನಿವೃತ್ತಿ ಹಾಗೂ ವೃತ್ತಿ ನಿರತ ಹಿರಿಯ ನೌಕರರಿಗೆ ಬಾನುವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಂತ ಸೇವಾಲಾಲ್ ಹಾಗೂ ಮಾತೇ ಮರಿಯಮ್ಮ ದೇವರಿಗೆ ಪೂಜೆ ಸಲ್ಲಿಸಿ ಸೇವಾಲಾಲ್ ರ ಹಾಡನ್ನು ವಾಲ್ಯ ನಾಯ್ಕ ಹಾಡುವುದರ ಮೂಲಕ ಚಾಲನೆ ನೀಡಿದರು. ನೌಕರ ಸಂಘದ ಅಧ್ಯಕ್ಷರು ಶಿವರಾಮ್ ನಾಯ್ಕ್ ಸ್ವಾಗತ ಕೋರಿದರು.
ಪ್ರಸ್ತಾವಿಕ ಬಾಷಣದಲ್ಲಿಮಾಜಿ ಅಧ್ಯಕ್ಷರು L. D ಲಕ್ಷ್ಮಣ ಮಾತನಾಡಿ ಬಂಜಾರ ಟ್ರಸ್ಟ್ ಹಾಗೂ ನೌಕರ ಸಂಘ ಬೆಳೆದು ಬಂದ ದಾರಿ ಸವಿಸ್ತಾರ ವಾಗಿ 2008ರಿಂದ ಸೇವಾಲಾಲ್ ಜಯಂತಿ ಮತ್ತು ಸಮಾಜಮುಖಿ ಕೆಲಸಗಳು ಮಾಡಿಕೊಂಡು ಬರುತ್ತಿದ್ದೇವೆ. ಮುಂದಿನ ಪೀಳಿಗೆಯೂ ಮುಂದು ವರೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಬಂಜಾರ ಭಾಷಾ ಅಕಾಡಮಿಯ ನಿರ್ದೇಶಕರಾದ ಸಣ್ಣ ರಾಮ ನಾಯ್ಕ್ ಮಾತನಾಡಿ ಇದು ಪ್ರಾರಂಭ ಅಷ್ಟೇ ಮುದೊಂದು ದಿನ ಈ ಸ್ಥಳ ಇನೊಂದು ಸೊರಗೊಂಡನ ಕೊಪ್ಪ (ಭಾಯ ಘಡ )ಆಗಿ ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇನೆ ಎಂದರು.
ಸಮಾರಂಭದಲ್ಲಿ ನಿವೃತ್ತಿ ಹೊಂದಿರುವಂತಹ ಪಿ ಎಸ್ ಐ ವಿರೇಶ್ ನಾಯ್ಕ್, ಹಿರಿಯ ಪಬ್ಲಿಕ್ ಪ್ರಸಿಕ್ಯೂಟರ್ ನಾರಾಯಣ ನಾಯ್ಕ್ ಹಾಗೂ ಪಿ ಎಸ್ ಐ ಡಿ.ಎಸ್. ರಜಪೂತ, ಹಿರಿಯ ನೌಕರ ರಾದ ಸಾರಿಗೆ ವಿಭಾಗೀಯ ನಿಯಂತ್ರಣಧಿಕಾರಿಗಳಾದ ಜಗದೀಶ್ ನಾಯ್ಕ್ ಅವರಿಗೆ ಹಾಗೂ ಇ ಇ ಕೆಪಿ ಟಿ ಸಿ ಎಲ್ ತೇಜ್ಯಾ ನಾಯ್ಕ್, ಶೆಟ್ಟಿ ನಾಯ್ಕ್, JSWಭೀಮನಾಯ್ಕ್ , ಗೋವಿಂದ ನಾಯ್ಕ್ ರವರನ್ನು ಸನ್ಮಾನಿಸಲಾಯಿತು.
ಪ್ರದಾನ ಟ್ರಷ್ಟಿ ರಾಮಜೀ ನಾಯ್ಕ್, ಡಿ ಕೃಷ್ಣ ನಾಯ್ಕ್, ಚಂದ್ರಶೇಖರ ನಾಯ್ಕ್, ವೆಂಕಟೇಶ್ ನಾಯ್ಕ್, ಹೇಮಲ ನಾಯ್ಕ್, L ರಮೇಶ್ ನಾಯ್ಕ್ ಹಂಪಿ, ನಾರಾಯಣನಾಯ್ಕ್, ಗುಡಿಮನಿ, ಕುಮಾರ್ ನಾಯ್ಕ್, ಪತ್ರಕರ್ತ ಭೀಮನಾಯ್ಕ್, ಟ್ರಸ್ಟ್ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.