IMG_20231109_150941

         ಬರ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಿ                               ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಸೂಚನೆ

ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ) , 09- ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಬರಗಾಲ ಪರಿಸ್ಥಿತಿ ಕುರಿತು ಬುಧುವಾರ ನಡೆದ ಸಭೆಯಲ್ಲಿ ಚರ್ಚಿಸಿ ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸುವಂತೆ ನಿರ್ದೇಶಿಸಿದರು.

ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಬರದಂತೆ ಕ್ರಮವಹಿಸುವುದು, ಗ್ರಾಮದಲ್ಲಿ ಇರುವ ಎಲ್ಲಾ ನೀರು ಸಂಗ್ರಹಣೆಗಳನ್ನು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸ್ವಚ್ಚತೆ ಮಾಡುವುದು, ಗ್ರಾಮಗಳಲ್ಲಿನ ಚರಂಡಿಗಳನ್ನು ತಕ್ಷಣವೇ ಸ್ವಚ್ಚತೆ ಮಾಡುವುದು, ಬೀದಿ ದೀಪಗಳ ದುರಸ್ತಿಯನ್ನು ಕೂಡಲೇ ಕ್ರಮ ವಹಿಸುವುದು ಆರ್.ಓ ಘಟಕಗಳು ಕೆಟ್ಟು ಹೋಗಿದಲ್ಲಿ ಕೂಡಲೇ ಸರಿಪಡಿಸುವುದು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮವಹಿಸುವುದು.

ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೀರಾವರಿ ಇರುವ ಪ್ರದೇಶದಲ್ಲಿ ಮೇವಿನ ಬೀಜಗಳನ್ನು ವಿತರಿಸಿ ಮೇವಿನ ಉತ್ಪಾದನೆ ಆಗುವಂತೆ ಕ್ರಮವಹಿಸುವುದು, ಜಿಲ್ಲೆಯಿಂದ ಬೇರೆ ಕಡೆಗೆ ಮೇವು ಸಾಗಾಣಿಕೆ ಆಗುವುದನ್ನು ತಡೆಯುವುದು, ಉದ್ಯೋಗ ಖಾತ್ರಿಯಲ್ಲಿ ಎಲ್ಲಾ ಜಾಬ್‌ ಕಾರ್ಡ ಒಳಗೆ ಕೆಲಸ ನೀಡುವುದು ಹೆಚ್ಚು ಕಾಮಗಾರಿಯನ್ನು ತೆಗೆದುಕೊಂಡು ಶಾಲೆಗಳಲ್ಲಿ ಕೈತೋಟ, ಕಾಂಪೌಂಡ್‌, ಶೌಚಾಲಯ, ಇತರೆ ಕಾಮಗಾರಿಗಳನ್ನು ಕಡ್ಡಾಯವಾಗಿ ಈ ವರ್ಷ ಕೈಗೊಳ್ಳುವುದು ಆಸ್ಪತ್ರೆಗಳಲ್ಲಿ ಯಾವುದೇ ರೋಗಿಗಳಿಗೆ ಔಷದಗಳ ಕೊರತೆ ಆಗದಂತೆ ಸಂಗ್ರಹ ಮಾಡಿಕೊಳ್ಳುವುದು.

ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮನೆ ಬಾಗಿಲಿಗೆ ಈ ಸ್ವತ್ತು ಎಂಬ ಅಭಿಯಾನವನ್ನು 30 ದಿನಗಳೊಳಗಾಗಿ ಕೈಗೊಂಡು ವರದಿ ಮಾಡಲು ಎಚ್ಚರಿಕೆ ನೀಡಲಾಯಿತು.

ಗ್ರಾಮ ಪಂಚಾಯತಿವ್ಯಾಪ್ತಿಯಲ್ಲಿರುವ ಎಲ್ಲಾ ಸ್ಮಶಾನಗಳನ್ನು ಅಭಿವೃದ್ದಿಪಡಿಸುವುದು. ಎಲ್ಲಾ ಸ್ಮಶಾನಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸುತ್ತಲೂ ಟ್ರೆಂಚ್‌ ಹಾಕಿ, ಒತ್ತುವರಿ ಆಗದಂತೆ ಕ್ರಮವಹಿಸುವುದು ಮತ್ತು ಅಲ್ಲಿ ನೀರಿನ ಸೌಲಭ್ಯ ಮತ್ತು ಲೆವೆಲಿಂಗ್‌ ಮಾಡಿ ಮುಂದುಗಡೆ ಒಂದು ಮೋಟಾರ್‌ ಹಾಕುವ ಮುಖಾಂತರ ಕಡ್ಡಾಯವಾಗಿ ಎಲ್ಲಾರೂ ಸ್ಮಶಾನದ ಉಪಯೋಗವನ್ನು ಪಡೆಯಲು
ಹಾಗೂ ಉದ್ಯೋಗ ಖಾತ್ರಿ ಅಡಿ ಎಲ್ಲಾ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಊಟದ ಕೊಠಡಿ ಮುಂತಾದವುಗಳನ್ನು ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!