3a29c7b8-a419-438d-9314-400e5df9e585

ಉತ್ತಮ ವೈದ್ಯ ಸೇವೆ ಸಲ್ಲಿಸಿದ

ಬಸರೆಡ್ಡಿಗೆ ಸನ್ಮಾನ ಹಸಿರು ಸೇನೆಯಿಂದ ಸನ್ಮಾನ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01- ವೈದ್ಯೋ ನಾರಾಯಣ ಹರಿ ಎಂಬಂತೆ, ಜಿಲ್ಲಾ ಆಸ್ಪತ್ರೆಯ ಅತ್ಯುತ್ತಮ ವೈದ್ಯ ಸೇವೆಯನ್ನು ಸಲ್ಲಿಸುತ್ತಿರುವ, ಬಳ್ಳಾರಿ ಜಿಲ್ಲಾ  ಶಸ್ತ್ರ ಚಿಕಿತ್ಸಕ  ಡಾ, ಬಸ ರೆಡ್ಡಿ ಅವರನ್ನು ಮತ್ತು ಶುಶ್ರೂಷ ಅಧಿಕಾರಿ, ಗ್ರೇಡ್ ಒನ್, ವಿಮಲಾಕ್ಷಿ  ಅವರನ್ನು  ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ  ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ  ಸಂಗನಕಲ್ಲು ಕೃಷ್ಣಪ್ಪ, ವೈದ್ಯ ಸೇವೆಯನ್ನು ಪಡೆಯಬೇಕೆಂದರೆ ಸಾವಿರಾರು ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಖರ್ಚು ಮಾಡುತ್ತಿದ್ದು ಮುಖ್ಯವಾಗಿ ಬಡ ಕುಟುಂಬಗಳಿಗೆ, ಜಿಲ್ಲಾ ಆಸ್ಪತ್ರೆ ಆರೋಗ್ಯವನ್ನು ನೀಡುವುದರಲ್ಲಿ ಕಲ್ಪವೃಕ್ಷವಾಗಿರುವುದು ಎಂದರೆ ತಪ್ಪಾಗಲಾರದು ಎಂದರು.

ವಿವಿಧ ವೈದ್ಯ ಸೇವೆಗಳಿಗಾಗಿ ಜಿಲ್ಲೆಯ ನಾನಾ ಭಾಗದಿಂದ ಬರುವ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಡಾಕ್ಟರ್ ಬಸರೆಡ್ಡಿ ಅವರು ಶ್ರಮಪಡುತ್ತಿರುವದಾಗಿ, ಎಷ್ಟು ಕೃತಜ್ಞತೆ ಸಲ್ಲಿಸಿದರು ತಪ್ಪಾಗಲಾರದು ಎಂದರು. ಪ್ರಧಾನವಾಗಿ ಹೆರಿಗೆ ವಿಭಾಗದಲ್ಲಿ, ವೈದ್ಯರು,, ಸಿಬ್ಬಂದಿ ನೀಡುವ ಸೇವೆ ಎಷ್ಟೋ ದೊಡ್ಡದು ಎಂದರು.

ಬಹಳಷ್ಟು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಸಾವಿರಾರು ರೂಪಾಯಿ ಖರ್ಚು ಮಾಡಿ, ಕಾಯಿಲೆ ಕಡಿಮೆಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ಸೇವೆಯನ್ನು ಪಡೆದು ರೋಗ ಮುಕ್ತರಾಗುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದರು.

ಇಂತಹ ಉತ್ತಮ ಸೇವೆ ಸಲ್ಲಿಸಿತ್ತಿರುವ ಡಾಕ್ಟರ್ ಬಸರೆಡ್ಡಿ ಅವರ ಸೇವೆ ಇನ್ನೂ ಮುಂದುವರಿಯಬೇಕೆಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು, ಬೇವಿನ ಮರ ಎರ್ರಿಸ್ವಾಮಿ, ರೈತ ಮುಖಂಡ ಮಾರಪ್ಪ, ಬಸವರಾಜ, ಮೂಕಣ್ಣ ಗಳ ಜತೆಗೆ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!