
ಶ್ರೀ ಮಧ್ವಾಚಾರ್ಯರ ಜಯಂತ್ಯೋತ್ಸವ ಬೃಹತ್ ಮೆರವಣಿಗೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25 – ದ್ವೈತ ಸಿದ್ದಾಂತದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರ ಜಯಂತ್ತ್ಯುತ್ಸವನ್ನು ನಗರದಲ್ಲಿ ವಿಶ್ವಮಧ್ವಮತ ವೆಲ್ಪೇರ್ ಫೌಂಡೇಶನ್ ಆಶ್ರಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತ್ತ್ಯುತ್ಸವ ಹಿನ್ನೆಲೆ ನಗರದ ಕೌಲ್ ಬಜಾರ್ ಪ್ರದೇಶದ ಶ್ರೀ ವ್ಯಾಸರಾಜರ ಶ್ರೀಮಠದ ಎದುರು ಶ್ರೀ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬ್ರಾಹ್ಮಣ ಸಮುದಾಯದ ನೂರಾರು ಯುವಕರು, ಮುಖಂಡರು, ಪಂಡಿತರು, ಮಹಿಳಾ ಭಜನಾ ಮಂಡಳಿ ಸದಸ್ಯರು, ವಿಶ್ವ ಮಧ್ವಮತ ಫೌಂಡೇಶನ್ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆ ಶ್ರೀಮಠದ ಅರ್ಚಕರಾದ ಕೆ.ಪಾಂಡುರಂಗ ಆಚಾರ್ಯ ಅವರು ಚಾಲನೆ ನೀಡಿದರು. ರೇಡಿಯೋ ಪಾರ್ಕ್ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಶ್ರೀಮಠದಲ್ಲಿ ಸಂಪನ್ನಗೊಂಡಿತು.
ವಾದ್ಯಮೇಳ, ವಿವಿಧ ಮಂತ್ರ ಘೋಷಗಳು, ಸ್ತೋತ್ರ ಪಾರಾಯಣ ಮಾಡಲಾಯಿತು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ, ಕೋಲಾಟ ಮಾಡಲಾಯಿತು. ಇದಕ್ಕೂ ಮುನ್ನ ಬ್ರಾಹ್ಮಣ ಸಮುದಾಯದ ಯುವ ಮುಖಂಡರಿಂದ ದ್ವಿಚಕ್ರ ವಾಹನಗಳ ಮೂಲಕ ಜಯಘೋಷಗಳೊಂದಿಗೆ ಶ್ರೀ ಮಧ್ವಾಚಾರ್ಯರ ಭಾವಚಿತ್ರದೊಂದಿಗೆ ನಗರ ಪ್ರದಕ್ಷಿಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಮೆಂಟ್ ಗಿರಿ, ಕೌಲ್ ಬಜಾರ್ ಭೀಮರಾವ್, ಜಿತೇಂದ್ರ ಆಚಾರ್, ಅನೀಲ್ ಕುಮಾರ್, ಡಾ.ಶ್ರೀನಾಥ್, ಹರಿ ಬಜಾರ್, ನೇಮಕಲ್ ರಾವ್, ವಾಸು, ಶ್ರೀನಿವಾಸ್ ದೇಸಾಯಿ, ರಾಮರಾವ್ ಕುಲಕರ್ಣಿ, ಹರಿಪ್ರಸಾದ್, ರಾಧಾಕೃಷ್ಣ, ಸುರೇಂದ್ರ, ರಾಮಮೂರ್ತಿ, ರಾಘವೇಂದ್ರ, ಕರಾಟೆ ವಿಜಯ ವಿಠಲ, ಮಧುಸೂಧನ್, ಬದರಿ, ಗುರುರಾಜ್, ಕಾರ್ತೀಕ್, ಶ್ಯಾಮ್, ಅಮೀತ್, ಅನಿರುದ್ಧ, ಸೂಜಿ ಗುರು, ರಂಗನಾಥ್, ಅನಂತ್, ಪವನ್ ಸೇರಿದಂತೆ ವಿಶ್ವಮಧ್ವಮತ ಫೌಂಡೇಶನ್ ನ ನ್ಯಾಯವಾದಿ ರಾಘವೇಂದ್ರ ಮೋಹನ್, ಅಶೋಕ್ ಕುಲಕರ್ಣಿ, ನ್ಯಾಯವಾದಿ ಶಿಲ್ಪ ಸೇರಿದಂತೆ ವಿವಿಧ ಮುಖಂಡರು ಭಾಗವಹಿ ಭಕ್ತಿ ಸಮರ್ಪಿಸಿದರು.