
ಜನ ಮನ ಗೆದ್ದ ಖಾಸಿಂ ಸಾಹೇಬರ ಗಾಯನ
ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೧೯-ಸಂಗೀತ ಕಲಿಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮನುಷ್ಯನ ಮಾನಸಿಕ ಒತ್ತಡವನ್ನ ಸಂಗೀತವು ನಿವಾರಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ಅವರು ಸ್ವರ ಸಂಗಮ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಯೋಜನ ಅಡಿಯಲ್ಲಿ ರಾಜ್ಯೋತ್ಸವ ಸಂಭ್ರಮ ಸುಗಮ ಸಂಗೀತ ಎನ್ನುವ ಕಾರ್ಯಕ್ರಮವನ್ನು ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಕಲೆಯನ್ನ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿಮ್ಸ್ ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ ರವರು ಹೇಳಿದರು.
ಮನಸ್ಸಿನ ಭಾವನೆಗಳನ್ನು ಸ್ವರವಾಗಿ ಬದಲಾಯಿಸಿ ಹಾಡಿನ ಮುಖಾಂತರ ವ್ಯಕ್ತಪಡಿಸುವುದೇ ಸಂಗೀತ ಎಂದು ಸರ್ಕಾರಿ ಆದರ್ಶ ವಿದ್ಯಾಲಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಮಣಪ್ಪ ಭಜಂತ್ರಿ ರವರು ಹೇಳಿದರು.
ಸಂಗೀತ ಕ್ಷತ್ರಿಯ ವಿಭಿನ್ನವಾಗಿದೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಂಗೀತ ಇಷ್ಟವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕರಾದ ವಿಜಯೇಂದ್ರ ಕ್ಷತ್ರಿಯ ರವರು ಹೇಳಿದರು.
ವೇದಿಕೆಯ ಮೇಲೆ ಶ್ರೀಮತಿ ಡಾ.ನಯನ, ಕನ್ನಡ ಪರ ಹೋರಾಟಗಾರ ಕಪ್ಪಗಲ್ ಚಂದ್ರಶೇಖರ, ಪತ್ರಕರ್ತ ಟಿ ನಾಗಭೂಷಣ,ಕನ್ನಡ ಹೋರಾಟ ಪರ ಸಮಿತಿ ಚಂದ್ರಣ್ಣ,ಜಂಬಣ್ಣ ಗೌಡ ಕಾರ್ಯದರ್ಶಿ ಕೆ.ಆರ್.ಯೆರ್ರೆಗೌಡ
ಉಪಸ್ಥಿತರಿದ್ದರು.
ನಂತರ ಸುಗಮ ಸಂಗೀತವನ್ನು ಶ್ರೀ.ಬಿ.ಖಾಸಿಂ ಸಾಹೇಬ ರವರು ನೆರವೇರಿಸಿ ಕೊಟ್ಟರುಸ್ವಾಗತ ಕೆ.ಆರ್.ಏರ್ರೆಗೌಡ ಪ್ರಾಥನೆ ಶ್ರೀ ಮತಿ ಜ್ಯೋತಿ ,ವಂದನಾರ್ಪಣೆ ಶ್ರೀಮತಿ ವೀಣಾ ಕಾರ್ಯಕ್ರಮದ ನಿರೂಪಣೆ ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಹನುಮಂತ ರವರು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕಲಾವಿದರು,ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಪೋಷಕರು ಪಾಲ್ಗೊಂಡು ಯಶಸ್ವಿಗೊಳಿಸಿದರು.