
ನ. 23 ರಂದು ಭೋವಿ ಸಮಾಜದ ಸಮಾವೇಶ
ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಭೋವಿ ಸಮಾಜದ ಸಂಘಟನೆ, ಶಕ್ತಿ ಪ್ರದರ್ಶನ, ಸಮಾಜದಕುಂದು ಕೊರತಕುರಿತು ಗಮನ ಸೆಳೆಯಲು ಬಾಗಲಕೋಟೆಯಲ್ಲಿ ನ.23 ರಂದು ಸಮಾಜದ ಸಮಾವೇಶ ಹಾಗೂ ಬಾಗಲಕೋಟೆ ಮಠದ ನೂತನ ಕುಠೀರ ಉದ್ಘಾಟನೆ ಏರ್ಪಡಿಸಲಾಗಿದೆ ಎಂದು ಬಾಗಲಕೋಟೆಯ ಸಮಾಜ ಗುರುಪೀಠದ ಮಠಾಧೀಶ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು.
ಅವರು ಸಮಾಜದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಂದು ಶರಣ ಮಹಾಸ್ವಾಮೀಜಿ ಗದ್ದುಗೆ ಮಂಟಪದ ಶಿಲಾನ್ಯಾಸವೂ ಇದೆ. ಕನಿಷ್ಠ 3 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂಡಿ.ಕೆ.ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಅರವಿಂದ ಲಿಂಬಾವಳಿ ಭಾಗವಹಿಸುವರು ಇದೊಂದು ಪಕ್ಷಾತೀತ ಕಾರ್ಯಕ್ರಮ ಎಂದೂ ಹೇಳಿದರು.
ಚಿಕ್ಕ ಚಿಕ್ಕ ಸಂಖ್ಯೆಯಲ್ಲಿ ಹರಿದು ಹೋದ ಬೋವಿ ಸಮಾಜವನ್ನು ಪುನಃ ಕಟ್ಟಬೇಕು. ಉತ್ತರ ಕನ್ನಡದಿಂದ ಕನಿಷ್ಠ 10 ಸಾವಿರ ಬೋವಿ ಸಮುದಾಯದವರು ಸಮಾವೇಶಕ್ಕೆ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ. ಈ ಸಮಾವೇಶದಲ್ಲಿ ಉತ್ತರಕರ್ನಾಟಕದ ಬೋವಿಸ ಮಾಜದ ಸಮಸ್ಯೆ, ಕಲ್ಲಿನ ಕುಲ ಕಸುಬಿನ ಸಮಸ್ಯೆ ಎಲ್ಲ ಚರ್ಚೆ ಮಾಡಲಿದ್ದೇವೆ. ಸಮುದಾಯ ಪ್ರಗತಿಸಾಧಿಸಲು ಅಗತ್ಯವಾದ ಜಾಗೃತಿ ಕೂಡ ಮಾಡಲಾಗುತ್ತದೆ. ಬೋವಿ ಸಮುದಾಯಕೂಡಸಂಸ್ಕೃತಿ, ಸಮನ್ವಯತೆ, ಧಾರ್ಮಿಕ ಅರಿವು, ಆರ್ಥಿಕ ಕ್ರಾಂತಿ ನಮ್ಮ ಆಶಯವಾಗಿದೆ ಎಂದರು. ಶ್ರೇಣೀಕೃತ ವ್ಯವಸ್ಥೆಯಿಂದ ಹೊರಗೆಬರಬೇಕಿದೆ. ಹಂತದವರಿಗೆ ಮೂಢನಂಬಿಕೆ, ಕಂದಾಚಾರ ತುಂಬಲಾಗಿದೆ. ವೈಜ್ಞಾನಿಕ, ವೈಚಾರಿಕತೆ ತಳಹದಿಯ ಮೇಲೆ ಜಾಗೃತಿ ಮೂಡಿಸಬೇಕಾಗಿದೆ. ಮಠಾಧೀಶರು ಧರ್ಮದ ರಕ್ಷಣೆಗೆ ಶಿಷ್ಯರಿದ್ದಲ್ಲಿಗೇ ಹೋಗುವುದು ತಪ್ಪಿಲ್ಲ. ಅರಮನೆ, ಗುರುಮನೆ, ಸೆರೆಮನೆ ಕಟ್ಟಿದ ಸಮುದಾಯಕ್ಕೆ ಸಂಘಟನೆ ಕಟ್ಟುವ ಕಾರ್ಯ ಮಾಡಲಾಗುತ್ತಿದೆ. ನ.23ಕ್ಕೆ ಸಂಘಟನಾ ಸಮಾಜದ ಸಾಂಕೇತಿಕ ಶಕ್ತಿ ಪ್ರದರ್ಶನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರು ಹುಲ್ಲಪ್ಪ ಹುಲ್ಲೂರು ಜಿಲ್ಲಾ ಉಪಾಧ್ಯಕ್ಷರಾದ ರಾಮಣ್ಣ ಅಳವಂಡಿ. ಮಾಜಿ ಸದಸ್ಯರು ನಗರಸಭೆ ರಾಮಣ್ಣ ಪೂಜಾರ ಬಸವರಾಜ್ ಬೋವಿ ತಾಲೂಕು ಅಧ್ಯಕ್ಷರು ಹುಚ್ಚಪ್ಪ ಕ. ಕುಷ್ಟಗಿ ತಾಲೂಕ್ ಅಧ್ಯಕ್ಷರು ಸೂಜಪ್ಪ ತಾಲೂಕು ಉಪಾಧ್ಯಕ್ಷರು ಲಕ್ಷ್ಮಣ ಪೂಜಾರ ರಾಮಣ್ಣ ಅಳವಂಡಿ ಹನುಮಂತ ಕುಷ್ಟಗಿ ಕೃಷ್ಣಮೂರ್ತಿ ಮಲ್ಲಸಮುದ್ರ ಗಿರೀಶ್ ಪೂಜಾರ ಸತ್ಯಪ್ಪ ಬೋವಿ ರಾಮು ಪೂಜಾರ ಕಲ್ಯಾಣ ಕರ್ನಾಟಕ ಅವರು ಇತರರು ಇದ್ದರು.