IMG-20231107-WA0014

           ಬಿಜೆಪಿಗರಿಗೆ ದಮ್ಮು, ತಾಕತ್ತು ಇಲ್ಲ
                   ಸಚಿವ ಕೃಷ್ಣ ಬೈರೇಗೌಡ ಹೇಳಿಕೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ರಾಜ್ಯ ಸರ್ಕಾರದ ಪಾಲಿನ ಹಣ ಕೇಂದ್ರದಿಂದ ಕೊಡಿಸಬೇಕಾದ ಕೊಡಿಸುವ ವಿಚಾರದಲ್ಲಿ ಬಿಜೆಪಿಗರಿಗೆ ದಮ್ಮು ಇಲ್ಲ, ತಾಕತ್ತು ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ದೂರಿದರು.
ಅವರು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ತಾಕತ್ತಿದ್ದರೇ ಹೋಗಿ ಇವರು, ಕೇಂದ್ರದ ನಾಯಕರ ಮುಂದೆ ಹೋಗಿ ಬರ ಪರಿಹಾರ ಬಿಡುಗಡೆ ಮಾಡಿಸಲಿ. ಬರ ಪ್ರವಾಸದ ಹೆಸರಿನಲ್ಲಿ ಪ್ರಚಾರ ಬೇಡ ಎಂದರು.
ದೆಹಲಿಗೆ ಹೋಗಲು ರಾಜ್ಯದ ಬಿಜೆಪಿ ಸಂಸದರಿಗೆ ಧೈರ್ಯ , ಶಕ್ತಿ ಇಲ್ಲ. ಭಾಷಣದಲ್ಲಿ ಮಾತ್ರ ಧಮ್ಮು ಹಾಗೂ ತಾಕತ್ತು ಬಗ್ಗೆ ಮಾತನಾಡುತ್ತಾರೆ.ಕೇಂದ್ರದ ನಾಯಕರ ಮುಂದೆ ಹೋಗಿ ಬರ ಪರಿಹಾರ ಬಿಡುಗಡೆ ಮಾಡಿಸಲಿ ಎಂದು ಸವಾಲು ಎಸೆದರು.
ಬಿಜೆಪಿಗರು ಪ್ರಚಾರಕ್ಕಾಗಿ ಬರ ಅಧ್ಯಯನ ಮಾಡುತ್ತಿಲ್ಲ.ಪ್ರಚಾರ ಮಾಡಿ ಜನರ ಕಣ್ಣಿಗೆ ಮಣ್ಣು ಎರೆಚುವ ಕೆಲಸ ಮಾಡುತ್ತಿದ್ದಾರೆ.ನಾವು ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ರಾಜ್ಯದ ರೈತರ ಹಕ್ಕು ಕೇಳುತ್ತಿದ್ದೇವೆ. ಆ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ ಬಿಜೆಪಿ ನಾಟಕ ಮಾಡುತ್ತದೆ ಎಂದರು.
ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅವರು ಆರೋಪ, ಪ್ರಚಾರ ಮಾಡುವುದರಿಂದ ಹಣ ಬರುವುದಿಲ್ಲ. ಕೇಂದ್ರದಿಂದ ಮಾತನಾಡಿಸಿ, ಬರ ಪರಿಹಾರ ಕೊಡಿಸಲಿ.

ರಾಜ್ಯ ಸರಕಾರದಿಂದ 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರ ಪರಿಹಾರ ಬಿಡುಗಡೆಗೆ ಕೇಂದ್ರದ ನಾಯಕರನ್ನು ಭೇಟಿಗೆ ಪ್ರಯತ್ನ ಮಾಡಿದರೂ ಅವಕಾಶ‌ ಕೊಡುತ್ತಿಲ್ಲ.
ರಾಜ್ಯದಲ್ಲಿ ಮೂರು ಲಕ್ಷ ಕುಟುಂಬಗಳು ಈಗಾಗಲೇ ೧೦೦ ಮಾನವ ದಿನ ಪೂರ್ಣಗೊಳಿಸಿವೆ. ೧೫೦ಕ್ಕೆ ವಿಸ್ತರಣೆ ಮಾಡುವಂತೆ ಹೇಳಿದರೂ ಕೇಂದ್ರ ಆದೇಶ ಮಾಡಿಲ್ಲ.
ಬರಗಾಲ ಇರಯವುದರಿಂದ ನರೇಗಾ ಹಣ ೬೫೦ ಕೋಟಿ ಹಣ ಪಾವತಿಯಾಗುತ್ತಿದೆ. ಬಿಡುಗಡೆ ಮಾಡದಿದ್ದರೇ ಜನ ಗುಳೆ ಹೋಗುತ್ತಾರೆ.ಕೇಂದ್ರ ಮಂತ್ರಿಗಳು ಸಿಗದ ಕಾರಣ ಅಧಿಕಾರಿಗಳನ್ನು ಭೇಟಿಯಾಗಿದ್ದೇವೆ. ರಾಜ್ಯಕ್ಕೆ ಬರಬೇಕಾದ ಹಣ ಬಿಡುಗಡೆ ‌ಮಾಡುವಂತೆ ಹೇಳಿದ್ದೇವೆ.ಹಣ ಬಿಡುಗಡೆಗೊಳಿಸುವಂತೆ ಸೆಪ್ಟೆಂಬರ್ ನಿಂದ ಹತ್ತು ಪತ್ರಗಳಿಂದ ಬರೆದರೂ ಕೇಂದ್ರದಿಂದ ಉತ್ತರ ಇಲ್ಲ, ಸ್ಪಂದನೆ ಸಿಕ್ಕಿಲ್ಲ ಬರದಲ್ಲೂ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!