
ಬಳ್ಳಾರಿಯ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮನವಿ
ಬೆಳಗಾವಿಯ ಅಮಾನವಿಯ ಪ್ರಕರಣ
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ , ಆಸ್ತಿಪಾಸ್ತಿ ಮುಟ್ಟುಗೊಲಿಗೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೧೨- ಬೆಳಗಾವಿ ಜಿಲ್ಲೆಯ ಯುವಕ ಯುವತಿ ಇಬ್ಬರು ಪ್ರೀತಿಸಿಕೊಂಡು ಓಡಿ ಹೋಗಿದ್ದರಿಂದ ಯುವಕನ ತಾಯಿಯನ್ನು ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಂತ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಿ ಅವರ ಆಸ್ತಿಪಾಸ್ತಿ ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಳ್ಳಾರಿಯ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಮನವಿಯಲ್ಲಿ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಯುವಕ ಯುವತಿ ಇಬ್ಬರು ಪರಸ್ಪರ ಪ್ರೀತಿಸಿಕೊಂಡಿದ್ದರಿಂದ ಯುವತಿ ಯುವಕನೊಂದಿಗೆ ದಿನಾಂಕ 10./12/.2023 ರಂದು ಮದುವೆ ಆಗಲಿಕ್ಕಾಗಿ ರಾತ್ರಿ ಓಡಿ ಹೋಗಿದ್ದರಿಂದ ಮರುದಿನ ಸೋಮವಾರ ಯುವತಿಯ ಕುಟುಂಬಸ್ಥರು 15 ರಿಂದ 20 ಜನ ಗುಂಪು ಸೇರಿಕೊಂಡು ಯುವಕನ ಮನೆಗೆ ಹೋಗಿ ಗಲಾಟೆ ಮಾಡಿ ಮನೆಯನ್ನು ಧ್ವಂಸೆಗೊಳಿಸಿ ಯುವಕನ ತಾಯಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಬತ್ತಲೆಗೊಳಿಸಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಿ ನಂತರ ಸಾರ್ವಜನಿಕ ಸ್ಥಳದಲ್ಲಿ ಇದ್ದಂತ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹೊಡೆತ ಬಡೆತಕ್ಕೆ ಮನನೊಂದು ಹೋಗಿದ್ದರಿಂದ ಹೀನಾ ಕೃತ್ಯ ಏಸಗಿದ್ದರಿಂದ ಮಾನವೀಯತೆಯ ನಾಗರಿಕರು ಇಂತಹದರಿಂದ ತಲೆ ತಗ್ಗಿಸುವಂತಾಗಿದೆ ಹಿನ ಕೃತ್ಯ ಮಾಡಿದವರ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸರ್ಕಾರ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಿ ಅವರಿಗೆ ಮರಣದಂಡನೆಗೆ ಒಳಪಡಿಸಿ ಆರೋಪಿಗಳ ಆಸ್ತಿಪಾಸ್ತಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ನೊಂದ ಮಹಿಳೆಗೆ ಸರ್ಕಾರ ರಕ್ಷಣೆ ನೀಡಿ ಅವರಿಗೆ ಚಿಕಿತ್ಸೆಯ ಪರಿಹಾರ ಒದಗಿಸಿಕೊಟ್ಟು ಮುಂದೆ ಕೂಡ ಇಂತಹ ಘಟನೆಗಳು ಸರಕಾರ ಎಚ್ಚರಿಕೆ ವಹಿಸಿಕೊಂಡು ಆಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಧರ್ಮಣ್ಣ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ್ಜಿ, ಜಿಲ್ಲಾ ಕಾರ್ಯಧ್ಯಕ್ಷ ಸಿ ಹನುಮೇಶ್ ಕಟ್ಟಿಮನಿ,ಕರ್ನಾಟಕ ರಿಪಬ್ಲಿಕನ್ ಸೇನಾ ಜಿಲ್ಲಾಧ್ಯಕ್ಷ ಹೊನ್ನಳ್ಳಪ್ಪ ಒಡ್ಡು,ಚಲವಾದಿ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುರಾಜ್ ಬಿ ಗೋನಾಳ್ ಇತರರು ಇದ್ದರು.