IMG-20240329-WA0007

ಬೇವೂರ ಗ್ರಾಮೀಣ ಬ್ಯಾಂಕ್ ಗ್ರಾಹಕರ ಗೋಳು ಕೇಳುವವರು ಯಾರು

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,29- ತಾಲೂಕಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬೇವೂರು ಶಾಖೆಯಲ್ಲಿ ಗ್ರಾಹಕರು ಪ್ರತಿದಿನ ಹಣ, ಪಡೆಯಲು ಮತ್ತು ಜಮಾ ಮಾಡಲು ಪರದಾಟ ಹಣದ ಸಮಸ್ಯೆ, ಪ್ರಿಂಟಿಂಗ್ ಕೇಳಲು ಹೊದರೆ ಹೊರಗಡೆ ಆನ್ ಲೈನನಲ್ಲಿ ತೆಗೆದುಕೊಳ್ಳುವಂತೆ ಹೇಳುವದು ಪಾಸ್ ಬುಕ್ ಕೇಳಿದರೆ ಇಲ್ಲ ಇನ್ನೂಬಂದಿಲ್ಲ ನಾಳೆ ಬನ್ನಿ ಎರಡು ದಿನ ಬಿಟ್ಟು ಬನ್ನಿ ಎನ್ನುವದು 50- ಸಾವಿರ ಮೆಲ್ಪಟ್ಟು ಹಣ ಕೇಳಿದರೆ ಹಣ ಇಲ್ಲ ಎನುವದು ಸಾಮಾನ್ಯವಾಗಿದೆ ಇದರಿಂದ ಬೇವೂರ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ಮುರಡಿ ಗ್ರಾಮ ಪಂಚಾಯತಿ ಮಂಡಲಮರಿ, ತರಲಕಟ್ಟಿ, ಮುರಡಿ, ನರಸಾಪೂರ, ಮುರುಡಿತಾಂಡ, ಬೇವೂರ ಗ್ರಾಮ ಪಂಚಾಯತಿಯ ಬೇವೂರ, ಕೋಳಿಹಾಳ, ಮ್ಯಾದನೇರಿ, ವಣಗೇರಿ ಗ್ರಾಮ ಪಂಚಾಯತಿಯ ವಣಗೇರಿ, ಗುತ್ತೋರ, ಲಕಮನಗುಳೆ, ಮತ್ತು ಹುಣಸಿಹಾಳ ಗ್ರಾಮಸ್ಥರು ದಿನಾಲೂ ಬ್ಯಾಂಕ್ ಗೆ ಬರುವದು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಇವತ್ತಿಗೂ ಪಾಸ್ ಪುಸ್ತಕ ಕೊಡದೆ ಒಂದು ಬಿಳಿ ಹಾಳೆಯಲ್ಲಿ ಪ್ರಿಂಟ್ ಕೊಡುತ್ತಾರೆ ಸಾರ್ವಜನಿಕರಿಗೆ ಪಾಸ ಬುಕ್ ಇಲ್ಲ ಎಂದು ಚೀಟಿಯಲ್ಲಿ ಬರೆದು ಬ್ಯಾಂಕ್ ಅಂಕೌಂಟ ನಂಬರ ಅವರು ಅದನ್ನು ಕಳೆದುಕೊಂಡರೆ ಕಥೆ ಮುಗಿಯಿತು.

ದಿನಾಲು 100 ಪ್ರಿಂಟಿಂಗ್ ಹಾಕಿದರೆ ಮಿಷನ್ ಕೆಲಸ ಮಾಡುವದಿಲ್ಲ ಬೇರೆ ವ್ಯವಸ್ಥೆ ಮಾಡಬೇಕು ಎಂದರೆ ಮಿಷನ್ ತರಲು ಹಣ ಯಾರು ಕೊಡುತ್ತಾರೆ ನಮ್ಮ ಬ್ಯಾಂಕ್ ಕೊಡುವದಿಲ್ಲ ವೆನ್ನುದಾದರೆ ಕಛೇರಿ ಕರ್ಚುಕೊಡುವದಿಲ್ಲ ಎಂದು ಹೇಳುತ್ತಾರೆ ಎನ್ನುವ ಮಾತುಗಳನ್ನು ಸಿಬ್ಬಂದಿಗಳು ಹೇಳುತ್ತಾರೆಂದು ಗ್ರಾಮಸ್ಥರು ತಿಳಿಸಿದರು.

ಹಣ ಡ್ರಾ ಮಾಡಲು ಬಂದವರು ದಿನಾಲು 1 ರಿಂದ 2 ತಾಸು ವರಗೆ ಸಮಯ ಕಾಯಬೇಕು ಕೇಲಸ ವೇಗವಿರುವದಿಲ್ಲ ಸಾರ್ವಜನಿಕರು ಬೇಗ ಕೊಡಿ ಎಂದರೆ ಅವರ ಜೊತೆಗೆ ಸಿಬ್ಬಂದಿಗಳು ಜಗಳ ಮಾಡುತ್ತಾರೆ ನಾನು ಮೂರರಿಂದ ನಾಲ್ಕು ದಿನಗಳಾಯಿತೆಂದು ಪ್ರತ್ಯಕ್ಷ ದರ್ಶಿಗಳು ಕಂದಕೂರಪ್ಪ ಹರಿಜನ ಹೇಳುತ್ತಾರೆ ಬ್ಯಾಂಕ್‌ನಲ್ಲಿ ನೂಕುನುಗ್ಗಲು ಹೆಚ್ಚಾಗಿದೆ.

ಇಲ್ಲಿರುವ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ತೊಂದರೆ ಅನುಭವಿಸುವಂತಾಗಿದೆ ಇಲ್ಲಿ ಬ್ಯಾಂಕ್ ಕಛೇರಿ ಚಿಕ್ಕದಾಗಿರುವದರಿಂದ ಬ್ಯಾಂಕ ವ್ಯವಹಾರ ಮಾಡಲು ಆಗಮಿಸುವ ಗ್ರಾಹಕರಿಗೆ ನಿಲ್ಲಲು ಕುಳಿತು ಕೊಳ್ಳಲು ಸ್ಥಳವೆ ಇಲ್ಲದಂತಾಗಿದೆ.

ಪ್ರತ್ಯೇಕವಾಗಿ ದೊಡ್ಡದಾದ ಕಛೇರಿ ನಿರ್ಮಾಣ ಮಾಡಿಕೊಡ ಬೇಕು. ಬ್ಯಾಂಕ್ ಮ್ಯಾನೇಜರ್ ಸಾರ್ವಜನಿಕರು ಪೇಪರನವರಿಗೆ ವರದಿ ಮಾಡುತ್ತೆವೆ ಎಂದರೆ ಏನಾದರು ಮಾಡಿ ಪೇಪರಿಗೆ ಬಂದರೆ ನಮ್ಮನ್ನು ಎನು ಮಾಡುತ್ತಾರೆ ಏನು ಮಾಡಕಾಗಲ್ಲ ಎಂದು ದುರಂಕಾರದ ಮಾತುಗಳನ್ನು ಆಡುತ್ತಾರೆ.

ಸಿಬ್ಬಂದಿಯು ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ ಅನಕ್ಷರಸ್ಥ ಗ್ರಾಹಕರು ಬಂದರೆ ಅವರ ಗೋಳು ಹೇಳತೀರದು ಅವರಿಗೆ ಯಾವೂದೇ ರೀತಿ ಮಾಹಿತಿಯನ್ನು ಸಿಬ್ಬಂದಿಗಳು ಸರಿಯಾಗಿ ನೀಡುತ್ತಿಲ್ಲ ಆದರೆ, ಅವರ ಬಳಿ ಇರುವ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಪಾಸ್ ಬುಕ್ ಪ್ರಿಂಟಿಂಗ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಸಣ್ಣ ಕೆಲಸಕ್ಕೆ ಎರಡರಿಂದ ಮೂರು ಸಲ ಬರಬೇಕು, ದಿನಾಲು ಹಿಗೇ ನೆಡೆದರೆ ಸಾರ್ವಜನಿಕರ ಗೋಳು ಕೇಳುವವರು ಯಾರು ಎಂದು ಗ್ರಾಮ ಪಂಚಾಯತ ಸದಸ್ಯ ಶೇಖರಪ್ಪ ನಾಯಕ, ಮಹಮ್ಮದ್ ಸಾಬ ಕೋಳಿಹಾಳು ಹೇಳುತ್ತಾರೆ.

ಬ್ಯಾಂಕ್ ಪಾಸ ಪುಸ್ತಕಗಳು ಸಹ ಲಭ್ಯವಿಲ್ಲ ಸ್ಥಳದಲ್ಲಿ ಎಟಿಎಂ ವ್ಯವಸ್ದೆಯಿಲ್ಲ ಬ್ಯಾಂಕ್ ವ್ಯವಹಾರಕ್ಕೆ ಬಂದರೆ ದಿನವಿಡಿ ಕಾಯುವಂತ ಪರಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಕರ್ನಾಟಕ ಗ್ರಾಮಿಣ ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಸರಾಗವಾಗಿ ವ್ಯವಹಾರ ಮಾಡಲು ಪ್ರತ್ಯೇಕ ದೋಡ್ಡ ಕಛೇರಿ ಮಾಡಬೇಕು ಮತ್ತು ಹೆಚ್ಚಿನ ಸಿಬ್ಬಂದಿಗಳ ನೇಮಕ ಮಾಡಿಕೊಡಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಸೇರಿದಂತೆ ಮತ್ತು ಇತರರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!