
ಭಕ್ತಿಯ ಮಾರ್ಗದಿಂದ ಪಾಪ ಪರಿಹಾರ
ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಗಳು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕಲಿಯುಗದಲ್ಲಿ ಮನುಷ್ಯ ಜನ್ಮದಲ್ಲಿ ನಾವೆಲ್ಲರೂ ಬೆಟ್ಟದಷ್ಟು ಪಾಪ ಮಾಡಿ ಇರುವೆಯಷ್ಟು ಮಾತ್ರ ಪುಣ್ಯದ ಕೆಲಸಗಳನ್ನು ಮಾಡಿರುತ್ತೇವೆ. ಬಗವಂತನನ್ನು ಒಲಿಸಿಕೊಳ್ಳಲು ಭಕ್ತಿಯ ಮಾರ್ಗವೇ ಪ್ರಧಾನ ಎಂದು ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರು ಕೊಪ್ಪಳದ ಶ್ರೀ ರಾಯರ ಮಠದಲ್ಲಿ ಲಕ್ಷ ತುಳಸಿ ಅರ್ಚನೆ ನಡೆಯಲಿರುವ ಹಿನ್ನಲೆಯಲ್ಲಿ ಸೋಮವಾರ ಅನುಗ್ರಹ ಆಶೀರ್ವಚನ ನೀಡಿದರು.
ದೇವರಿಗೆ ಅಲ್ಪ ಕಾಣಿಕೆಯಾದರೂ ಅದನ್ನು ಭಕ್ತಿಯಿಂದ ಸಮರ್ಪಿಸಬೇಕು.
ಮಾಡುವ ಕೆಲಸ ಹಾಗೂ ಭಕ್ತಿ ಇಲ್ಲದೆ ಐಶ್ವರ್ಯಗಳನ್ನು ದೇವರಿಗೆ ಅರ್ಪಿಸಿ ಭಕ್ತಿಯೇ ಇಲ್ಲವಾದರೆ ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಭಕ್ತಿಯಿಲ್ಲದೆ ಎನೆ ಅರ್ಪಿಸಿದ ರು ಅದು ದೇವರಿಗೆ ತಲುಪುವುದಿಲ್ಲಾ ಎಂದರು.
ವಿಶೇಷ; ಈ ಕಾರ್ತೀಕ ಮಾಸದಲ್ಲಿ ತುಳಸಿ ಅರ್ಚನೆಗೆ ವಿಶೇಷ. ಈ ಮಾಸದಲ್ಲಿ ಅರ್ಚನೆ ಮಾಡುವುದರಿಂದ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರಿಗೆ ಏನೇ ಸಮರ್ಪಣೆ ಮಾಡಬೇಕಾದರೂ ತುಳಸಿಸಹ ಅರ್ಪಿಸಬೇಕು ಎಂದರು.
ಸ್ವಾಗತ : ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳ ಅವರಿಗೆ ರಾಯರ ಮಠದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಠದ ಪ್ರಧಾನ ಅರ್ಚಕ ರಘು ಪ್ರೇಮಾಚಾರ್ಯ, ಜಗನ್ನಾಥ ಹುನಗುಂದ, ವೇದವ್ಯಾಸಚಾರ್ ಹಲಗೇರಿ ಸೇರಿದಂತೆ ಅನೇಕರು ಇದ್ದರು.