
ಭವಿಷ್ಯದ ಭರವಸೆಯ ಯುವ ನಾಯಕ ಸಂಜಯ್ ಬೈರತಿ
: ಕುಬೇರ ದಲ್ಲಾಲಿ
ಕರುನಾಡ ಬೆಳಗು ಸುದ್ದಿ
ವಿಜಯನಗರ , 16- ಬೆಂಗಳೂರಿನ ನಗರ ಅಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರ ಮಗನಾದ ಹೆಬ್ಬಾಳ ಕ್ಷೇತ್ರದ ಜನಪ್ರಿಯ ಯುವ ನಾಯಕರಾಗಿರುವ ಸಂಜಯ್ ಬೈರೇತಿ ಅವರ 26ನೇ ಹುಟ್ಟುಹಬ್ಬ ಅಂಗವಾಗಿ ಅಹಿಂದ ಯುವ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ್ ಬೈರತಿ ಅವರು. ನೀವೆಲ್ಲರೂ ನೆನ್ನೆ ರಾತ್ರಿಯಿಂದ ಇಂದ ಬೆಳಗಿನ ವರೆಗೆ ಎಲ್ಲಾ ಫ್ಲೆಕ್ಸ್ ಮತ್ತು ಫೇಸ್ಬುಕ್ ವಾಟ್ಸಪ್ ಗಳಲ್ಲಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಿರೋದು ನನಗೆ ಖುಷಿ ತಂದಿರ್ತಕ್ಕಂತ ವಿಚಾರ. ಹಾಗಾಗಿ ಯಾವಾಗಲೂ ನಿಮ್ಮ ಪರ ಇರುತ್ತೇನೆ. ನಿಮ್ಮ ಧ್ವನಿಯಾಗಿ. ನಾನು ಇರುತ್ತೇನೆ ಎಂದು ಹೇಳಿದರು .
ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು ಅಹಿಂದ ಯುವ ಅಧ್ಯಕ್ಷರಾದ ಕುಬೇರ ದಲ್ಲಾಲಿ. ಅವರು ಹುಟ್ಟುಹಬ್ಬ ಅಂಗವಾಗಿ ಶುಭ ಕೋರಿದರು ಮಾತನಾಡುತ್ತಾ ದಕ್ಷನಾದವನಿಗೆ ಒಂದು ಸಮರ್ಥ, ನಿರ್ದಿಷ್ಟ, ಸ್ಪಷ್ಟ, ನಿಖರವಾದ ದೃಷ್ಟಿಕೋನ ಇರುತ್ತದೆ. ನಾಯಕನಾದವನ ಕಾರ್ಯ ಕ್ಷಮತೆಯೂ ದಕ್ಷತೆಯಿಂದ ಕೂಡಿರುತ್ತದೆ. ಸಾಮಾನ್ಯ ಮಿತಿಗಳನ್ನು ಮೀರಿದ ವ್ಯಕ್ತಿತ್ವ ಹೊಂದಿದವನು ಮಾತ್ರ ನಿಜವಾದ
ಜನ ನಾಯಕನಾಗುತ್ತಾನೆ ಎಂಬ ನಿಲುವು ಸಂಜಯ್ ಬೈರತಿ ಅವರದು.
ಜನರ ಸೇವೆ ಮಾಡಲು ಅಧಿಕಾರವೇ ಬೇಕಿಲ್ಲ. ಇಚ್ಛಾಶಕ್ತಿ, ಸಾಮಾಜಿಕ ಮನೋಭಾವ ಇದ್ದರೆ ಸಾಕು. ಜತೆಗೆ ಕುಟುಂಬದ ಹಿರಿಯರು ಹಾಕಿಕೊಟ್ಟ ಪರಂಪರೆ ಮುನ್ನಡೆಸಬೇಕೆಂಬ ಹಂಬಲವೊಂದಿದ್ದರೆ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಬಹುದು. ಅಂತಹ ಸಾಲಿಗೆ ಹೆಬ್ಬಾಳ ಕ್ಷೇತ್ರದ ಭವಿಷ್ಯದ ಭರವಸೆಯ ನಾಯಕರಾಗಿ ನಿಲ್ಲುತ್ತಾರೆ ಸಂಜಯ್ ಬೈರತಿ
ಇವರ ಹೆಸರೀಗ ಎಲ್ಲೆಡೆ ಚಿರಪರಿಚಿತ. ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ, ಸಮಾಜ ಸೇವೆ ಬಿಟ್ಟವರಲ್ಲ. ತಾವೇ ನಾಯಕರಾಗಿ ಬೆಳೆಯಬೇಕೆಂಬ ಹಂಬಲವೂ ಇಲ್ಲ. ಹಲವಾರು ನಾಯಕರಾದವರ ಹೆಗಲಿಗೆ ಹೆಗಲು ಕೊಟ್ಟು ಸಂಘಟನೆ ಮಾಡಿದವರು. ಇಂತಹ ಯುವ ನಾಯಕ, ಸದ್ಯ ಹೆಬ್ಬಾಳ ಕ್ಷೇತ್ರದ ಯುವಕರ, ಜನರ ಕಣ್ಣಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ
ಎಂದರು.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಕರುಣಿಸಿ ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿ ನಾಗರಾಜ್. ವಿರಾಟ್ ಪಟೇಲ್. ಬಿಸಾಟಿ.ತಾಯಪ್ಪ ಗಂಟೆ ಉಮೇಶ್. ದಮ್ಮೂರ್ ಮಂಜುನಾಥ್.. ಹಾಗೂ ಇನ್ನಿತರಿದ್ದರು.