
ಮಂಗಳೂರು ಆರೋಗ್ಯ ಕೇಂದ್ರದಲ್ಲಿ
ಉಚಿತ ಶ್ರವಣ ತಪಾಸಣಾ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೯ – ಕಿವಿ ಕೇಳದ ಮಕ್ಕಳು & ವೃದ್ದರಿಗೆಲ್ಲ ಈ ದಿನ ಕಿವಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವದು ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವದು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ರವೀಂದ್ರನಾಥ ಹೇಳಿದರು.
ಅವರು ಕುಕನೂರ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಜರುಗಿದ ಶ್ರವಣ ತಪಾಸಣಾ ಶಿಬಿರ ಉದ್ಗಾಟಿಸಿ ಮಾತನಾಡುತ್ತಿದ್ದರು.
ಈಗಾಗಲೆ ಜಿಲ್ಲೆಯಲ್ಲಿ 10 ಮಕ್ಕಳಿಗೆ ಉಚಿತವಾಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು 6 ವರ್ಷದೊಳಗಿನ ಕಿವಿ ಕೇಳದ ಮಕ್ಕಳಿಗೆ ಉಚಿತ ಶ್ರವಣ ಸಾಧನ ನೀಡಲಾಗುವದು ಎಂದರು.
ಕಿವಿ ಮೂಗು ಗಂಟಲು ತಜ್ಞರಾದ ಡಾ ಅವಿನಾಶರವರು ಮಾತನಾಡಿ ಕಿವಿಗೆ ಎಣ್ಣೆ, ಕಡ್ಡಿ ಹಾಕಬಾರದು, ಹತ್ತಿಕಡ್ಡಿ (ಇಯರಬಡ್) ಯಿಂದ ಸ್ವಚ್ಚ ಮಾಡುವ ಪ್ರಯತ್ನ ಮಾಡಬಾರದು ಎಂದ ಅವರು ಕಿವಿ ಸೋರುವಿಕೆ ಇದ್ದರೆ ಕೂಡಲೇ ತಪಾಸಣೆ ಮಾಡಿಸಿ ಕೊಂಡಲ್ಲಿ ಕಿವುಡತನ ಆಗುವದನ್ನು ತಡೆಯಬಹುದು ಎಂದು ತಿಳಿಸದ ಅವರು ಕಿವಿ ಚಕಿತ್ಸೆ ವೇಳೆ ಫಾಲೋ ಅಪ್ ಬರಲು ಹೇಳಿದಾಗಲೆಲ್ಲ ಬಂದು ಸಂಪೂರ್ಣ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.ಶಿಬಿರದಲ್ಲಿ 6 ವರ್ಷದೊಳಗಿನ 18 ಮಕ್ಕಳು ಸೇರಿ ಒಟ್ಟು151 ಕಿವಿ ತಪಾಸಣೆ & 65 ಆಡಿಯೋಗ್ರಾಫ್ ಮಾಡಲಾಯಿತು.
ಅರವಳಿಕೆ ತಜ್ಞರಾದ ಡಾ ವಿ.ಜಿ.ಹಳ್ಳಳ್ಳಿ, ಮಕ್ಕಳ ತಜ್ಞರಾದ ಡಾ ಮಂಜುನಾಥ,ಆಡಿಯೋಲಾಜಿಸ್ಟ್ ಬಿಂದು, ಗ್ರಾಮದ ಪ್ರಮುಖರಾ ಎಮ್.ಬಿ.ಅಳವಂಡಿ ಆರೋಗ್ಯ ಇಲಾಖೆಯ ಗೌರಮ್ಮ, ಅಮರೇಶ, ವೀರಭದ್ರಪ್ಪ, ಅರವಿಂದ, ಗೀತಾ, ರೇಣುಕಾ, ವೀರಮ್ಮ, ಕುಸುಮಾ, ಉಮಾದೇವಿ ಜ್ಯೋತಿ, ಸುಮಾ, ಲಕ್ಷ್ಮಿ, ಗಾಯತ್ರಿ ಸಬಿನಾ, ಲಕ್ಷ್ಮಣ, ಮಾರುತಿ, ಶ್ರೀಕಾಂತ, ಗವಿಸಿದ್ದಪ್ಪ, ರತ್ನಮ್ಮ & ಸಾವಿತ್ರಿ ಉಪಸ್ಥಿತರಿದ್ದರು.