
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಿಂದ
ಶ್ರೀಪದ್ಮನಾಭತೀರ್ಥರ ಪೂರ್ವ ಸಂಭ್ರಮದ ಆರಾಧನೆ
ಕರುನಾಡ ಬೆಲಗು ಸುದ್ದಿ
ಕೊಪ್ಪಲ, ೧೦- ಜಿಲ್ಲೆಯ ಮಧ್ವ ಪರಂಪರೆಯ ಕ್ಷೇತ್ರ ಆನೆಗೊಂದಿಯ ನವ ವೃದಾವನದಲ್ಲಿ ಶ್ರೀ ರಾಘವೇಂದ್ರ ಮಠದಿಂದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪೂರ್ವಾರಾಧನೆ ಸಂಭ್ರಮದಿಂದ ಜರುಗಿತು.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಡಿ10 ಪೂರ್ವಾರಾಧನೆ, ಡಿ 11 ಮಧ್ಯಾರಾಧನೆ ಮಧ್ಯಾಹ್ನದವರೆಗೆ ಪೂಜೆಗೆ ಶ್ರೀಮಠಕ್ಕೆ ನಾಯ್ಯಾಲಯ ಅನುಮತಿಯಂತೆ, ರವಿವಾರ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದ ವತಿಯಿಂದ ಶ್ರೀ ಪದ್ಮನಾಭ ತಿರ್ಥರ 700ನೇ ವರ್ಷದ ಆರಾಧನಾ ಮಹೋತ್ಸವ ಜರುಗುತ್ತಿದೆ.
ವಿಶೇಷ ಅಲಂಕಾರ: ಶ್ರೀ ಪದ್ಮನಾಭತೀರ್ಥರ ಮೂಲ ವೃಂದಾವನವು ಪೂರ್ವಾರಾಧನೆ ಹಿನ್ನೆಲೆ ಹಸಿರು ಮಂಟಪದಿಂದ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ಬೆಳ್ಳಗೆ ಶ್ರೀಪದ್ಮನಾಭತೀರ್ಥರ ಮೂಲ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಶ್ರೀಗಳಿಂದ ಮುದ್ರಾಧಾರಣೆ, ಮೂಲರಾಮದೇವರ ಸಂಸ್ಥಾನ ಪೂಜೆ, ಹಸ್ತೋದಕ , ಅಲಂಕಾರ ಬ್ರಾಹ್ಮಣ ಸಮಾರಾಧನೆ, ಭಕ್ತಾದಿಗಳಿಗೆ ತೀರ್ಥಪ್ರಸಾದ ಜರುಗಿತು. ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಭಕ್ತರಿಗೆ ಆಶೀರ್ವದಿಸಿದರು.