
ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಕರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೩- ತರಗತಿಯಲ್ಲಿ ಸಾಮಾಜಿಕವಾಗಿ ಉಪಯುಕ್ತ ಉತ್ಪಾದಕ ಕಾರ್ಯವನ್ನು ಮಕ್ಕಳೆದುರೇ ಮಕ್ಕಳನ್ನು ಬಳಸಿyಕೊಂಡು ಮಾಡುವುದರಿಂದ ಕಲಿಕೆ ಕ್ರಿಯಾತ್ಮಕ ಹಾಗೂ ಸೃಜನಶೀಲತೆಯಿಂದ ಕೂಡಿರುತ್ತದೆ ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳ ಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಶಿಕ್ಷಕ ರಾಮಾಂಜಿನೇಯ ತಮ್ಮ ತರಗತಿ ಮಕ್ಕಳಿಗೆ ಪೇಪರ್ ಸಹಾಯದಿಂದ ಟೋಪಿ, ಬುಟ್ಟಿಯನ್ನು ತಯಾರಿಸಿ, ಪ್ರದರ್ಶನ ಗೊಳಿಸಿದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ಹಸ್ತದ ಸಹಾಯದಿಂದ ತಯಾರಿಸಿರುವುದರಿಂದ ಬಹಳ ಸುಂದರವಾಗಿವೆ.
ನೈಜತೆಯನ್ನು ಹೊಂದಿವೆ.ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ.ಈ ರೀತಿಯ ಕಲಿಕೆ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.ಮಕ್ಕಳು ಆನಂದದಿಂದ ಕಲಿತು. ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ ಜೊತೆಗೆ 1986ರ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಎಸ್. ಯು.ಪಿ.ಡಬ್ಲ್ಯೂ. ಬಗ್ಗೆ ಹಾಗೂ ಕರ ಕುಶಲ ಶಿಕ್ಷಣ ಕುರಿತು ಹೆಚ್ಚು ಒತ್ತು ನೀಡಿದೆ ಎಂದು ಹೇಳಿ, ಶಿಕ್ಷಕರನ್ನು ಮಕ್ಕಳನ್ನು ಪ್ರಶಂಸಿಸಿದರು.