470b8bb2-6e27-4fe5-a889-6e77c914d903

  ಮಹಾ ದಾಸೋಹ ಸೇವೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ,22- ದಕ್ಷಿಣ ಭಾತರದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನು ಕಾಣುವ, ಸದ್ದು ಗದ್ದಲವಿಲ್ಲದೆ ಅನ್ನ, ಅಕ್ಷರ, ಆಧ್ಯಾತ್ಮ ಹಾಗೂ ಆರೋಗ್ಯ ದಾಸೋಹಗೈಯುತ್ತ ಭಕ್ತರ ಜ್ಞಾನ ಮತ್ತು ಹಸಿವಿನ ಅಂಗಳಕ್ಕೆ ಕೃಪೆಯಾಗುವ ಕೈಂಕರ್ಯ ಶ್ರೀ ಗವಿಮಠವು ಮಾಡುತ್ತಿದೆ. ೩೫೦೦ ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಆರಂಭಿಸಿ ದಾಸೋಹ ಪರಂಪರೆಯನ್ನು ನಿರಂತರವಾಗಿಸಿಕೊAಡು ಬಂದಿದೆ.ಕಳೆದ ವರ್ಷದಿಂದ ೬ ಎಕರೆ ಪ್ರದೇಶ ವಿಸ್ತಾರಗೊಂಡಿದೆ.ಸುಮಾರು ಸಾವಿರ ಭಕ್ತಾದಿಗಳು ಏಕಕಾಲದಲ್ಲಿ ಪ್ರಸಾದ ಸೇವಿಸಲು ಸಜ್ಜಾಗಿದೆ.ಜನದಟ್ಟಣೆಯಾಗದಂತೆ ಇರಲು ಪ್ರತ್ಯೇಕ ಮಹಾದ್ವಾರ, ವಿಶಾಲವಾದ ಮಾರ್ಗ ದಾರಿ ವ್ಯವಸ್ಥೆ ಮಾಡಿದ್ದು ಈ ದಾಸೋಹದ ವಿಶೇಷತೆಯಾಗಿದೆ.  ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ದಿನಾಂಕ ೨೩.೦೧.೨೦೨೪ ಬುಧವಾರದಿಂದ ದಿನಾಂಕ ೦೯-೦೨-೨೦೨೪ರ ಶುಕ್ರವಾರ ಅವರಾತ್ರಿ ಅಮಾವಾಸ್ಯೆಯವರೆಗೆ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷ ವ್ಯವಸ್ಥೆ: ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ದಾಸೋಹ ಸೇವೆ ಸ್ಥಳದ ವಿಶೇಷತೆಗಳು:
ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿ ಇರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಪ್ರಸಾದ ಸ್ವೀಕರಿಸಲು ಈ ಬಾರಿ ಇನ್ನೂ ಹೆಚ್ಚು ವಿಶಾಲವಾದ ಸ್ಥಳಾವಕಾಶವನ್ನು ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ.
ಕೌಂಟರ್ ವ್ಯವಸ್ಥೆ : ಈ ವರ್ಷ ಸುಮಾರು ೭೬ ಕೌಂಟರಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ೪೦ ಕೌಂಟರಗಳು ಅನ್ನ ಸಾರು, ೩೬ ಕೌಂಟರ ಗಳು ಸಿಹಿ ಪದಾರ್ಥ ವಿತರಣೆಗೆ ನಿರ್ಮಿಸಲಾಗಿದೆ.
ರೊಟ್ಟಿ ಕೋಣೆ : ಅಜ್ಜನ ಜಾತ್ರೆ ರೊಟ್ಟಿ ಜಾತ್ರೆಯೆಂದೆ ಪ್ರಸಿದ್ಧ. ಬೃಹಾದಾಕಾರದ ೪೫*೫೦ ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಭರದಿಂದ ಸಾಗಿದೆ.
ನೀರಿನ ವ್ಯವಸ್ಥೆ : ೭೦ ನೀರಿನ ಕೊಳಾಯಿ(ನಲ್ಲಿ) ಇರುವ ಎರಡು ನೀರಿನ ಕಟ್ಟೆಗಳು, ೫೦ ನೀರಿನ ಕೊಳಾಯಿ(ನಲ್ಲಿ)ಇರುವ ಇಂದು ಕಟ್ಟೆಯನ್ನು ಸಿದ್ಧಗೊಳಿಸಲಾಗಿದೆ. ೨೫೦-೩೦೦ ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾದಲಿ ಕಟ್ಟೆ : ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದು ಅದಕ್ಕೆಂದೇ ೧೬*೬ ಅಡಿ ವಿಸ್ತೀರ್ಣದ ೩, ೨೦*೬ ಅಡಿ ವಿಸ್ತೀರ್ಣದ ೩ ಕಟ್ಟೆಗಳು ಒಟ್ಟು ೬ ಮಾದಲಿ ಕಟ್ಟೆಗಳು ನಿರ್ಮಾಣಗೊಂಡಿವೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾಗಿ (೪೦+೩೬) ಕೌಂಟರಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಅಲ್ಲದೇ ೦೪ ಪ್ರವೇಶ ದ್ವಾರಗಳು, ೬೫ ಅಡಿಯ ಅನ್ನ ಸಂಗ್ರಹಣಾ ಕಟ್ಟೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೋಲಿಸರು ಇರುತ್ತಾರೆ.ಪ್ರಸಾದ ನಿಲಯದ ಸುತ್ತಲೂ ಪೋಲಿಸ್ ಕಣ್ಗಾವಲು ಇದ್ದು, ತಂತಿ ಬೇಲಿಯನ್ನೂ ಸಹ ಅಳವಡಿಸಲಾಗಿದೆ.ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿ ಒಂದು ದಿನಕ್ಕೆ ಸುಮಾರು ೩೦೦ ರಿಂದ ೪೦೦ರವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆಯಲ್ಲಿ ತೊಡಗಿಕೊಂಡರೆೆ, ಪ್ರಸಾದ ವಿತರಣೆಯಲ್ಲಿ ಸುಮಾರು ೫೦೦ ರಿಂದ ೬೦೦ ಭಕ್ತರು ಪಾಲ್ಗೊಳ್ಳುವರು.ಜಾತ್ರಾಮಹೋತ್ಸವ ಪ್ರಾರಂಭದಿAದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು ೨೫ ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು.ಜಾತ್ರೆಯ ಪ್ರಾರಂಭದಿAದ ಮುಕ್ತಾಯದವರೆಗೆ ಸುಮಾರು ಲಕ್ಷೆÆÃಪಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನೀರಿಕ್ಷೆ ಇದೆ.
ದಾಸೋಹ ಪ್ರಸಾದದ ಸವಿಗಳು :ಈ ಜಾತ್ರೆಯ ಮಹಾದಾಸೋಹ ಹಸಿದು ಬಂದ ಭಕ್ತರಿಗೆ ಸಂತೃಪ್ತಿಯಾಗುವAತಹ ರೊಟ್ಟಿ, ಪಲ್ಯ, ಸಿಹಿ ಪದಾರ್ಥ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿ ಚಟ್ನಿ ಉಪ್ಪಿನಕಾಯಿ ಮುಂತಾದ ಪ್ರಸಾದ ವಿತರಿಸಲಾಗುವುದು.
ದಾಸೋಹದಲ್ಲಿ ಭಕ್ತರ ಶಿಸ್ತು: ಶಾಂತವಾಗಿ ಅಷ್ಟೇ ಭಕ್ತಿಯಿಂದ ಸದ್ದು ಗದ್ದಲವಿಲ್ಲದೆ ಎಲ್ಲರೂ ಎಲ್ಲರಿಗಾಗಿ ಎಂದು ಭಾವಿಸುವ ಅಪರೂಪದ ದಾಸೋಹ.ರಥೋತ್ಸವ ದಿನದಿಂದ ಅಮಾವಾಸ್ಯೆಯವರೆಗೆ ನಡೆಯುವ ಈ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳುವದು ಈ ಜಾತ್ರೆಯ ವೈಶಿಷ್ಟö್ಯತೆ ಮತ್ತು ಪವಾಡವೇ ಸರಿ.
ರೊಟ್ಟಿ ಜಾತ್ರೆ: ಎಷ್ಟೋ ಭಕ್ತರು ತಮ್ಮ ಮನೆಗಳಿಂದ ಲಕ್ಷಾನುಗಟ್ಟಲೇ ರೊಟ್ಟಿಯನ್ನು ಸಮರ್ಪಿಸುವ ಅಪರೂಪದ ದಾಸೋಹ ಎಂತಹ ಭಕ್ತರನ್ನು ಮಂತ್ರಮುಗ್ಧಗೊಳಿಸದೇ ಇರದು.  ತರಕಾರಿ, ಸಿಹಿ ಪದಾರ್ಥ ಮುತಾಂದ ಸಾಮಾಗ್ರಿಗಳ ದೇಣಿಗೆ ನೀಡುವರು.
ಮಹಾದಾಸೋಹದಲ್ಲಿ ತೆಗೆದುಕೊಳ್ಳುವ ಮುನ್ನಚ್ಚರಿಕೆ ಕ್ರಮಗಳು:
• ಪ್ರತಿದಿನ ದಾಸೋಹದ ಪ್ರಸಾದವನ್ನು ಆಹಾರ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗುತ್ತದೆ.
• ದಾಸೋಹ ಸಿದ್ಧಪಡಿಸುವ ಬಾಣಸಿಗರಿಗೆ ಸೂಕ್ತ ವಸತಿ ಹಾಗೂ ಸ್ನಾನ ಗೃಹ, ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ.
• ಪ್ರಸಾದ ತಯಾರು ಮಾಡುವ ದಾಸೋಹದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ ಇರುತ್ತದೆ.
• ಮಹಾದಾಸೋಹದಲ್ಲಿ ಎಲ್ಲಾ ಕಡೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ.
• ಮಹಾದಾಸೋಹದಲ್ಲಿ ಉಚಿತ ಆರೋಗ್ಯ ತಪಾಸಣೆ ಲಭ್ಯವಿರುತ್ತದೆ.
• ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡಲಾಗುವದು.
• ದಾಸ್ತಾನು ಕೋಣೆಗಳನ್ನು ನಿರ್ಮಿಸಲಾಗಿರುತ್ತದೆ.
• ಕಾಯಿಪಲ್ಲೆ/ತರಕಾರಿ ಸಂಗ್ರಹಣಾ ಕೊಠಡಿ
• ರೊಟ್ಟಿ ಸಂಗ್ರಹಣಾ ಕೊಠಡಿ
• ಕಿರಾಣಿ ಸಾಮಾನುಗಳ ಸಂಗ್ರಹಣಾ ಕೊಠಡಿ
• ಭಾಂಡೆ ಸಾಮಾನುಗಳ ಸಂಗ್ರಹಣಾ ಕೊಠಡಿ
• ಸ್ವಚ್ಚತಾ ಸಾಮಾಗ್ರಿಗಳ ಸಂಗ್ರಹಣಾ ಕೊಠಡಿ.
ಕಳೆದ  ವರ್ಷ ಮಹಾದಾಸೋಹದದಲ್ಲಿ ಪ್ರಾರಂಭದಿAದ ಮುಕ್ತಾಯದವರೆಗೆ ಖರ್ಚಾಗುವ ಸಾಮಾಗ್ರಿಗಳ ಅಂದಾಜು ವಿವರಣೆ ಈ ಕೆಳಗಿನಂತಿದೆ.
೧. ರೊಟ್ಟಿ ಸುಮಾರು ೧೫ ರಿಂದ ೧೬ ಲಕ್ಷ
೨. ಅಕ್ಕಿ ೮೦೦ ಕ್ವಿಂಟಾಲ್
೩. ಸಿಹಿ ಪದಾರ್ಥಗಳು ೯೦೦ ಕ್ವಿಂಟಾಲ್
೪. ತರಕಾರಿ ೪೦೦ ಕ್ವಿಂಟಾಲ್
೫. ದ್ವಿದಳ ಧಾನ್ಯಗಳು ೩೫೦ ಕ್ವಿಂಟಾಲ್
೬. ಹಾಲು ೧೫ ಸಾವಿರ ಲೀಟರ್
೭. ತುಪ್ಪ ಸಾವಿರ ಕೆ.ಜಿ.
೮. ಉಪ್ಪಿನಕಾಯಿ ೫೦೦೦ ಕೆ,ಜಿ,
೯. ಪುಠಾಣಿ ಚಟ್ನಿ ೧೫ ಕ್ವಿಂಟಾಲ್.
೧೦. ಕೆAಪು ಚಟ್ನಿ ೫ ಕ್ವಿಂಟಾಲ್
೧೧. ೨೦ ಕ್ವಿಂಟಾಲ್ ಕಡ್ಲೇಬೆಳೆ ಮಿರ್ಚಿ
ಇದೆಲ್ಲಾ ಭಕ್ತರ ಭಕ್ತಿ, ಶ್ರದ್ಧೆ ಹಾಗೂ ಸ್ವಯಂ ಪ್ರೇರಣೆಗಳಿಂದ ನಡೆಯುತ್ತಿರುವದು ಗವಿಮಠದ ಜಾತ್ರೆಯ ವೈಶಿಷ್ಠ್ಯೆತೆ ಹೆಚ್ಚಿನ ಮಾಹಿತಿಗಾಗಿ – ೯೩೪೧೩೬೦೫೪೮,–೯೪೪೮೧೨೦೬೧೦,–೯೮೪೫೪೨೯೯೪೪ ಇವರನ್ನು ಸಂಪರ್ಕಿಸಲು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!