IMG-20240124-WA0061

ಮಾದರಿಯಾದ ಶರಣ ಸಂಸ್ಕೃತಿ ಉತ್ಸವ 2024 : ಪೂಜ್ಯ ಮಹಾದೇವ ಸ್ವಾಮೀಜಿ

ಕರುನಾಡ ಬೆಳಗು ಸುದ್ದಿ 

ಕುಕನೂರ, 25- ಕುಕನೂರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಭಕ್ತರ ಪ್ರೀತಿಗೆ ಸರಿಸಾಟಿಯಿಲ್ಲ, ಧರ್ಮ ಕೆಟ್ಟಿದೆ, ಜನ ಸರಿಯಿಲ್ಲ ಎಂದು ವಾದಿಸುವವರು ಕುಕನೂರ ಮಠಕ್ಕೆ ಬಂದು ನೋಡಬೇಕು ಇಲ್ಲಿ ಸೇವೆ ಮಾಡುವ ಕೈಗಳು ಅವರಿಗೆ ಧರ್ಮದ ಪಾಠ ಹೇಳಿಕೊಡುತ್ತವೆ ಎಂದು ಶ್ರೀಮಠದ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಹೇಳಿದರು.

ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ತಮ್ಮ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ೨೦೨೪ ರ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡುತ್ತಾ ಮಠಗಳು ಸಮಾಜದಲ್ಲಿ ನೊಂದವರ ಕಲ್ಯಾಣಕ್ಕೆ ಕಾರ್ಯ ನಡೆಯುತ್ತವೆ ಆದರೆ ಆ ಕಾರ್ಯಗಳಿಗೆ ಭಕ್ತರು ಸೇವೆ ಸಲ್ಲಿಸಲು ಸಾಧ್ಯವಿಲ್ಲ, ಭಕ್ತರು ತನು ಮನ ಧನದಿಂದ ಸೇವೆ ಮಾಡದಿದ್ದರೆ ಸಮಾಜಮುಖಿ ಕಾರ್ಯಗಳು ಭಕ್ತರೇ ಮಠದವರು ಹಾಗೂ ಉತ್ತಮ ಭಕ್ತರನ್ನು ಪಡೆಯುವುದು ಪುಣ್ಯವೇ ಸರಿ, ನಮ್ಮ ಮಠದ ಭಕ್ತರು ಅತ್ಯಂತ ಕ್ರಿಯಾಶೀಲರು ಸಮಾಜಮುಖಿ ಕಾರ್ಯಗಳಿಗೆ ಸದಾ ಸ್ಪಂದನೆ ಮಾಡುವ ಉತ್ತಮ ಗುಣವುಳ್ಳವರು ಜೊತೆಗೆ ನಮ್ಮೂರಿನ ಹಿರಿಯರು, ಯುವಕರು, ಸಂಘ ಸಂಸ್ಥೆಗಳು ಮತ್ತು ಮಾದ್ಯಮದವರು ಕೂಡ ಶ್ರೀಮಠದ ಮೇಲೆ ಅಪಾರವಾದ ಅಭಿಮಾನ ವಹಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಳೇದಗುಡ್ಡದ ಪೂಜ್ಯ ಒಪ್ಪತ್ತೇಶ್ವರ ಸ್ವಾಮೀಜಿ ಕಾರ್ಯಕ್ರಮಗಳು ಜನರ ಮನಸ್ಸಿಗೆ ಹತ್ತಿರ, ಭಕ್ತರ ಕಲ್ಯಾಣಕ್ಕೆ ಸಹಕಾರಿಯಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಯಲಬುರ್ಗಾ ಬಸಲಿಂಗಪ್ಪ ಭೂತೆ ಮಾತನಾಡಿ ಕುಕನೂರ ಶ್ರೀಗಳು ಭಕ್ತರ ಹಿತಚಿಂತನಾ ಕಾರ್ಯಕ್ರಮಗಳ ಮೂಲಕ ಮಾದರಿಯಾದ ಕಾರ್ಯಕ್ರಮಗಳು, ಇಂದಿನ ಕಾಲಘಟ್ಟದಲ್ಲಿ ದುಡಿಯುವ ಕೈಗಳು ಕಡಿಯಾಳ ಗುತ್ತೇವೆ ಭಕ್ತರು ಸಂಸಾರದ ಜಂಜಾಟದಲ್ಲಿ ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಸರಿಯುತ್ತಿರುವ ಅನ್ನದಾನೀಶ್ವರ ಮಠದ ಭಕ್ತರು ಧರ್ಮ ವಂತರಾಗಿ ಇಂತಹ ಕಾರ್ಯಗಳಿಗೆ ಪುನೀತರಾಗಿದ್ದಾರೆ.

ಶರಣ ಸಂಸ್ಕೃತಿ ಉತ್ಸವದಲ್ಲಿ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯವರು ಹೃದಯ ಸಂಬದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದ್ದಾರೆ, ಕೊಪ್ಪಳದ ಲಯನ್ಸ ಆಸ್ಪತ್ರೆ ಮತ್ತು ಆನಂದ ನಿಯಂತ್ರಣ ಸಂಘ, ವಿನಾಯಕ ಆಪ್ಟಿಕಲ್ ಕುಕನೂರ ಇವರು ಕಣ್ಣಿಣ ತಪಾಶಣೆ ಮತ್ತು ಶಾಸ್ತç ಚಿಕಿತ್ಸಾ ಶಿಬಿರ ಮಾಡಿಕೊಟ್ಟರು, ಅಕ್ಕನ ಬಳಗ ಹಾಗೂ ಧರ್ಮಸ್ಥಳ ಸಂಘದ ಮಹಿಳಾ ಸಮಾವೇಶ, ಮುರಾರಿ ಭಜಂತ್ರಿ ಕಾಯಯೋಗಿ ಕುಕನೂರ ಜನ ಸಾಧಕರಿಗೆ ನೂರು ಜನ ಸಾಧಕ ನೀಡಲಾಯಿತು, ಸಂಜೆ ಮೂರು ದಿನ ಭಕ್ತರ ಹಿತಚಿಂತನಾಗೋಷ್ಠಿಯನ್ನ ಪ್ರಕಾಶ ಬಂಡಿ, ಕುಮಾರ ಗದಗ ಮತ್ತು ಪ್ರಶಸ್ತಿ ಖಾದಾರಸಾಬ ಸಿದ್ನೆಕೊಪ್ಪ ನಡೆಸಿಕೊಟ್ಟರು. ಮೂರು ದಿನ ನಿರಂತರ ಮಹಾದಾ ಸೋಹವನ್ನ ಶ್ರೀಮಠದ ಸಮಿತಿಯವರು ಮಾಡಿದ್ದರು.

ಈ ಸಂಧರ್ಭದಲ್ಲಿ ಮಲ್ಲೇನಕೇರಿ ಶ್ರೀ, ಜಿಗೇರಿ ಶ್ರೀ, ಗುರಗುಂಟ ಶ್ರೀ, ಪುರಗಿರಿ ಶ್ರೀ, ಯಲಬುರ್ಗಾದ ಬಸಲಿಂಗಪ್ಪ ಭೂತೆ, ಕೊಟ್ರಪ್ಪ ಮುತ್ತಾಳ, ಈರಣ್ಣ ಅಣ್ಣೀಗೇರಿ, ಆರ್ ಪಿ ರಾಜೂರು, ಡಾ ಜಂಬಣ್ಣ ಅಂಗಡಿ, ಸಂಗಮೇಶ ಕಲ್ಮಠ, ಮುದ್ದು ಅಂಟಿ, ಗಡಿಗೆಪ್ಪ ಪವಾಡಶೆಟ್ಟಿ, ವೀರಮಠ, ಈ ಸಮಿತಿ ಶಿವಪ್ಪಯ್ಯ ತೋಂಟದಾರ್ಯ. ಪ್ರಧಾನ ಕಾರ್ಯದರ್ಶಿ ಲಕ್ಷಣ ಕಾಳಿ, ರಾಮನಗೌಡ ಹುಚ್ಚನೂರ, ಮೇಘರಾಜ ಜಿಡಗಿ, ಶೇಖಪ್ಪ ಶಿರೂರ ಮತ್ತು ಸುತ್ತಮುತ್ತಲಿನ ಹಳ್ಳಿಯ ಹಿರಿಯರು ಸೇರಿದ್ದರು.

Leave a Reply

Your email address will not be published. Required fields are marked *

error: Content is protected !!