
ತಾಲೂಕಿನ ಮುಧೋಳ ಗ್ರಾಮದಲ್ಲಿ ಮಕ್ಕಳ ದಿನಾಚರಣೆ
ಮಕ್ಕಳನೇ ಆಸ್ತಿಯನಾಗಿ ಮಾಡಿ ;ಕುದರಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 17 ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳನೇ ಆಸ್ತಿಯನಾಗಿ ಮಾಡಿ ಒಳ್ಳೆಯ ಶಿಕ್ಷಣ ಕೂಡಿಸಿ ಎಂದು ಗ್ರಾ. ಪಂ. ಸದಸ್ಯ ಚಂದ್ರಬಾಯಿ ಕುದುರಿ ಹೇಳಿದರು .
ಅವರು ತಾಲೂಕಿನ ಮುಧೋಳ ಗ್ರಾಮದ 1ನಂಬರ್ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿ ಆಚರಿಸಲಾಯಿತು, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಬಾಯಿ ಕುದರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಮಕ್ಕಳು ಕಲಿಯುವುದಿಲ್ಲ ಅಂದ ಮಾತ್ರಕ್ಕೆ ಒಡೆಯುವುದು ಬಡಿಯುವುದು ಸೂಕ್ತವಲ್ಲ ಮಕ್ಕಳ ಮನವೊಲಿಸಿ ಆ ಮೂಲಕ ಮಕ್ಕಳ ಬೆಳವಣಿಗೆ ಸಾತ್ ನೀಡಬೇಕೆಂದು ಹೇಳಿದರು, ಮುಖ್ಯ ಅತಿಥಿಯಾಗಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿಯರಾದ ಚೆನ್ನಮ್ಮ ಅವರು ಮಾತನಾಡಿ ಮಕ್ಕಳ ಶಿಕ್ಷಣದ ವಿಷಯಗಳಲ್ಲಿ ಒತ್ತಡ ಹಾಕಬಾರದು ಅವರ ಅಂಕಗಳಿಸುವ ಯಂತ್ರಗಳಲ್ಲ ಭವಿಷ್ಯದಲ್ಲಿ ಏನಾಗಬೇಕೆಂದು ಅವರು ತೀರ್ಮಾನಿಸಬೇಕೆ ವಿನಃ ಪೋಷಕರು ಒತ್ತಡ ಹಾಕುವುದು ಸರಿಯಲ್ಲ ಮಕ್ಕಳನ್ನು ಕಲಿಕೆಯ ವಿಷಯಗಳಲ್ಲಿ ಅವರಷ್ಟಕ್ಕೆ ಬಿಟ್ಟುಬಿಡಬೇಕು ಎಂದು ಹೇಳಿದರು.
ನಂತರ ವೀ ಆರ್ ಡಬ್ಲ್ಯೂ ವೀರಭದ್ರಪ್ಪ ಅವರು ಮಾತನಾಡಿ ಮಕ್ಕಳ ಬೆಳವಣಿಗೆ ಮತ್ತು ಪೋಷಕರ ಪಾತ್ರ ಕುರಿತು ವಿವರಿಸಿದರು, ಒಂದನೇ ಅಂಗನವಾಡಿಯ ಬಸಮ್ಮ ಹುನಗೇರಿ ಅವರು ಸ್ವಾಗತ ಮಾಡಿದರು, ಅಂಗನವಾಡಿ ಮಕ್ಕಳೆಲ್ಲರೂ ವೇಶಭೂಷಣಗಳನ್ನು ಧರಿಸಿದರು, ಕಾವ್ಯ ಗುರುಬಸವ ವಿವೇಕಿ ಅಂಗನವಾಡಿಯಲ್ಲಿ ತನ್ನ ಜನ್ಮದಿನವನ್ನು ಎಲ್ಲರ ಜೊತೆ ಸೇರಿಕೊಂಡು ಕೇಕ್ ಕತ್ತರಿಸಿದಳು, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಎಲ್ಲುಬಾಯಿ ಮ್ಯಾಗೇರಿ, ಅಯ್ಯಮ್ಮ ಬಳಿಗಾರ್, ಮಂಜುಳಾ ಅರಬರ, ರತ್ನಾ ದೇವೆಕ್ಕಿ, ಗೀತಾ ಗೌಡರ್, ಸವಿತಾ ಹವಳದ, ಚನ್ನಮ್ಮ, ಕೆ ಎಚ್ ಪಿ ಟಿ ಪರಿಮಳ, ನೊರಂದಪ್ಪ ವಿವೇಕಿ ಗ್ರಂಥಾಲಯ ಜಗನ್ನಾಥ, ಮಕ್ಕಳು ತಾಯಂದಿರು ಮತ್ತು ಇತರರು ಭಾಗವಹಿಸಿದ್ದರು,