
ಮೇ29 ರಿಂದ ಶಾಲೆ ಆರಂಭ 31ಕ್ಕೆ ಪ್ರಾರಂಭೋತ್ಸವ ಸ್ವಚ್ಛತಾ ಕಾರ್ಯ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 28-ಕರ್ನಾಟಕ ರಾಜ್ಯದ್ಯಂತ 2024-25ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಆರಂಭವಾಗಿವೆ ಸರ್ಕಾರಿ ಅನುದಾನಿತ ಶಾಲೆಗಳು 29 ರಿಂದ ಪುನರಾರಂಭಗೊಳ್ಳುತ್ತಿವೆ ಮೊದಲ ಎರಡು ದಿನ ಶಾಲೆಗಳ ಸ್ವಚ್ಛತಾ ಕಾರ್ಯ ನಡೆಯಲಿದೆ.
ಮೇ 31ರಂದು ಮಕ್ಕಳಿಗೆ ಸಿಹಿ ನೀಡಿ ಶಾಲಾ ಪ್ರಾರಂಭೋತ್ಸವ ನಡೆಸುವಂತೆ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ ಎಂದು ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಶಿಕ್ಷಣ ಪ್ರೇಮಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.
ಶಾಲಾ ಸ್ವಚ್ಛತಾ ಕಾರ್ಯ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ತರಗತಿ ಸಿಬ್ಬಂದಿ ಕೋಠಡಿ ಶಾಲಾ ಮೈದಾನ ನೀರಿನ ಟ್ಯಾಂಕ್ ಅಡುಗೆ ಕೋಣೆ ಆಹಾರ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದೆ ಮೇ 29ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಲಾ ತರಗತಿ ಶಿಕ್ಷಕರ ವೇಳಾಪಟ್ಟಿ ವಾರ್ಷಿಕ ಕ್ರೀಯ ಯೋಜನೆ ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವದು ಶಾಲಾಭಿವೃದ್ಧಿ ಯೋಜನೆ ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾತಪ್ರಭಾತ್ ಪೇರಿ ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು ಮೇ 31ರಂದು ಮಕ್ಕಳಿಗೆ ಸಿಹಿ ಊಟ ವಿತರಿಸಿ ಪ್ರಾರಂಭೋತ್ಸವ ಮಾಡುವಂತೆ ಶಾಲಾ ಆರಂಭದ ದಿನವೇ ಉಚಿತ ಪಠ್ಯ ಪುಸ್ತಕ ಮತ್ತು ಸಮ ವಸ್ತ್ರಗಳನ್ನು ವಿತರಿಸುವುದು ಜೂನ್ 1ರಿಂದ 30ರವರೆಗೆ ಸೇತು ಬಂಧ ಕಾರ್ಯಕ್ರಮ ನಡೆಸಬೇಕು ಎಂದರು.
ರಾಜ್ಯದ ಜಿಲ್ಲೆಗಳಿಗೆ ಶೇಕಡ 70ರಷ್ಟು ಪಠ್ಯಪುಸ್ತಕ ರವಾನೆ ಶಾಲೆಗಳಲ್ಲಿ ಮೊದಲನೇ ದಿನದಿಂದಲೇ ಪಠ್ಯಪುಸ್ತಕಗಳನ್ನು ಮತ್ತು ಸಮವಸ್ತ್ರಗಳನ್ನು ನೀಡಬೇಕೆಂಬ ಸೂಚನೆ ನೀಡಲಾಗಿದೆ ಸೋಮವಾರದ ತನಕ ಶೇ. 70 ಪಠ್ಯಪುಸ್ತಕಗಳು ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಗಿದೆ ಇನ್ನುಳಿದ ಪಠ್ಯ ಪುಸ್ತಕಗಳನ್ನು ಹಂತ ಹಂತವಾಗಿ ತಲುಪಿಸಲಾಗುತ್ತದೆ ಬಾಲಕಿಯರಿಗೆ ಲಂಗದ ಬದಲು ಚೂಡಿದಾರ್ ಈ ಬಾರಿ ಶಾಲಾ ಮಕ್ಕಳಿಗೆ ಖುಷಿ ವಿಚಾರವಾಗಿ ಶಾಲಾರಂಭದಲ್ಲಿಯೇ ಎರಡು ಜೊತೆ ಸಮವಸ್ತ್ರಗಳನ್ನು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ ಇಲ್ಲಿಯವರೆಗೂ ಮೊದಲ ಜೊತೆಯನ್ನು ಜೂನ್ ನಲ್ಲಿ ಮತ್ತು 2ನೇ ಜೊತೆಯನ್ನು ಡಿಸೆಂಬರ್ ನಲ್ಲಿ ನೀಡಲಾಗುತ್ತಿತ್ತು ಕಳೆದ ವರ್ಷ ಒಂದೇ ಜೊತೆ ಸಮವಸ್ತ್ರ ವಿತರಣೆ ಮಾಡಿತ್ತು ಆದರೆ ಈ ಬಾರಿ ಆರಂಭದಲ್ಲಿಯೇ ಎರಡು ಜೊತೆ ಯನ್ನು ವಿತರಣೆ ಮಾಡಿದೆ ಸಮವಸ್ತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ಮಾತ್ರ ನೀಡುತ್ತಿದ್ದ ಚೂಡಿದಾರವನ್ನು ಈ ವರ್ಷದಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಗೂ ನೀಡುತ್ತಿದೆ. ತಿಳಿ ನೀಲಿ ಬಣ್ಣದ ಟಾಪ್ ಮತ್ತು ಕಡು ನೀಲಿ ಬಣ್ಣದ ದುಪ್ಪಟ್ಟವನ್ನು ವಿತರಣೆ ಮಾಡಲಾಗಿದೆ ಉಳಿದಂತೆ 1ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ ಮತ್ತು ಅಂಗಿ 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ನೀಡಲಾಗಿದೆ.
50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ : ಶಾಲೆಗಳು ಆರಂಭವಾಗುತ್ತಿದ್ದರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾತ್ರ ಈವರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಯಾವುದೇ ಆದೇಶವನ್ನು ಪ್ರಕಟಿಸಿಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಅಂದಾಜು 50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಎದುರಿಸಲಾಗುತ್ತಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ಶಿಕ್ಷಣ ಪ್ರೇಮಿ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.