
ಶ್ರೀ ವಿಜಯ ದುರ್ಗಾದೇವಿ ಪುರಾಣ ಮಹಾ ಮಂಗಲೋತ್ಸವದ
ಅದ್ದೂರಿ ಆನೆ ಅಂಬಾರಿ ಮೆರವಣಿಗಗೆ
ಯಲಬುರ್ಗಾ ಪಟ್ದಟಣದ ಉಭಯ ಶ್ರೀಗಳ ಚಾಲನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 1 – ಪಟ್ಟಣದ ವಿಜಯದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ನೆಡದ ಪುರಾಣ ಮಹಾಮಂಗಲೋತ್ಷವ. ಮತ್ತು ಶ್ರೀದೇವಿ ಆನೆ ಅಂಬಾರಿ ಮೆರವಣಿಗಯ ಉತ್ಸವಕ್ಕೆ ಪಟ್ಟಣದ ಉಭಯ ಶ್ರೀಗಳು ಚಾಲನೆ ನೀಡಿದರು
ಬೆಳಿಗ್ಗೆ ಶ್ರೀದೇವಿಗೆ ವಿಶೇಷ ಪೂಜೆ ವಿಧಿ ವಿಧಾನದಿಂದ ನಡೆಯಿತು.ಪಟ್ಟಣದ ಉಭಯ ಶ್ರೀಗಳಾದ ಶ್ರೀಧರ ಮುರಡಿ ಹಿರೇಮಠದ ಷ. ಬ್ರ. ಶ್ರೀ ಬಸಲಿಂಗೇಶ್ವರ ಸ್ವಾಮೀಜಿ ಹಾಗೂ ಸಂಸ್ಥಾನ ಹಿರೇಮಠದ ಷ. ಬ್ರ. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ ನಾಡಿನ ಜನತೆಗೆ ಆ ಶ್ರೀದೇವಿಯು ಸಿರಿ. ಸಂಪತ್ತು. ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಿಲ್ಲಿ ಎಂದು ಹೇಳಿದರು
ಮೈಸರೂಲ್ಲಿ ಚಾಂಮುಡಿಶ್ವರಿ ತಾಯಿಗೆ ಯಾವ ರಿತಿ ವೈಭವ ನಡೆಯುತ್ತದೆ ಅದೇರೀತಿ ಯಲಬುರ್ಗಾದಲ್ಲಿ ನೆಡಯುವದು ಇತಿಹಾಸ ತಾಲೂಕಿನ ಸುತ್ತಮುತ್ತಲಿನ ಕಲಾವಿದರು ಪಾಲ್ಘೋಳವರು ಶ್ರೀದೇವಿ ಬೇಡಿದ ವರವನ್ನು ಕೊಡುತ್ತಾಳೆ ಎಂದರು,
ಪಟ್ಟಣದಲ್ಲಿ ಪ್ರಮುಖ ರಾಜ ಬೀದಿಗಳ ಮುಖಾಂತರ ಮೆರವಣಿಗೆ ಸಾಗಿ ಮೆರವಣಿಗೆ ಯಲ್ಲಿ ಮಹಿಳೆಯರು ಕುಂಭ, ಕಳಸದೂಂದಿಗೆ ಡೊಳ್ಳು ಕುಣಿತ, ವೀರಗಾಸೆ. ಮೆರವಣಿಗೆಯಲ್ಲಿ ಆನೆಯ ಮೇಲೆ ಶ್ರೀದೇವಿಯನ್ನುಕೂಡಿಸಿ ಹೂವಿನಿಂದ ಅಲಂಕರಿಸಿ ಸಕಲವಾದ್ಯಗಳೊಂದಿಗೆ ವಿಜ್ರಂಭಣೆಯಿಂದ ಮೆರವಣಿಗೆ ಸಾಗುತ್ತಾ ಯಲಬುರ್ಗಾದ ಮೈಸೂರು ದಸರಾದಂತೆ ಈ ಪಟ್ಟಣದಲ್ಲಿ ಆನೆ ಅಂಬಾರಿ. ಸಕಲ ವಾದ್ಯಮೇಳದೂಂದಿಗೆ ಅದ್ದೂರಿಯಾಗಿ ಮೈಸೂರು ದಸರಾ ತರಹ ಜಂಬೂ ಸವಾರಿ ಮಾಡಲಾಯಿತು,
ವೀರಣ್ಣ ಹುಬ್ಬಳಿ ಮಾತನಾಡಿ ಶ್ರಿದೇವಿಯು ಭಕ್ತರು ಬೇಡಿದ ವರವನ್ನು ಕೂಡುವ ಕಾಮಧೇನು.ಮಕ್ಕಳು ಇಲ್ಲದವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸಿದ ಕರುಣಾಮಯಿ. ಎಂದರು, ನಂತರ ಅನ್ನಸಂತರ್ಪಣೆ ನಡೆಯಿತು. ತಾಲೂಕಿನ ಸುತ್ತಮುತ್ತಲಿನ ಗ್ರಾಮದಿಂದ ಭಕ್ತರು ಆಗಮಿಸಿ,ಶ್ರೀವಿಜಯದುಗಾ೯ ದೇವಿಯ ದರ್ಶನ ಪಡೆದು ಪುನಿತರಾದರು.