
ರಂಗಭೂಮಿಯ ಮಿನುಗುವ ನಕ್ಷತ್ರ ಬಾಬಣ್ಣ
ಕರುನಾಡ ಬೆಳಗು ಸುದ್ದಿ
ವಿಶೇಷ ವರದಿ
ಕೊಪ್ಪಳ. 10- ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ರಂಗಭೂಮಿ ಕಲಾವಿದರಾಗಿ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿ ಮಿಂಚಿದ್ದ ಕಲಾವಿದ ಜಿಲ್ಲೆಯ ಕುಕನೂರಿನ ಬಾಬಣ್ಣ ಕಲ್ಮನಿ ಇನ್ನಿಲ್ಲಾ ರಂಗಭೂಮಿ ಲೋಕಕ್ಕೆ ಅನಾತ ಪ್ರಜ್ಞೆ ಕಾಡುವಂತಾಗಿದೆ.
ಅವರು ಬಾಲ್ಯದ ಜೀವನದಲ್ಲೆ ಬಣ್ಣ ಹಚ್ಚಿದವರು ರಂಗಭೂಮಿಯಲ್ಲಿ ೭೭ ವರ್ಷ ಸೇವೆ ಸಲ್ಲಿಸಿದ ಹಿರಿಮೆ ಅವರದು., ೧೯೪೬ಕ್ಕೂ ಮುಂಚಿತವಾಗಿ ರಂಗಭೂಮಿಯಲ್ಲಿ ನಟನೆ, ತಮ್ಮ ೧೦ನೇ ವರ್ಷದಲ್ಲಿ ರಂಗಭೂಮಿ ಪ್ರವೇಶ ಮಾಡಿದ್ದರು. ಬಾಬಣ್ಣ ೨/೧೧/೧೯೩೪ ರಲ್ಲಿ ಜನಿಸಿದ್ದರು.
ಅವರು ಹಿರಿಯ ವೃತ್ತಿರಂಗಭೂಮಿಯ ನಟ ಎಂ.ಎಸ್. ಕೊಟ್ರೇಶ ಅವರೊಂದಿಗೆ ತಂಡ ಅಭಿನಯ ಮಾಡುತ್ತಿದ್ದರು. ಬಾಬಣ್ಣ ತಾಯಿಯ ಲಲಿತ ನಾಟ್ಯ ಸಂಘ, ನಂತರ ಸ್ವಂತ ಕಂಪನಿ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ ಹತ್ತು ವರ್ಷ ನಡೆಸಿಕೊಂಡು ಬಂದರು. ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಮಿಂಚಿ ಹೆಸರು ಮಾಡಿದವರು.
ಹಿರಿಯ ಮಗ ; ಬಾಲ್ಯದಿಂದ ಕಷ್ಟದ ಜೀವನ ಅನುಭವಿಸದ ಬಾಬಣ್ಣ ನಟರಾಗಿ ಹಾಗೂ ನಿರ್ದೇಶಕರಾಗಿ ಸಹ ಕೆಲಾ ಮಾಡಿದವರು.ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದೆ ಕುಕನೂರು ರೆಹಿಮಾನವ್ವ ಅವರ ಹಿರಿಯ ಪುತ್ರ ಬಾಬಣ್ಣ. ರೆಹಿಮಾನವ್ವ ಅವರ ಐವರು ಮಕ್ಕಳಲ್ಲಿ ದೊಡ್ಡವರೇ ಈ ಬಾಬಣ್ಣ ಜೀವನದುದ್ದಕ್ಕು ಹಲವಾರು ಏಳು ಬಿಳುಗಳನ್ನು ಕಂಡವರು.
ಅಭಿನಯ ; ಹಿಂದೂ ಮುಸ್ಲಿಂ ಭಾವೈಕ್ಯದ ‘ಸಂತ ಶಿಶುನಾಳ ಸಾಹೇಬರ ಮಹಾತ್ಮೆ’, ‘ಅಜಾತ ನವಲಗುಂದ ನಾಗಲಿಂಗ ಲೀಲೆ’ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿದರು ಹಾಗೂ ಮೂಡಲಮನೆ ಧಾರವಾಹಿಯಲ್ಲಿ ಅಭಿನಯ ಇವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟ ನಾಟಕಗಗಳು.
ಬಾಲ ನಟ ಕಿರ್ತಿ ; ಅವರು ತಮ್ಮ ಬಾಲ್ಯ ಜೀವನದಲ್ಲೆ ನಟನೆ ಆರಂಭಿಸಿ ಬಾಲಕನಾಗಿದ್ದಾಗ ರಂಗಭೂಮಿಯ ಜೊತೆಗಿನ ನಂಟು ಆರಂಭಿಸಿದ ಬಾಬಣ್ಣ ಸ್ತ್ರೀರತ್ನ ನಾಟಕದ ಮೂಲಕ ರಂಗ ಭೂಮಿಗೆ ಕಾಲಿಟ್ಟರು.ಅನೇಕ ರಂಗಭೂಮಿ ಕಲಾವಿದರಿಗೆ ಮಾದರಿ ಆಗಿದ್ದಾರು. ಹಲವಾರು ಜನರು ಬಂದು ಬಾಬಣ್ಣ ಅವರ ಬಳಿ ರಂಗಭೂಮಿಯ ತಾಲೀಮು ಪಡೆಯುತ್ತಿದ್ದರು.
ಪ್ರಶಸ್ತಿ: ರದರಾಜ ಪ್ರಶಸ್ತಿ, ಬಳ್ಳಾರಿಯ ರಾಘವ ಕಲಾ ಬಳಗ ಕೊಡುವ ರಾಘವ ರಾಜ್ಯ ಪ್ರಶಸ್ತಿ ಹಾಗು ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಅನ್ಯರಾಜ್ಯ ಸಂಸ್ಥೆಗಳು ಸನ್ಮಾನಿಸಿ ಬಾಬಣ್ಣ ಅವರನ್ನು ಗೌರವಿಸಿವೆ.
ಈಡೇರದ ಆಸೆ ; ಕಡುಕಷ್ಟದ ಬದುಕಿನ ನಡುವೆಯೂ ರಂಗಭೂಮಿಯಾಗಿ ಜೀವ ಹಾಗೂ ಜೀವನವನ್ನೇ ಮುಡಿಪಾಗಿಟ್ಟ ಬಾಬಣ್ಣ ಕಲ್ಮನಿ ಅವರ ಆಸೆ ಕೊನೆಗೂ ಈಡೇರಲಿಲ್ಲ. 2021–22ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಅವರಿಗೆ ಘೋಷಣೆಯಾಗಿದೆ ಅಷ್ಟೇ ಅವರು ಆ ಪ್ರಶಸ್ತಿ ಪಡೆಯಲೆ ಇಲ್ಲಾ. ಸರ್ಕಾರ ಉತ್ತರ ಕರ್ನಾಟಕದ ಕಲಾವಿದರನ್ನು ಗೌರವಿಸುವಲ್ಲಿ ತಾರತ್ಯ ಮಾಡುತ್ತದೆ ಎಂಭುದಕ್ಕೆ ಇದೇ ಹಿಡಿದ ಕನ್ನಡಿ ಆಗಿದೆ.