WhatsApp Image 2024-01-25 at 3.45.01 PM

14ನೇ ರಾಷ್ಟ್ರೀಯ ಮತದಾರರ ದಿನ ಮತ ಯಾರಿಗೆ ನೀಡಬೇಕು ಎಂಬುದು ನಿಮಗೆ ಗೊತ್ತು ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,25 – ರಾಷ್ಟ್ರೀಯ ಮತದಾರರ ದಿನ ದೇಶದ ಎಲ್ಲಾ ಮತದಾರರ ಒಂದೊಂದು ಮತವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆಯಲ್ಲಿ ನಿರ್ಣಾಯಕವಾಗಿರುತ್ತದೆ ನಿಜವಾದ ಅರ್ಥದಲ್ಲಿ ಮತ ಯಾರಿಗೆ ನೀಡಬೇಕು ಎಂಬುದು ನಿಮಗೆ ಗೊತ್ತಿದೆ ಅದಕ್ಕಾಗಿ ನಾನು ನಿಮಗೆ ಮತದಾರರ ಬಗ್ಗೆ ಹೇಳುವದು ಬೇಕಾಗಿಲ್ಲ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಥಮ ದರ್ಜೆ ನ್ಯಾಯ ದಂಡ ಹಾಗೂ ಸದಸ್ಯ ಕಾರ್ಯದರ್ಶಿ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.

ಸಿರುಗುಪ್ಪ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಭಾರತ ಚುನಾವಣಾ ಆಯೋಗ ಕರ್ನಾಟಕ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯ ತಾಲೂಕು ಸ್ವೀಪ್ ಸಮಿತಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಕಂದಾಯ ಶಿಕ್ಷಣ ಇಲಾಖೆಗಳ ಸಹಭಾಗಿತ್ವದಲ್ಲಿ 14ನೇ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಅವರು ಹಸಿರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಕಾನೂನು ಸೇವೆಗಳ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಇರಬೇಕು ಎಂದರು.

ಯಾವುದೇ ಸಮಸ್ಯೆ ವಿವಿಧ ತಕರಾರುಗಳಿಗೆ ಬಡವರಿಗಾಗಿ ಕಾನೂನಿನ ಉಚಿತ ಕಾನೂನು ಪಡೆಯಲು ಕಾನೂನು ಪ್ರಾಧಿಕಾರ ಇರುತ್ತದೆ ನ್ಯಾಯಾಲ ಯದಲ್ಲಿ ನ್ಯಾಯ ನಿಮ್ಮದು ಇದ್ದರೆ ನೆರವು ನಮ್ಮದಾಗಿರುತ್ತದೆ ಎಂದು ಅವರು ಮಾತನಾಡುತ್ತಿದ್ದರು ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಅವರು ಮಾತನಾಡಿ ನಮ್ಮ ಸಂವಿಧಾನ ಭಾರತೀಯ ಪ್ರಜೆಗಳಿಗೆ ಮತದಾನದ ಪರಮಾವಧಿ ಅಧಿಕಾರ ನೀಡಿದೆ ಮತದಾನದ ವಿಧಾನ ಯಾವ ಅಮಿಷಗಳಿಗೂ ಬಲಿಯಾಗದೆ ಸ್ವಯಂ ಸ್ಪೂರ್ತಿಯಿಂದ ಮತ ಚಲಾಯಿಸಬೇಕು ಎಂದು ಹೇಳಿದರು.

ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದಾ ಅವರು ಮಾತನಾಡಿ ರಾಷ್ಟ್ರದಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಸತ್ಯ ಶುದ್ಧ ಚಿಂತನೆಯ ಜನಪರ ವ್ಯಕ್ತಿತ್ವದ ಶ್ರೇಷ್ಠ ಪ್ರಜಾಪ್ರತಿ ನಿಧಿಯರನ್ನು ಆಯ್ಕೆ ಮಾಡಲು ಮಾತನಾಡಿದರು ಕಾಲೇಜು ಪ್ರಾಂಶುಪಾಲರಾದ ಡಾ ಪಿ ವೀರಭದ್ರಪ್ಪ ತಂಬ್ರಹಳ್ಳಿ ಅವರು ಮಾತನಾಡಿ ವಿಶ್ವದ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ಭಾರತ ಎಂದು ನುಡಿಯುತ್ತ ಮಾತನಾಡುತ್ತಿದ್ದರು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಎಚ್ ವಿಶ್ವನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಭಾರತೀಯ ಪೌರತ್ವವನ್ನು ಹೊಂದಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ಮತದಾರರನ್ನು ಮತದಾನದತ್ತ ಆಕರ್ಷಿಸಲು ಕೇಂದ್ರ ಸರ್ಕಾರ 2011 ಜನವರಿ 25ರಿಂದ ದೇಶದಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದರು.

ಮತದಾರರ ಪ್ರತಿಜ್ಞ ವಿಧಿ ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾ ಸತ್ತಾತ್ಮಕ ಸಂಪ್ರದಾ ಯಗಳು ಮತ್ತು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ ಜನಾಂಗ ಜಾತಿ ಮತ ಭಾಷೆ ಅಥವಾ ಯಾವುದೇ ಪ್ರೇರೇಪಣೆ ಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಕೆ ಎಂ ಚಂದ್ರಕಾಂತ ಅವರು ಕಾರ್ಯಕ್ರಮ ನಿರೂಪಿಸಿ ಸರ್ವರನ್ನು ಸ್ವಾಗತ ಬಯಸಿದರು

ತಾಲೂಕ ತಹಸಿಲ್ದಾರ ಕಚೇರಿಯ ಶಿರಸ್ತೆದಾರ್ ರವೀಂದ್ರ ಬಾಬು ಕೇಸ್ ವರ್ಕರ್ ಯಾಕ್ಶನ್ ಕೆ ನವೀನ್ ಕುಮಾರ್ ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕ ಹಿರಿಯರಾದ ಹಾಜಿ ಅಬ್ದುಲ್ ನಬಿ ವಕೀಲರ ಸಂಘದ ಅಧ್ಯಕ್ಷರಾದ ಎಸ್ ಮಂಜುನಾಥಗೌಡ ಕಾರ್ಯದರ್ಶಿ ಹೆಚ್ ಪ್ಯಾಟೆ ಗೌಡ ವಕೀಲರ ತಂಡದ ಎನ್ ಅಬ್ದುಲ್ ಸಾಬ್ ರಾ ರಾವಿ ಹೆಚ್ ಕೆ ರಾಮಪ್ಪ ವೆಂಕಟೇಶ್ ನಾಯಕ ಮಲ್ಲಿ ಗೌಡ ಕೆ ಸಣ್ಣ ಹುಸೇನ್ ಕಾಲೇಜಿನ ಜಿನ್ನಿನ ಕೊಟ್ರಪ್ಪ ಕೃಷ್ಣಪ್ಪ ನಾಯಕ ಡಾ ಎಸ್ ಮಹೇಶ್ವರಿ ಅಂಬುತಾಯಿ ಯಮನೂರಪ್ಪ ಶಿಕ್ಷಕರು ಗವಾಯಿಗಳಾದ ನಾಮ ಜಗದೀಶ ಶಿಕ್ಷಣ ಸಂಯೋಜಕ ಬಸವರಾಜ ಸ್ವಾಮಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು ತಾಲೂಕ ಪಂಚಾಯತ್ ಯೋಜನಾಧಿಕಾರಿ ಸುಜಾತ ಕೋರಿ ಅವರು ಮಾತನಾಡಿ ಮತದಾರರ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಬಹುಮಾನ ವಿತರಿಸಲಾಯಿತು ಆರಂಭದಲ್ಲಿ ನಾಡಗೀತೆ ಪ್ರಸ್ತಾವಿಕ ನುಡಿ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!