
ವಚನ ಚಿಂತನಾಗೊಷ್ಠಿ ಹಾಗೂ ಲಿಂಗೈಕ್ಯ ಬಸವಯ್ಯ ಶಶಿಮಠ ಶರಣರ 2ನೇ ವರ್ಷದ ಪೂಣ್ಯ ಸ್ಮರಣೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,24- ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದ ಆವರಣದಲ್ಲಿ ಸ್ಥಳಿಯ ಬಸವ ಕೇಂದ್ರದ ವತಿಯಿಂದ 260 ನೇಯ ವಚನ ಚಿಂತನ ಗೋಷ್ಠಿ ಹಾಗೂ ಕೊಪ್ಪಳದ ಹಿರಿಯ ಅನುಭಾವಿ ಶರಣ ಲಿಂಗೈಕ್ಯ ಬಸವಯ್ಯ ಶಶಿಮಠ ಶರಣರ 2 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಜರುಗೀತು.
ಸ್ಥಳಿಯ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿ ಲಿಂ.ಬಸವಯ್ಯ ಶಶಿಮಠ ಶರಣರು ತಮ್ಮ ಬಸವಾದಿ ಶರಣರ ವಚನಗಳನ್ನು ಕೊಪ್ಪಳ ಜಿಲ್ಲೆಯ ಹಾಗೂ ರಾಜ್ಯದ ಅನೇಕ ಗ್ರಾಮಗಳಲ್ಲಿ ಸಂಚರಿಸಿ ವಚನಗಳ ಮೂಲಕ ಬಸವಾದಿ ಶರಣರು ಸಾರಿದ ವಿಚಾರಧಾರೆಯನ್ನು ಹಂಚಿಕೊಂಡಿದ್ದಾರೆ.
ಬಸವಯ್ಯ ಶಶಿಮಠ ಶರಣರು ತಮ್ಮ ಕುಟುಂಬವನ್ನು ಸಂಪೂರ್ಣ ಬಸವ ಕುಟುಂಬವನ್ನಾಗಿ ಬದಲಾವಣೆ ಮಾಡಿದರು ಇಂದು ಅವರ ಕುಟುಂಬ ಬಸವೇಶ್ವರ ಟ್ರಸ್ಟ್ ಎಂಬ ಸಂಸ್ಥೆ ಮೂಲಕ ಕೊಪ್ಪಳ ಜಿಲ್ಲಾ ಹಾಗೂ ಅನೇಕ ಕಡೆಗಳಲ್ಲಿ ಬಸವಾದಿ ಶರಣರ ವಚನಗಳನ್ನು ತಿಳಿಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ ಮತ್ತು ರಾಜ್ಯ ಸರ್ಕಾರ ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿರುವದಕ್ಕೆ ರಾಜ್ಯ ಸರ್ಕಾರಕ್ಕೆ ಸ್ಥಳಿಯ ಬಸವಕೇಂದ್ರದ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ತಾಲೂಕ ಪಂಚಾಯತ ಮಾಜಿ ಸದಸ್ಯ ಷಣ್ಮಖಪ್ಪ ಬಳ್ಳಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಸವಕೇಂದ್ರ ಗೌರವಾಧ್ಯಕ್ಷ ಹನಮಗೌಡ ಬಳ್ಳಾರಿ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಪಂಪನಗೌಡ ಮಾಲಿ ಪಾಟೀಲ್, ಫೀರಸಾಭ ಮುಲ್ಲಾರ,ಸಂಗಪ್ಪ ಲಂಡಿ.ಶರಣಪ್ಪ ಮೇಟಿ.ಹನಮಂತಪ್ಪ ಗೊರ್ಲಿ,ಮಲ್ಲಪ್ಪ ಬಳ್ಳಾರಿ ವೇಮಣ್ಣ ಬಳ್ಳಾರಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು