
ಸಿರುಗುಪ್ಪ: ಲೋಕಸಭಾ ಚುನಾವಣೆ ದಿನ ಘೋಷಣೆ ಬ್ಯಾನರ್ ಗಳ ತೆರವು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ- ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ತಹಸಿಲ್ದಾರ್ ಶಂಶೇ ಆಲಂ ಹಾಗೂ ನಗರಸಭೆ ಪೌರಾಯುಕ್ತ ಹೆಚ್ ಎನ್ ಗುರುಪ್ರಸಾದ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿರುಗುಪ್ಪ ನಗರದ ವಿವಿಧೇಡೆ ಅಳವಡಿಸಿದ ಬ್ಯಾನರ್ ಫೇಲಕ್ಸ್ ಕಟೌಟ್ ಗಳನ್ನು ತೆರವು ಗೊಳಿಸಿದರು.
ನಗರದ ಕನಕದಾಸ ಮಹರ್ಷಿ ವಾಲ್ಮೀಕಿ ಮಹಾತ್ಮ ಗಾಂಧೀಜಿ ಡಾ ಬಿ ಆರ್ ಅಂಬೇಡ್ಕರ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವೃತ್ತಗಳು ಬಳ್ಳಾರಿ ರಸ್ತೆ ಆದೋನಿ ರಸ್ತೆ ಸಿಂಧನೂರು ರಸ್ತೆ ವಿವಿಧಡೆ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ 92- ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಬಳ್ಳಾರಿ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಎಂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ ಜೊತೆಗೆ ಚುನಾವಣೆಯ ಆಯೋಗದ ಆದೇಶದ ಅನ್ವಯ ಜಿಲ್ಲಾಧಿಕಾರಿಗಳ ನಿರ್ದೇಶನಗಳ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಶಂಶೇ ಆಲಂ ಅವರು ತಿಳಿಸಿದರು.