
ವಿಜಯನಗರ ಜಿಲ್ಲೆಯಲ್ಲಿ ಶೇ.75.24 ರಷ್ಟು ಮತದಾನ : ಎಂ.ಎಸ್.ದಿವಾಕರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 8- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನವು ಮೇ 7ರಂದು ವಿಜಯನಗರ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಶಾಂತಯುತವಾಗಿ ನಡೆದಿದ್ದು, ಮತದಾನದ ಮುಕ್ತಾಯದ ಅವಧಿ ಸಂಜೆ 6 ಗಂಟೆವರೆಗೆ ವಿಜಯನಗರ ಜಿಲ್ಲೆಯಲ್ಲಿ ಶೇ.75.24ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಹಡಗಲಿಯಲ್ಲಿ 218, ಹಗರಿಬೊಮ್ಮನಹಳ್ಳಿಯಲ್ಲಿ 254, ವಿಜಯನಗರದಲ್ಲಿ 259, ಕೂಡ್ಲಿಗಿಯಲ್ಲಿ 250 ಹಾಗೂ ಹರಪನಹಳ್ಳಿಯಲ್ಲಿ 253 ಸೇರಿ ಒಟ್ಟು 1234 ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆ ನಡೆಯಿತು. ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕೂಡ್ಲಿಗಿ, ಹರಪನಹಳ್ಳಿ ವಿಧಾನಸಭಾ ಮತಕ್ಷೇತ್ರಗಳಲ್ಲಿನ 5,62,166 ಪುರುಷರು ಹಾಗೂ 5,66,527 ಮಹಿಳೆಯರು ಮತ್ತು ಇತರೆ 142 ಸೇರಿ ಒಟ್ಟು 11,28,835 ಮತದಾರರ ಪೈಕಿ ಬೆಳಗಿನ 7 ರಿಂದ 9 ಗಂಟೆವರೆಗೆ 86,851 ಜನರು ಮತ ಚಲಾಯಿಸಿ ಶೇ.7.69ರಷ್ಟು, ಬೆಳಗಿನ 11 ಗಂಟೆವರೆಗೆ 2,80,083 ಜನರು ಮತ ಚಲಾಯಿಸಿ ಶೇ.24.81ರಷ್ಟು, ಮಧ್ಯಾಹ್ನ 1 ಗಂಟೆವರೆಗೆ 4,86,183 ಜನರು ಮತಚಲಾಯಿಸಿ ಶೇ.43.07ರಷ್ಟು, ಮಧ್ಯಾಹ್ನ 3 ಗಂಟೆವರೆಗೆ 6,43,469 ಜನರು ಮತಚಲಾಯಿಸಿ ಶೇ.57.00ರಷ್ಟು ಹಾಗೂ ಸಂಜೆ 5 ಗಂಟೆವರೆಗೆ 7,93,286 ಜನರು ಮತ ಚಲಾಯಿಸಿ ಶೇ.70.27ರಷ್ಟು ಮತ್ತು ಮತದಾನದ ಮುಕ್ತಾಯದ ಅವಧಿ ಸಂಜೆ 6 ಗಂಟೆವರೆಗೆ ಒಟ್ಟು 8,49,379 ಜನರು ಮತ ಚಲಾಯಿಸಿ ಶೇ.75.24ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ.
ಕ್ಷೇತ್ರವಾರು ಮತದಾನದ ವಿವರ: ಹಡಗಲಿ ಕ್ಷೇತ್ರದಲ್ಲಿ ಒಟ್ಟು 1,96,858 ಮತದಾರರ ಪೈಕಿ ಸಂಜೆ 6 ಗಂಟೆವರೆಗೆ 1,47,736 ಜನರು ತಮ್ಮ ಮತಹಕ್ಕನ್ನು ಚಲಾಯಿಸಿ ಶೇ.75.05ರಷ್ಟು ಮತದಾನವಾಗಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು 2,37,811 ಮತದಾರರ ಪೈಕಿ ಸಂಜೆ 6 ಗಂಟೆವರೆಗೆ 1,85,439 ಜನರು ಮತ ಚಲಾಯಿಸಿ ಶೇ.77.98ರಷ್ಟು ಮತದಾನವಾಗಿದೆ. ವಿಜಯನಗರ ಕ್ಷೇತ್ರದಲ್ಲಿ ಒಟ್ಟು 2,60,197 ಮತದಾರರ ಪೈಕಿ 1,82,987 ಜನರು ಮತ ಚಲಾಯಿಸಿ ಶೇ.70.33ರಷ್ಟು ಮತದಾನವಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ ಒಟ್ಟು 2,09,996 ಮತದಾರರ ಪೈಕಿ 1,60,823 ಜನರು ತಮ್ಮ ಮತಹಕ್ಕನ್ನು ಚಲಾಯಿಸಿದ್ದು ಶೇ.76.58ರಷ್ಟು ಮತದಾನವಾಗಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಒಟ್ಟು 2,23,973 ಮತದಾರರ ಪೈಕಿ 1,72,394 ಜನರು ಮತ ಚಲಾಯಿಸಿ ಶೇ.76.97ರಷ್ಟು ಮತದಾನವಾಗಿದೆ. ಒಟ್ಟಾರೆ ಮತದಾನವು ಆರಂಭಗೊಂಡ ಬೆಳಗಿನ 7 ಗಂಟೆಯಿAದ 9 ಗಂಟೆವರೆಗೆ ಶೇ.7.69ರಷ್ಟು, ಬೆಳಗಿನ 11 ಗಂಟೆವರೆಗೆ ಶೇ.24.81ರಷ್ಟು, ಮಧ್ಯಾಹ್ನ 1 ಗಂಟೆವರೆಗೆ ಶೇ.43.07ನಷ್ಟು, ಮಧ್ಯಾಹ್ನ 3 ಗಂಟೆವರೆಗೆ ಶೇ.57.00ರಷ್ಟು ಹಾಗೂ ಸಂಜೆ 5 ಗಂಟೆವರೆಗೆ ಶೇ.70.27ರಷ್ಟು ಮತ್ತು ಅಂತಿಮವಾಗಿ ಸಂಜೆ 6 ಗಂಟೆವರೆಗೆ ಶೇ.75.24ರಷ್ಟು ಮತದಾನದ ಪ್ರಮಾಣವು ಪ್ರಮಾಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಸುವ್ಯವಸ್ಥೆ: ಮತದಾನದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿತ್ತು. ವಿಕಲಚೇತನ ಮತದಾರರು, ಹಿರಿಯ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಲ್ಲಿ ವೀಲ್ಚೇರ್ ವ್ಯವಸ್ಥೆ ಮಾಡಲಾಗಿತ್ತು.
ಬಿಸಿಲಿನ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಲು ಎಲ್ಲಾ ಮತಗಟ್ಟೆಗಳಿಗೆ ವೈದ್ಯಕೀಯ ಸಾಮಗ್ರಿಯ ಕಿಟ್ಗಳನ್ನು ಸರಬರಾಜು ಮಾಡಲಾಗಿತ್ತು. ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಗತ್ಯಕ್ಕೆ ತಕ್ಕಂತೆ ಎಲ್ಲಾ ಮತಗಟ್ಟೆಗಳಿಗೆ ನಿಯೋಜಿಸಿ ಮುಂಜಾಗ್ರತೆ ವಹಿಸಿದ್ದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾನವು ಮೇ 7ರಂದು ಬೆಳಗ್ಗೆ 7 ಗಂಟೆಯಿAದ ಮತದಾನದ ಅವಧಿ ಮುಕ್ತಾಯದವರೆಗೆ ಶಾಂತಿಯುತವಾಗಿ ಮತದಾನದ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.