
ವಿದ್ಯಾರ್ಥಿಗಳು ಸಮಾಜ ಸೇವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು : ಪ್ರಾಚಾರ್ಯ ಡಾ. ರಾಮಕಿರಣ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,23- ವಿದ್ಯಾರ್ಥಿಗಳು ಓದಿಗಷ್ಟೇ ಸೀಮತವಾಗದೆ, ಸಮಾಜ ಸೇವ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಬೇಕೆಂದು ಬಳ್ಳಾರಿಯಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ , ಶ್ರೀ ಮೇ ಧಾ ಮಹಾವಿದ್ಯಾಲಯದ ಪದವಿ ಮಹಾವಿದ್ಯಾಲಯ ದ ಪ್ರಾಚಾರ್ಯರು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ನಿರ್ದೇಶಕರು ಆದ, ಡಾ. ಕೆ. ರಾಮ್ ಕಿರಣ್ ಕರೆ ನೀಡಿದರು.
ವಿದ್ಯಾಲಯದ ವತಿಯಿಂದ ಹಿಂದಿನಿಂದ 7 ದಿನಗಳ ಕಾಲ, ಬಳ್ಳಾರಿ ಗ್ರಾಮೀಣ ವಿಭಾಗದಲ್ಲಿ ಬರುವ, ಸಂಗನಕಲ್ಲು ಗ್ರಾಮದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಏ ಮತ್ತು ಬಿ ಘಟಕಗಳಿಂದ ನಡೆಯುವ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪೂಜ್ಯ ಪಿತಾ, ಸ್ವಾತಂತ್ರ್ಯ ಹೋರಾಟ ಗಾರರು ಆದ ಮಹಾತ್ಮ ಗಾಂಧೀಜಿ ಹೇಳಿದಂತೆ ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿಯನ್ನು ಕಾಣಬಹುದು ಎಂದು, ಆದಕಾರಣ ಯುವತಿ ಗ್ರಾಮೀಣ ಪ್ರಾಂತಗಳಲ್ಲಿ ಇತರ ಸಮಾಜ ಸೇವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಪ್ರಧಾನವಾಗಿ ವಿದ್ಯಾವಂತರು ಹಳ್ಳಿಗಳಲ್ಲಿ ಆರೋಗ್ಯ ವಿದ್ಯೆ ಸಾಮಾಜಿಕ ನ್ಯಾಯ ತರಹ ವಿಷಯಗಳ ಮೇಲೆ ನಿರಕ್ಷರಾಸರಿಗೆ ತಿಳಿಸಬೇಕೆಂದರು. ಶ್ರೀ ಮೇಧಾ ಎನ್ಎಸ್ಎಸ್ ವಿದ್ಯಾರ್ಥಿಗಳು ಸಂಗನಕಲ್ಲು, ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ, ಸಮಾಜ ಸೇವಾ ಕಾರ್ಯಕ್ರಮ ಯಶಸ್ವಿ ಆಗಬೇಕೆಂದು ಹಾರೈಸಿದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮತ್ತೋರುವ ಅತಿಥಿ, ಜಿ ಮನೋಹರ್ ಬಾಬು ಮಾತನಾಡುತ್ತಾ, ಶ್ರೀಮೇ ಧಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಏಳು ದಿನಗಳ ಕಾಲ ಸಂಘದ ಗ್ರಾಮದಲ್ಲಿ ತಂಗಿ ಗ್ರಾಮದ ಸ್ವಚ್ಛತೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಕಾನೂನು ಬಗ್ಗೆ ತಿಳುವಳಿಕೆ ಈ ರೀತಿಯಾಗಿ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡಿರುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರ ಅಧಿಕಾರಿಗಳು, ಬಿಸಿಎ ವಿಭಾಗದ ಹೆಚ್ಓ ಡಿ ಬಿ ಮಂಜುನಾಥ್, ಸಂಗನಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರು, ಶ್ರೀಮತಿ ಪರಿಮಳ, ದೈಹಿಕ ಶಿಕ್ಷಕರು ರಾಜು, ಪಂಚಾಯತಿ ಸದಸ್ಯರು ಗ್ರಾಮ ಮುಖಂಡರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.