WhatsApp Image 2024-01-24 at 7.55.33 PM

ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮ : ಶಿವಶಂಕರ ಕರಡಕಲ್

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ ,25- ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ  ಮತದಾನದ ಮಹತ್ವ ಅರಿತು ಪ್ರತಿಯೊಬ್ಬರು ಮತ ಚಲಾಯಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಶಿವಶಂಕರ ಕರಡಕಲ್ ತಿಳಿಸಿದರು.

ಭಾರತ ಚುನಾವಣಾ ಆಯೋಗ .ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ,ಹಾಗೂ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸ್ವೀಫ್ ಸಮಿತಿ ಕೊಪ್ಪಳ ಹಾಗೂ ತಾಲೂಕ ಸ್ವೀಫ್ ಸಮಿತಿ ಯಲಬುರ್ಗಾದ ವತಿಯಿಂದ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಸಾರ್ವಜ ನಿಕರಿಗೆ ಮತದಾನದ ಬಗ್ಗೆ ಮಾಹಿತಿ ನೀಡಬೇಕು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಾರ್ವತ್ರಿಕ ಚುನಾವಣೆ ಪಾತ್ರ ನಿರ್ಣಾಯಕ. ಈ ಕಾರಣಕ್ಕಾಗಿ ಮತದಾನಕ್ಕೆ ಮುಂಚೆ ಯಾವುದೇ ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಮತ ಚಲಾಯಿಸಿ ದೇಶದ ಅಭಿವೃದ್ದಿಗೆ ಸಹಕರಿಸ ಬೇಕೆಂದರು.

ಪ್ರಾಸ್ತಾವಿಕವಾಗಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ತ ಡಾ.ಸಂದಿಪ ಸಾಳುಂಕೆ ಮಾತನಾಡಿ ಮೊದಲ ಮತದಾನದ ಹಕ್ಕು ಬಂದ ತಕ್ಷಣ ಮತದಾರದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಮತದಾರರು ಹಣ, ಮದ್ಯದ ಆಮಿಷಕ್ಕೆ ಒಳಗಾದರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಆದ್ದರಿಂದ ಯುವ ಮತದಾರರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು, ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕು. ಕೆಲವರಿಗೆ ಇವಿಎಂಗಳ ಯಂತ್ರದ ಬಗ್ಗೆ ಅಪನಂಬಿಕೆಯಿದೆ. ಪ್ರತಿ ಮತದಾರರು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ವಾತಾವರಣ ಸೃಷ್ಟಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಸುಮಂತ ಕುಮಾರ ಜೈನ್ ವಹಿಸಿದ್ದರು.ಸಿಡಿಸಿ ಸದಸ್ಯರುಗಳಾದ ಕಾಸಿಂ ಸಾಬ ಗುಬ್ಬಿ.ಹನಮೇಶ ಚಿಣಗಿ.ಬಸವರಾಜ ಸಜ್ಜನ್ ನಿರುಪಾದಿ ದಾಸರ್ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಂಜುಶಾಸ್ತ್ರಿ ಹಿರೇಮಠ. ಸದಸ್ಯ ಹುಸೇನ್ ಬಿ ಅತ್ತಾರ.ಮುಖಂಡ ಗಾಳೇಪ್ಪ ಓಜನಹಳ್ಳಿ .ಉಪನ್ಯಾಸಕರಾದ ಯಮನೂರಪ್ಪ ತಳವಾರ.ಬಸವಂತಪ್ಪ. ಕೆ.ಹೊಸಳ್ಳಿ ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು

Leave a Reply

Your email address will not be published. Required fields are marked *

error: Content is protected !!