64bfa37f-2616-4d34-895a-377955b58c26

 ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡುವ

ವೆಬ್‌ಸೈಟ್/ ಆಪ್‌ಗಳ ಬಗ್ಗೆ ಎಚ್ಚರ ವಿರಲಿ

ಕೊಪ್ಪಳದ ಸೈಬರ್ ಠಾಣೆ ಪಿಐ ಅಮರೇಶ ಹುಬ್ಬಳ್ಳಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೫- ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡುವ ಆನ್‌ಲೈನ್ ಮೂಲದ ವೆಬ್‌ಸೈಟ್/ ಆಪ್‌ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ ಆನ್‌ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ ಎಂದು ಕೊಪ್ಪಳದ ಸೈಬರ್ ಠಾಣೆ ಪಿಐ ಅಮರೇಶ ಹುಬ್ಬಳ್ಳಿ  ಸಲಹೆ ನೀಡಿದರು.

ಅವರು ಕೊಪ್ಪಳದ ಸರ್ವೋದಯ ರೂರಲ್ ಐಟಿಐ ನಲ್ಲಿ ಶುಕ್ರವಾರದಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವರಿಂದ ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳಾದ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಒಡಪಿ, ಪಿನ್, ಯುಪಿಐ ಎಂಪಿಸ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

 

ಅಪರಿಚಿತ ಮೂಲದ ಎಸ್.ಎಂಎಸ್, ವಾಟ್ಸ್ ಆಪ್ ಹಾಗೂ ಇತರೆ ಮೆಸೆಂಜರ್‌ಗಳ ಮೂಲಕ ಸ್ವೀಕರಿಸುವ ಸಂದೇಶಇಮೇಲ್‌ಗಳಲ್ಲಿನ ಅಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಸರ್ಚ್ ಇಂಜಿನ್‌ನಲ್ಲಿ ಕಂಡುಬರುವ ಸಂಪರ್ಕಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತ ತಿಳಿಯಿರಿ.

ಆನ್‌ಲೈನ್ ಮೂಲಕ ಸಾಲ ನೀಡುವ ಅನಧಿಕೃತ ಆಪ್‌ಗಳನ್ನು ಬಳಸದಿರಿ.ನಿಮಗೆ ಲಾಟರಿ, ಉಡುಗೊರೆ ಇತ್ಯಾದಿ ಬಂದಿದೆ ಎಂದು ಪ್ರಚೋದಿಸಿ, ಪಡೆಯಲು ವಿವಿಧ ಶುಲ್ಕ ಪಾವತಿಸಬೇಕೆಂದುಹಣದ ಬೇಡಿಕೆ ಇಟ್ಟಲ್ಲ ನೀಡಬೇಡಿ. ಅಪರಿಚಿತರಿಂದ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಜಾಗ್ರತೆವಹಿಸಿ.ನಿಮ್ಮ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್‌ವರ್ಡ್‌ಗಳನ್ನು ಬಳಸಿ, ಅಲ್ಲದೇTwo Factor Authentication ಕೂಡಾ ಅಳವಡಿಸಿ,ಮಕ್ಕಳ ಅಶ್ಲೀಲ ಚಿತ್ರ, ದೃಶ್ಯಾವಳ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಅಪರಾಧ ಎಂದು ಎಚ್ಚರಿಸಿದರು.

ಈ ಸಂದಭ೯ದಲ್ಲಿ ಸಂಸ್ಥೆಯ ಪ್ರಚಾರರಾದ ನಿಂಗಪ್ಪ ಗೆದ್ದಿಗೇರಿ  ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!