
ಶರಣಂ ಆಸ್ಪತ್ರೆ ರದ್ದುಪಡಿಸಲು ಸಂಘಟನೆಗಳಿಂದ ಮನವಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 9- ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೆ ಬಸಾಪುರ ತಾಂಡದ ನಿವಾಸಿಯಾದ ತುಳುಚನಾಯ್ಕ್, ವಿಜಿಬಾಯಿ ದಂಪತಿಗಳ ಮಗನಾದ ಗೌತಮ್ ನಾಯ್ಕ್ (9) ವರ್ಷದ ಬಾಲಕ ಮೇ 8ರಂದು ಶರಣಂ ಆಸ್ಪತ್ರೆಯ ವೈದ್ಯರು ವಿನಯ್ ರಾಘವೇಂದ್ರ ಅವರು ನಿರ್ಲಕ್ಷ್ಯ ತೋರಿದ್ದರಿಂದ ಮಗುವಿನ ಸಾವಾಗಿದೆ ಎಂದು ಖಂಡಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗೋರ್ ಸೇನಾ ಕರ್ನಾಟಕ ಹೊಸಪೇಟೆ ತಾಲೂಕು ಘಟಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾ ಘಟಕದಿಂದ ಮತ್ತು ಗ್ರಾಮದ ನಿವಾಸಿಗಳೊಂದಿಗೆ ಸೇರಿ ಮಗುವಿನ ಸಾವಿಗೆ ಕಾರಣ ವಾಗಿರುವ ಡಾ. ವಿನಯ್ ರಾಘವೇಂದ್ರ ಅವರಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಭಂದಿಸಬೇಕು, ಶರಣಂ ಆಸ್ಪತ್ರೆಯ ಪರವಾಣಿಗೆಯನ್ನು ರದ್ದು ಪಡಿಸಬೇಕು, ಅವರ ಆಸ್ಪತ್ರೆಯ ಅನುಮತಿ ಸರ್ಟಿಫಿಕೆಟ್ ರದ್ದು ಪಡಿಸಬೇಕು, ಈ ಆಸ್ಪತ್ರೆಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ತಗ್ಗಿಸಬೇಕು. ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಅದೇ ಗ್ರಾಮದ( ತಾಳೆಬಾಸಾಪುರ ತಾಂಡಾದ) 3ಜನ ರೋಗಿಗಳು ಸಾವಿಗಿಡಾಗಿದ್ದಾರೆ. ಇವುಗಳನ್ನೆಲ್ಲ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದೇರೀತಿ ಮುಂದುವರಿದರೆ ಶರಣಂ ಆಸ್ಪತ್ರೆಯ ಮುಂದೆ ಧರಣಿ ಕುರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷರ ಗಾಳೆಪ್ಪ ಹೇಳಿದರು.
ಈ ಸಂಧರ್ಭದಲ್ಲಿ ಗೊರ ಸೇನಾ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಕುಮಾರ ನಾಯ್ಕ್, ರೈತ ಸಂಘ ಜಿಲ್ಲಾಧ್ಯಕ್ಷ ಸಿ.ಎ ಗಾಳೆಪ್ಪ, ತುಕಾರಾಂ ನಾಯ್ಕ್ , ಕಾರಬಾರಿ ಉಮಾಶಂಕರ್ ನಾಯ್ಕ್, ಗ್ರಾಮ ಪಂಚಾಯತಿ ಸದಸ್ಯ ಲಾಲ್ಯಾ ನಾಯ್ಕ್, ಶಂಕರ್ ನಾಯಕ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಠಾಕ್ರೆ ನಾಯ್ಕ್, ಮುನಿಯ ನಾಯ್ಕ್, ಪ್ರಕಾಶ್ ಕುಶ ನಾಯ್ಕ್, ಸೂರ್ಯ ನಾಯ್ಕ್ ಇತರರಿದ್ದರು.