IMG-20240713-WA0010

 

ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿರುದ್ಧ ಕುಷ್ಟಗಿ ಬ್ಲಾಕ್‌ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರು ನಾಲತವಾಡ ಖಂಡನೆ

ಕುಷ್ಟಗಿ:- ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಯಲಬುರ್ಗಾ ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕಾಂಗ್ರೆಸ್ ಸರಕಾರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಗ್ಯಾರಂಟಿಗಾಗಿ ಸರಕಾರದ ಬಳಿ ಹಣವಿಲ್ಲ ಎಂನ್ನುತ್ತಿದ್ದು ಇದು ಪಕ್ಷಕ್ಕೇ ಮುಜುಗರದ ಸಂಗತಿಯಾಗಿದ್ದು ಕೂಡಲೇ ಶಾಸಕ ರಾಯರೆಡ್ಡಿಯವರು ಈ ರೀತಿ ಹೇಳಕೆ ನೀಡಬಾರದು ಎಂದು ಕುಷ್ಟಗಿ ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಖಂಡನೆ ವ್ಯಕ್ತಪಡಿಸಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ರಾಯರೆಡ್ಡಿಯವರು ತಮ್ಮ ಸ್ವ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ ಅನುದಾನವನ್ನು ಪಡೆದುಕೊಂಡು ಈಗ ಕಾಂಗ್ರೇಸ್ ಸರಕಾದ ಗ್ಯಾರಂಟಿ ಯೋಜನೆಯಿಂದ ಸರಕಾರದ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಈ ಹೇಳಿಕೆ ಅತ್ಯಂತ ಖಂಡನೀಯವಾದ್ದು.  ನಮ್ಮ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಮಾಡಲು ಸರಕಾರದಲ್ಲಿ ಹಣವಿಲ್ಲ ಎಂದು ಬಹಿರಂಗವಾಗಿ ಹೇಳಿಕೆಯನ್ನು ಕೊಡುತ್ತಾರೆ ಇದು ಕಾಂಗ್ರೆಸ್ ಸರಕಾರಕ್ಕೆ ಮುಜುಗರ ತರುವಂತಹ ಹೇಳಿಕೆಯಾಗಿದೆ. ಇದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಲ್ಲಿ ನಮ್ಮ ಕಲ್ಯಾಣ ಕರ್ನಾಟಕಕ್ಕೆ ನಮ್ಮ ಕಾಂಗ್ರೆಸ್ ಪಕ್ಷದ ಸಿ.ಎಂ ಸಿದ್ರಾಮಯ್ಯನವರು 5 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಇಷ್ಟೊಂದು ಹಣವನ್ನು ಯಾವ ಒಂದು ಸರಕಾರ ಹಣ ನೀಡಿಲ್ಲ ರಾಯರಡ್ಡಿಯವರು ಕೇವಲ ಒಂದು ವರ್ಷದಲ್ಲಿ ಕಾಂಗ್ರೆಸ್ ಸರಕಾರದಿಂದ ಸಾಕಷ್ಟು ಅನುದಾನವನ್ನು ಪಡೆದುಕೊಂಡು ಈಗ ರಾಜ್ಯವನ್ನು ಅಭಿವೃದ್ಧಿ ಮಾಡಲು ಹಣವಿಲ್ಲ ಎಂದು ಹೇಳುತ್ತಾರೆ ಆದರೆ ನಿಮ್ಮ ಯಲಬುರ್ಗಾ ಕ್ಷೇತ್ರಕ್ಕೆ ಸುಮಾರು ಒಂದೇ ವರ್ಷದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಹಣ ಎಲ್ಲಿಂದ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.

ಲೋಕೋಪಯೋಗಿ  ಇಲಾಖೆ, ಕರೆ ತುಂಬಿಸುವ ಯೋಜನೆ, ಹೈಸ್ಕೂಲ್ ಗಳಿಗೆ, ಅನೇಕ ಇಲಾಖೆಗೆ ಅನುದಾನವನ್ನು ಪಡೆದುಕೊಂಡಿದ್ದಾರೆ ಆದರೆ ಇಂತಹ ಸಣ್ಣತನದ ಹೇಳಿಯನ್ನು ರಾಯರಡ್ಡಿಯವರು ನೀಡಬಾರದು ಒಬ್ಬ ಸರಕಾರದ ಆರ್ಥಿಕ ಸಲಹೆಗಾರರಾಗಿ ಈ ರೀತಿ ಮಾತನಾಡುವಂತದ್ದು ತಪ್ಪು. ನಾನು ಒಬ್ಬ ಕುಷ್ಟಗಿ ಬ್ಲಾಕ್ ಅಧ್ಯಕ್ಷನಾಗಿ ಖಂಡಸುತ್ತೇನೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!