
ಶ್ರೀರಾಮದೇವರ ಮಂತ್ರಾಕ್ಷತೆ
ವಿತರಣೆ ಕಾರ್ಯಕ್ಕೆ ಮಾಜಿ ಶಾಸಕರು ಚಾಲನೆ
ಶ್ರೀರಾಮಚಂದ್ರ ಭಾರತ ದೇಶದ ಪ್ರತಿಯೊಬ್ಬರಿಗೂ ಆದರ್ಶ
ಕರುನಾಡ ಬೆಳಗು ಸುದ್ದಿ
ಗಂಗಾವತಿ,ಡಿ೦೧-ನಗರದ ೩೧ರಿಂದ ೩೫ ವಾರ್ಡುಗಳವರೆಗೆ ಅಯೋಧ್ಯಾ ಶ್ರೀರಾಮ ದೇವರ ಭಾವಚಿತ್ರ ಹಾಗೂ ಮಂತ್ರಾಕ್ಷತೆ ವಿತರಣೆ ಕಾರ್ಯಕ್ಕೆ ಮಾಜಿ ಶಾಸಕ ದ್ವಯರಾದ ಪರಣ್ಣ ಮುನವಳ್ಳಿ,ಹೆಚ್.ಆರ್.ಶ್ರೀನಾಥ ಚಾಲನೆ ನೀಡಿದರು.
ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ ಸುಮಾರು ವರ್ಷಗಳಿಂದಲೂ ಶ್ರೀರಾಮ ದೇವರ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ಪರಿಕಲ್ಪನೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿಯವರು ರಾಮಾಯಣ ರಚಿಸಿದ ಮರ್ಹಷಿ ವಾಲ್ಮಕೀ ಗುರುಗಳ ಹೇಸರನ್ನು ಅಯೋಧ್ಯಾ ಅಂತರರಾಷ್ಟಿಯ ವಿಮಾನ ನಿಲ್ದಾಣ ನಾಮಕರಣ ಮಾಡುವದರ ಮೂಲಕ ಅಭಿವೃದ್ದಿ ಪರ್ವ ಹರಿಸಿದ್ದಾರೆ.
ವಿನೂತನ ಶೈಲಿ ವಂದೇ ಭಾರತ ರ್ವೇಲ್ವೆ ನಿಲ್ದಾಣ ಮಾಡುವದರ ಮೂಲಕ ಅಭಿವೃದಿಗೆ ನಾಂದಿ ಹಾಡಿದ್ದಾರೆ,ಜನವೇರಿ ೨೨ ದಿನಾಂಕ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಯಾಗಲಿದೆ ಸರ್ವರೂ ಹರಿಸೋಣ ಎಂದರು. ವಿಧಾನಪರಿಷತ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಮಾತನಾಡಿ ಸತನಾತನ ಹಿಂದೂ ಧರ್ಮದೊಂದಿಗೆ ಸರ್ವ ಭಾರತಿಯರು ಗೌರವಿಸುವಂತಹ ದಿವವ ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೇಗೆ ಪ್ರದಾನಮಂತ್ರಿ ನರೆಂದ್ರ ಮೋದಿ ಅಭಿನಮದಿಸೋಣ.
ಅದೇ ರೀತಿ ಕೇಂದ್ರ ಸರ್ಕಾರ ಹನುಮ ಉದಿಸಿದ ನಾಡು ಕಿಷ್ಕಿಂಧೆಯ ಅಂಜನಾದ್ರಿಯಲ್ಲಿ ಅಭಿವೃದಿಗೆ ಚಾಲನೆ ನೀಡಬೇಕು ಎಂದರು.
ವಿಶ್ವಹಿಂದೂ ಪರಿಷತ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ ಮಾತನಾಡಿ ಅಯೋಧ್ಯೆಯಿಂದ ಶ್ರೀರಾಮನ ಭಾವಚಿತ್ರಹಾಗೂ ರಾಮದೇವರ ಮಂತ್ರಾಕ್ಷತೆಯನ್ನು ನಗರದ ೩೫ವಾರ್ಡುಗಳಲ್ಲೂ ಮನೆಮನೆಗೆ ತೆರಳಿ ವಿತರಿಸಲಾಗುವುದು ಎಂದರು.ಹಿರೇಜಂತಕಲ್ ಶಂಖಚಕ್ರ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ೩೧ವಾರ್ಡಿನಿಂದ ೩೫ ವಾರ್ಡುಗಳಲ್ಲಿ ಮನೆಮನೆಗೆ ತೆರಳಿ ಶ್ರೀರಾಮನ ಭಾವಚಿತ್ರಹಾಗೂ ರಾಮದೇವರ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.
ನಗರಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಘವೆಂದ್ರ ಶೆಟ್ಟಿ,ಮಾಜಿಸದಸ್ಯ ಚಂದ್ರಪ್ಪ ಉಪ್ಪಾರ,ಅಮಾತೆಪ್ಪ,ಬಸವರಾಜ ಕೋರಿ,ಕೆಆರ್ ಪಿಪಿ ಮುಖಂಡರಾದ ವಿರೇಶ ಬಲಕುಂದಿ,ವಿರೇಶ ಸುಳೇಕಲ್, ಶ್ರೀದೇವಿ ನಾಗರಾಜ,ಗವಿಸಿದ್ದಪ್ಪ ಕುಂಬಾರ,ಜಿಕೆ ನಾಗರಾಜ,ಸುರೇಶ ಗೌರಪ್ಪ,ಗವಿಸಿದ್ದಪ್ಪ ರ್ಹಾಳ, ಮುಂತಾದವರು ಉಪಸ್ಥೀತರಿದ್ದರು.