2c136fae-be38-4577-97e1-318669006cc9

ಶ್ರೀಶೈಲ ದೇವಸ್ಥಾನ : ದರ್ಶನಕ್ಕೆ ವಿಶೇಷ ವ್ಯವಸ್ಥೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,27- ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಾ.01 ರಿಂದ 11 ರ ವರೆಗೆ ಮಹಾಶಿವರಾತ್ರಿ ಬ್ರಹೋತ್ಸವ ಅಂಗವಾಗಿ ಸ್ವಾಮಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪಕಲೆಕ್ಟರ್ ಡಿ.ಪೆದ್ದಿರಾಜು ಅವರು ತಿಳಿಸಿದ್ದಾರೆ.

ಬ್ರಹೋತ್ಸವದಲ್ಲಿ ಭಕ್ತರ ದಟ್ಟಣೆಯಿಂದ ಮಾ.01 ರಿಂದ 11 ರ ವರೆಗೆ ಶ್ರೀ ಸ್ವಾಮಿಯವರ ಅಲಂಕಾರ ದರ್ಶನ ಮಾತ್ರ ಕಲ್ಪಿಸಲಾಗುತ್ತದೆ. ಭಕ್ತರಿಗಾಗಿ ಉಚಿತ ದರ್ಶನವಲ್ಲದೆ ಶೀಘ್ರ ದರ್ಶನ ಮತ್ತು ಅತಿ ಶೀಘ್ರ ದರ್ಶನಗಳಿಗೆ ಕೂಡ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶೀಘ್ರ ದರ್ಶನಕ್ಕಾಗಿ ರೂ.200 ಮತ್ತು ಅತಿ ಶೀಘ್ರ ದರ್ಶನಕ್ಕಾಗಿ ರೂ.500 ಗಳನ್ನು ಪಾವತಿಸಬೇಕು. ಈ ಟಿಕೆಟ್‍ಗಳನ್ನು ಆನ್‍ಲೈನ್ ವಿಧಾನದಲ್ಲಿ ದೇವಸ್ಥಾನದ ವೆಬ್‍ಸೈಟ್ www.srisailadevasthanam.org ಮೂಲಕ ಮುಂಚಿತವಾಗಿ ಹೊಂದಬಹುದು. ಅಲ್ಲದೆ ಈ ಟಿಕೆಟ್‍ಗಳನ್ನು ದೇವಸ್ಥಾನದ ಕರೆಂಟ್ ಬುಕಿಂಗ್ ಮೂಲಕ ಕೂಡ ಕಾಲಕಾಲಕ್ಕೆ, ತಕ್ಷಣವೇ ಹೊಂದುವ ಅವಕಾಶ ಇದೆ.

ಬ್ರಹೋತ್ಸವಗಳ ಪ್ರಾರಂಭದಲ್ಲಿ ಐದು ದಿವಸಗಳು ಮಾ.01 ರಿಂದ 05 ರ ವರೆಗೆ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಹಂತ ಹಂತವಾಗಿ ನಿರ್ದಿಷ್ಟ ಸಮಯಗಳಲ್ಲಿ ಮಾತ್ರವೇ ಸ್ವಾಮಿಯವರ ಉಚಿತ ಸ್ಪರ್ಶ ದರ್ಶನ ಕಲ್ಪಿಸಲಾಗುತ್ತದೆ.

ಮಾ.05 ರಂದು ರಾತ್ರಿ 7:30 ರಿಂದ 11.03.2024 ರಾತ್ರಿಯವರೆಗೆ ಭಕ್ತರೆಲ್ಲರಿಗೂ ಶ್ರೀ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ ಮತ್ತು ಮಾ.01 ರಿಂದ 11 ರ ವರೆಗೆ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!