IMG-20240207-WA0026

ಸಂಕನೂರು ಗ್ರಾಮ ಪಂಚಾಯಿತಿ ಬಿಜೆಪಿ ಮಡಿಲಿಗೆ ಅಧ್ಯಕ್ಷರಾಗಿ ನಾಗವ್ವ ತಳವಾರ ಉಪಾಧ್ಯಕ್ಷರಾಗಿ ಪರಶುರಾಮ ಕದಡಿ ಅವಿರೋಧವಾಗಿ ಆಯ್ಕೆ 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,7- ತಾಲೂಕಿನ ಸಂಕನೂರು ಗ್ರಾಮ ಪಂಚಾಯತಿ ನ್ಯೊತನ ಅಧ್ಯಕ್ಷರಾಗಿ ನಾಗವ್ವ ಕಲ್ಲಪ್ಪ ತಳವಾರ. ಉಪಾಧ್ಯಕ್ಷರಾಗಿ ಪರಶುರಾಮ ಯಲ್ಲಪ್ಪ ಕದಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋದ ಆಯ್ಕೆಯಾಗುವ ಮೂಲಕ ಸಂಕನೂರು ಗ್ರಾಮ ಪಂಚಾಯತಿ ಬಿಜೆಪಿ ಪಕ್ಷದ ಮಡಲಿಗೆ ಜಾರಿತು, ಒಟ್ಟು ಹನ್ನೊಂದು ಸ್ಥಾನಗಳ ಸದಸ್ಯರ ಬಲಾ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಎರಡು ಸ್ಥಾನಕ್ಕೆ ಒಂದೊಂದೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ಅದ್ಯಕ್ಷರಾಗಿ ನಾಗವ್ವ ಕಲ್ಲಪ್ಪ ತಳವಾರ ಹಾಗು ಸಾಮಾನ್ಯ ಮೀಸಲಾತಿ ಉಪಾಧ್ಯಕ್ಷರಾಗಿ ಪರಾಶುರಾಮ ಕದಡಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣೆ ಅಧಿಕಾರಿ ಎಫ್ ಎಂ ಕಳ್ಳಿ ಆದೇಶ ಹೊರಡಿಸಿದರು.

ಬಿಜೆಪಿ ಕಾರ್ಯಕರ್ತರು, ಬಿಜೆಪಿ ಬೆಂಬಲಿಗರು ಆಯ್ಕೆಯಾಗಿದ್ದರಿಂದ ಅಪಾರ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡ ಬಿಜೆಪಿ ಪಕ್ಷದ ಮುಖಂಡರು ಸಾಕಷ್ಟು ಜನ ಕಾರ್ಯಕರ್ತರು ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಾಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅನೀಲ ಆಚಾರ್, ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ಕರಿಬಸಯ್ಯ ಬಿನ್ನಾಳ, ಬಸವರಾಜ ಹಾಳಕೇರಿ, ಮಲ್ಲಿಕಾರ್ಜುನ ತೊಂಡಿಹಾಳ, ಶರಣಪ್ಪ ದೊಡ್ಮನಿ, ಅಡವಿರಾವ್ ದೇಸಾಯಿ, ಬಸವರಾಜ ಅರಳಿ, ಮಾರುತೆಪ್ಪ ನಾಯ್ಕರ, ಮುದಿಯಪ್ಪ ಜ್ಯೋತಿ, ಕಳಕಪ್ಪ ಗೋಣ್ಣಾಗರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!