WhatsApp Image 2024-03-01 at 5.23.08 PM

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉದ್ಘಾಟನೆ

ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಲು ಮಾಹಿತಿ ನೀಡಿ : ಸಿಇಓ ಸದಾಶಿವ ಪ್ರಭು

ಕರುನಾಡ ಬೆಳಗು ಸುದ್ದಿ

ವಿಜಯನಗರ,1- ದೇಶದಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ ಮಕ್ಕಳ ಬಗ್ಗೆ ಸಂಪೂರ್ಣ ನಿರ್ಮೂಲನೆ ಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಹು ಪ್ರಯತ್ನ ನಡೆಸುತ್ತಿದ್ದು , ಇದರಲ್ಲಿ ಸಾರ್ವಜನಿಕರದ್ದು ಮಹತ್ವದ ಪಾತ್ರವಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು ತಿಳಿಸಿದರು.

ಅವರು ನಗರದ 16ನೇ ವಾರ್ಡ್, ಬಸವೇಶ್ವರ ಬಡಾವಣೆಯ, ಸಪ್ತಗಿರಿ ಶಾಲೆಯ ಹತ್ತಿರ ವಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ, ವಿಜಯನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಸಹಾಯವಾಣಿ ಕೇಂದ್ರ ಉದ್ಘಾಟನೆ ಮಾಡಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿಜಯನಗರ ಜಿಲ್ಲೆ ರಚನೆಯಾದ ಮೇಲೆ , ಜಿಲ್ಲೆಯಲ್ಲಿ ಮಕ್ಕಳ ಹಕ್ಕು ಮತ್ತು ರಕ್ಚಣೆಗಾಗಿ ನೇರವಾಗಿ ಸಹಾಯ ವಾಣಿ 1098 ಗೆ ಸಂಪರ್ಕಿಸಿದಲ್ಲಿ ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಬಹುದು. ಈ ಘಟನೆ ಸಂಭಂಧಿಸಿದಂತೆ ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ಮಕ್ಕಳ ರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು. ಸಹಾಯವಾಣಿಯನ್ನು ಮಕ್ಕಳ ರಕ್ಷಣೆಗಾಗಿಯೇ ಸ್ಥಾಪಿಸಲ್ಪಟ್ಟಿದೆ. ಅದ್ದರಿಂದ ಮಕ್ಕಳ ಹಕ್ಕುಗಳು ಮೊಟಕು ಆಗದಂತೆ ಅವರ ರಕ್ಷಣೆ ಮಾಡಲು ಸಾರ್ವಜನಿಕರಿಗೆ ಸಹಕರಿಸಲು ಕರೆ ನೀಡಿದರು.

ಜಿಲ್ಲಾ ಮಕ್ಕಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಅಧಿಕಾರಿ ಜಿಲ್ಲಾ ಉಪನಿರ್ದೇಶಕರಾದ ಶ್ವೇತಾ.ಎಸ್. ಮಾತನಾಡಿ ನೂತನವಾಗಿ ಜಿಲ್ಲಾಮಕ್ಕಳ ರಕ್ಷಣಾ ಘಟಕ ಮತ್ತು ಸಹಾಯ ವಾಣಿ 1098 ಆರಂಭವಾಗಿದ್ದು. ಸ್ಥಳೀಯ ಖಾಸಾಗಿ ಸಂಸ್ಥೆಗಳ ಹಾಗೂ ಸರ್ಕಾರಿ ಸಂಸ್ಥೆಗಳ ಕಾರ್ಯಕರ್ತರ ಸಹಾಯದಿಂದ ಮಕ್ಕಳ ರಕ್ಷಣೆಯನ್ನು ಮಾಡಲಾಗುವುದು ಬಾಲ ಕಾರ್ಮಿಕರು, ಬಿಕ್ಷಾಟನೆ, ಬಾಲ್ಯ ವಿವಾಹ ಮತ್ತು ಇತರೆ ತೊಂದರೆಯಲ್ಲಿದ್ದಾಗ ಸಹಾಯವಾಣಿಗೆ ಸಂಪರ್ಕಿಸಿ, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಕ್ಕಳ ರಕ್ಷಣಾ ಘಟಕದ ಸದಸ್ಯರನ್ನು ಸೇರಿಕೊಂಡು ಇದರ ಸಂಪೂರ್ಣ ನಿರ್ಮೂಲಕ್ಕೆ ಪ್ರಯತ್ನಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!