IMG_20240321_214927

ಸಂಸದರ ಮನೆಗೆ ರವಿಕುಮಾರ ಬೇಟಿ

ಸಂಗಣ್ಣ ಕರಡಿಗೆ ಹೈಕಮಾಂಡ ಬುಲಾವ್

ಕರುನಾಡ ಬೆಳಗು ಸುದ್ದಿ
ಕೊಪ್ಪಳ ,21- ಸಂಸದ ಸಂಗಣ್ಣ ಕರಡಿ ಅಸಮದಾನ ಸರಿಪಡಿಸಲು ಬೆಂಗಳೂರಿಗೆ ಬರಲು ಪಕ್ಷದ ಮುಖಂಡರು ತಿಳಿಸಿದ್ದು ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಬರಲಿದ್ದು ಹೈಕಮಾಂಡ ಎಲ್ಲವನ್ನು ಸರಿಪಡಿಸುವುದು ಎಂದು ಬಿಜೆಪಿ ರಾಜ್ಯ ಮುಖಂಡ ಹಾಗೂ ವಿಧಾನ ಪರಿಷತ್ ಮುಖ್ಯ‌ ಸಚೆತಕ ಎನ್ ರವಿಕುಮಾರ್ ಹೇಳಿದರು.
ಅವರು ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಅವರನ್ನು ಬೇಟಿಯಾದ ನಂತರ ಮಾತನಾಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಸಂಗಣ್ಣ ರಾಜ್ಯಕ್ಕೆ ಮಾದರಿ ಎನ್ನುವಂತೆ ಕೆಲಸ ಮಾಡಿದ್ದು ಅವರನ್ನು ಪಕ್ಷ ಕಡೆಗಣಿಸುವ ಮಾತೆ ಇಲ್ಲಾ,
ರಾಜ್ಯ ನಾಯಕರ ಸಮಯ ಪಡೆದು‌ ಸಂಗಣ್ಣ ಕರಡಿ ಅವರನ್ನು ಬೆಂಗಳೂರಿಗೆ ಕರೆಸಿ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡ ಶರಣು ತಳ್ಳಿಕೇರಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!