Screenshot_2024_0326_184245

ಸಂಗಣ್ಣ ಕರಡಿಗೆ ನಿರಾಸೆ ಮಾಡಿದ‌ ಬಿಜೆಪಿ ರಾಜ್ಯ ಮುಖಂಡರು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ಲೋಕಸಭಾ ಚುನಾವಣೆ ಟಿಕೆಟ್ ತಪಿದ ಹಿನ್ನೆಯಲ್ಲಿ ಹೈಕಮಾಂಡ ಬುಲಾವ ಮೆರೆಗೆ ಬೆಂಗಳೂರಿಗೆ ತೇರಳಿರುವ ಸಂಸದ ಸಂಗಣ್ಣ ಕರಡಿಅವರಿಗೆ ನಿರಾಸೆ ಮೂಡಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಮುಖಂಡರು ಸಂಗಣ್ಣ ಕರಡಿ ಅವರ ನಿರೀಕ್ಷೆಯಂತೆ ಸ್ಪಂದಿಸುತ್ತಿಲ್ಲಾ ಚುನಾವಣಾ ಬ್ಯಜಿ ಇರುವ ಮುಖಂಡರು ಸಂಗಣ್ ಕರಡಿ ಅವರಿಗೆ ಯಾವುದೆ ಭರವಸೆ ನೀಡಿಲ್ಲಾ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬಿಡು ಬಿಟ್ಟರುವ ಸಂಗಣ್ಣ ಕರಡಿ ಹಾಗೂ ಬೆಂಬಲಿಗರು ಅವರನ್ನು ಮನವೊಲಿಸಲು ಪಕ್ಷದ ವರಿಷ್ಠರು ಸೋಮವಾರ ಬೆಂಗಳೂರಿನಲ್ಲಿ ಕಸರತ್ತು ನಡೆಸಿದರು.

ಬೇಟಿ ; ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್ ಸೇರಿದಂತೆ ಹಲವರು ಸಂಗಣ್ಣ ಕರಡಿ ಮತ್ತು ಬೆಂಬಲಿಗರ ಜೊತೆ ಮೊದಲು ಸಭೆ ನಡೆಸಿದರು. ಬಳಿಕ ಜರುಗಿದ ಆಂತರಿಕ ಸಭೆಯಲ್ಲಿ ವರಿಷ್ಠರು ಮನವೊಲಿಸುವ ಪ್ರಯತ್ನ ಮಾಡಿದ್ದು ಟಿಕೆಟ್ ಪರಿಕ್ಷರಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

‘ಸತತ ಎರಡು ಬಾರಿ ಸಂಸದರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಸಂಗಣ್ಣ ಅವರಿಗೆ ಈ ಬಾರಿಯೂ ಟಿಕೆಟ್‌ ಕೊಡಬೇಕಿತ್ತು. ಈಗ ಘೋಷಣೆ ಮಾಡಿರುವ ಟಿಕೆಟ್‌ ಮರುಪರಿಶೀಲನೆ’ ಮಾಡಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ಸಂಸದ ಸಂಗಣ್ಣ ಕರಡಿ ಅವರು ಮನವಿಗೆ ಪ್ರತಿಕ್ರಿಯಿಸಿದ ವರಿಷ್ಠರು ’ಸಂಗಣ್ಣ ಅವರ ರಾಜಕೀಯ ಶಕ್ತಿ ಎನೆಂಬುದು ನಮಗೆ ಗೊತ್ತಿದೆ. ನಿಮ್ಮೆಲ್ಲರ ಅಭಿಪ್ರಾಯವನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತರಲಾಗುವುದು’ ಎನ್ನುವ ಭರವಸೆ ನೀಡಿದರು. ಆದರೆ ಒಂದು ಕ್ಷೇತ್ರದಲ್ಲಿ ಟಿಕೆಟ್‌ ಬದಲಾವಣೆ ಮಾಡಿದರೆ ಬೇರೆ ಕ್ಷೇತ್ರಗಳಲ್ಲಿಯೂ ಸಮಸ್ಯೆಯಾಗುತ್ತದೆ ಎನ್ನುವ ವಿಷಯವನ್ನು ಸಂಸದರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಸೂಚನೆ ; ಪಕ್ಷದ ಮುಖಂಡರು ಸಂಸದರಿಗೆ ಪಕ್ಷ ಘೋಷಿಸಿರುವ ಅಭ್ಯರ್ಥಿ ಗೆಲುವಿಗಾಗಿ ಎಲ್ಲರೂ ಕೆಲಸ ಮಾಡಬೇಕು. ಮುಂದೆ ಉತ್ತಮ ಸ್ಥಾನಮಾನಗಳು ಸಿಗುವ ಅವಕಾಶಗಳು ಇವೆ’ ಎಂದು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

ಸಂಗಣ್ಣ ನಡೆ ಯಾವ ಕಡೆ: ಟಿಕೆಟ್ ಬದಲಿಸಲು ಪಟ್ಟು ಹಿಡಿದಿರುವ ಸಂಗಣ್ಣ ಕರಡಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ ಅವರಿಗೆ ಬಿಜೆಪಿ ಈಗಾಗಲೇ ಟಿಕೆಟ್‌ ಘೋಷಣೆ ಮಾಡಿದ್ದು, ಅಂದಿನಿಂದಲೂ ಸಂಗಣ್ಣ ಕರಡಿ ಮತ್ತು ಅವರ ಬೆಂಬಲಿಗರು ಅಸಮಾಧಾನ ಗೊಂಡಿದ್ದ ಅವರ ನಡೆ ಇನ್ನು‌ ನಿಗುಡವಾಗಿದೆ.
ಟಿಕೆಟ್‌ ತಪ್ಪಿದಾಗ ಯಾವ ನಾಯಕರೂ ಸೌಜನ್ಯಕ್ಕೂ ಫೋನ್‌ ಕರೆ ಮಾಡಿಲ್ಲವೆಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದರು. ’ವರಿಷ್ಠರು ನನ್ನನ್ನು ಗುಜರಿ ರಾಜಕಾರಣಿ ಅಂದುಕೊಂಡಂತಿದೆ’ ಎಂದಿದ್ದರು. ಬಳಿಕ ಎನ್‌. ರವಿಕುಮಾರ್‌, ಅರವಿಂದ ಬೆಲ್ಲದ ಅವರು ಕೊಪ್ಪಳಕ್ಕೆ ಬಂದು ವರಿಷ್ಠರ ಜೊತೆ ಚರ್ಚಿಸಲು ಬರುವಂತೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೇರಳಿರುವ ಸಂಸದ ಸಂಗಣ್ ಕರಡಿ ಯಾವ ಸಂದೇಶ – ನಿರ್ದಾರ ಹೊತ್ತು ತರುವರೋ ಕಾದು ನೋಡಬೇಕು.

ಮೂರುದಿನ ಕಾಯಲು ಯಡಿಯುರಪ್ಪ ಸೂಚನೆ‌

ಕೊಪ್ಪಳ ,26- ಬೆಂಗಳೂರಿನಲ್ಲಿ ವರಿಷ್ಠರ ಭೇಟಿ ಮಾಡಿ ಜೊತೆ ಚರ್ಚಿಸಿದ್ದು ಮೂರು ದಿನ ಕಾಯುವಂತೆ ಪಕ್ಷದ ಮುಖಂಡ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಪಕ್ಷದ ಮುಖಂಡ ಭೇಟಿ ಮಾಡಿದ ನಂತರ ಪತ್ರಿಕೆ ಯೊಂದಿಗೆ ಮಾತನಾಡಿ ಮುಖಂಡರು ನಮ್ಮ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲಾ ಮುಖಂಡು ಮೂರು ದಿನ ಕಾಯಲು ಸೂಚಿಸಿದ್ದಾರೆ ಎಂದರು.
ನನಗೆ ಟಿಕೆಟ್ ಕೊಡಬೇಕಿತ್ತು ಎನ್ನುವುದು ಬೆಂಬಲಿಗರ ಹಾಗೂ ಕಾರ್ಯಕರ್ತರ ಆಗ್ರಹವಾಗಿತ್ತು. ಇದನ್ನೇ ಅವರು ವರಿಷ್ಠರ ಜೊತೆಗಿನ ಸಭೆಯಲ್ಲಿ ಹೇಳಿದ್ದಾರೆ. ನಮ್ಮವರನ್ನು ಮನವೊಲಿಸುವ ಕೆಲಸ ನಾನು ಮಾಡುವೆ ಎಂದರು.

ಬಿಜೆಪಿ ವರಿಷ್ಠರ ಜೊತೆಗಿನ ಸಭೆಗೂ ಮೊದಲು ಸಂಗಣ್ಣ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಅಲ್ಲಿ ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಕೊಪ್ಪಳದ ಸಿ.ವಿ. ಚಂದ್ರಶೇಖರ್‌ ಕೂಡ ಇದ್ದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

Leave a Reply

Your email address will not be published. Required fields are marked *

error: Content is protected !!