IMG-20231103-WA0025

*ಸಂಗನಹಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ರಥಯಾತ್ರೆ ಮೂಲಕ ಜಾಗೃತಿ*

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 3  – ಮುಂಬರಲಿರುವ 2024-25ನೇ ಸಾಲಿನ ಕ್ರಿಯಾಯೋಜನೆ ಸಿದ್ದಪಡಿಸಲು ಈಗಿಂದಲೇ ರೈತರಿಂದ ಕೆಲಸದ ಬೇಡಿಕೆ ಅರ್ಜಿಗಳನ್ನು ಪಡೆದು ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದ್ದು, ರೈತರು ಕಾಮಗಾರಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಗ್ರಾಮ ಪಂಚಾಯತಿ ಪಿಡಿಒ ಸರ್ವಮಂಗಳ ಹೇಳಿದರು.
ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಹಳ್ಳಿ ಯ ಸುಸ್ಥಿರತೆಯಡೆಗೆ ಅಭಿಯಾನದ ಅಂಗವಾಗಿ ಉದ್ಯೋಗ ರಥ ಯಾತ್ರೆ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
೯೦ರೈತರು ತಮ್ಮ ಜಮೀನುಗಳಲ್ಲಿ ಬದು, ಕೃಷಿಹೊಂಡ, ಮೇಕೆ ಶಡ್, ನುಗ್ಗೆ, ತೆಂಗು ಮುಂತಾದ ಕಾಮಗಾರಿಗಳ ಅರ್ಜಿ ಸಲ್ಲಿಸಬಹುದು. ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಗಳನ್ನು ಸಲ್ಲಿಸಿ, ತಮಗೆ ಬೇಕಿರುವ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿ ಅನುಮೋದನೆಗೆ ಕಳಿಸಲಾಗುವುದು ಎಂದು ವಿವರಿಸಿದರು.
ಗ್ರಾಮದ ಪ್ರಮುಖ ವಾರ್ಡ್ ಗಳಲ್ಲಿ ರಥ ಯಾತ್ರೆ ಮೂಲಕ ಜಿಂಗಲ್ಸ್ ಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಸಾರ್ವಜನಿಕರು ಬೇಡಿಕೆ ಪೆಟ್ಟಿಗೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಅರ್ಜಿಗಳನ್ನು ಸಲ್ಲಿಸಿದರು. ಬಳಿಕ ವಾರ್ಡ್ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಳವ್ವ ಶರಣಪ್ಪ ಕಟ್ಟೆಪ್ಪನವರ,ಉಪಾಧ್ಯಕ್ಷರಾದ ಗಿರಿಜಾ ಈಶಪ್ಪ ಸಿದ್ದರೆಡ್ಡಿ ಸದಸ್ಯರಾದ ಬಸಮ್ಮ ಬಾಲಪ್ಪ ವಾಲ್ಮೀಕಿ, ಫರಿದಾ ಬೇಗಂ ಮೈಬು ಸಾಬ ಬೆಟಗೇರಿ, ಮಲ್ಲಪ್ಪ ಅಂದಪ್ಪ ಜಂಬಣ್ಣವರ, ಈಶಪ್ಪ ಬಸಪ್ಪ ಕೋಳೂರು, ಮಲ್ಲಪ್ಪ ಹುಚ್ಚೀರಪ್ಪ ಕಿನ್ನಾಳ, ದುರಗಪ್ಪ ಮುದುಕಪ್ಪ ನಡುಲಕೇರಿ, ಕರವಸೂಲಿಗಾರ ಶರಣಪ್ಪ, ಕಂಪ್ಯೂಟರ್ ಆಪರೇಟರ್ ಹನುಮರೆಡ್ಡಿ, ಗ್ರಾಪಂ ಸಿಬ್ಬಂದಿಗಳು.
ಗ್ರಾಮಸ್ಥರು. ಮತ್ತು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!