
ಏಕತೆಯ ಪ್ರತಿಕ ಅಂಬೇಡ್ಕರ್ ಅವರ ಸಂವಿಧಾನದ ಕಾನೂನುಗಳನ್ನು ಗೌರವಿಸಿ ಪಾಲಿಸಿ : ತಾಹಸಿಲ್ದಾರ್ ಶಂಶೆ ಆಲಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,8- ನಗರದ ತಾಲೂಕು ಕ್ರೀಡಾ ಮೈದಾನದಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗೆ ಮುಖ್ಯ ರಸ್ತೆಯಿಂದ ಅದ್ದೂರಿಯಾಗಿ ಜರುಗಿದ ಸಂವಿಧಾನ ಜಾಗೃತಿ ಜಾಥಾ ಭವ್ಯ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪೂರ್ಣ ಕುಂಭವನ್ನು ಕಳಸವನ್ನು ಹಿಡಿದು ಮೆರವಣಿಗೆಗೆ ಮೆರಗು ತಂದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ತಾಲೂಕ ಅಧ್ಯಕ್ಷರು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ತಹಶೀಲ್ದಾರ್ ಶಂಶೆ ಆಲಂ ಅವರು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾಚನೆ ಗೌರವ ದೊಂದಿಗೆ ಸ್ಮರಿಸಿ ಜಾಗೃತಿ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಭಾರತದ ಪ್ರಜೆಗಳಾದ ನಾವು ನಮಗೆ ಸಮಾನತೆ ಪ್ರಜಾ ಸತ್ತಾತ್ಮಕವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ಸಂವಿಧಾನದ ಒಂದು ಗ್ರಂಥದ ರೂಪದಲ್ಲಿ ನೀಡಿದ್ದಾರೆ ನಾವೆಲ್ಲರೂ ಏಕತೆಯ ಪ್ರತೀಕವಾಗಿ ಅವರು ರಚಿಸಿರುವ ಸಂವಿಧಾನದಲ್ಲಿ ಕಾನೂನುಗಳನ್ನು ಪಾಲಿಸುವುದರೊಂದಿಗೆ ಸರ್ವಧರ್ಮ ಜಾತಿ ಜನಾಂಗಗಳ ಆಚರಣೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು ವಿವಿಧ ವಾದ್ಯ ಘೋಷಣೆ ಹಾಗೂ ನೇಹ ಕಲಾ ತಂಡದ ಡೊಳ್ಳು ಕುಣಿತವು ನೋಡುಗರನ್ನು ಆಕರ್ಷಿಸುವಂತಿತ್ತು.
ಇದೆ ವೇಳೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ .ಎಸ್. ದಂಡಪ್ಪನವರ್, ತಾಲೂಕ ವೈದ್ಯಾಧಿಕಾರಿ ಡಾ ಈರಣ್ಣ, ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ. ರಾಜೇಶ್ವರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ, ನಗರಸಭಾ ಸದಸ್ಯ ಹೆಚ್ .ಗಣೇಶ್, ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ, ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್, ತೋಟಗಾರಿಕೆ ಸಹಾಯಕ ನಿರ್ದೇಶಕ ಖಾದರ್ ಭಾಷಾ, ಕೃಷಿ ಸಹಾಯಕ ನಿರ್ದೇಶಕ ಬಿ. ಎಸ್ ಪಾಟೀಲ್, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ರಾಘವೇಂದ್ರವರ್ಮಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಲಿಂಗರಾಜ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಜಿ ಪ್ರದೀಪ್, ನಗರಸಭಾ ಪೌರಾಯುಕ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಗಣ್ಯರು ಇದ್ದರು.