
ಸಂವಿಧಾನ ಜಾಗೃತಿ ಜಾಥಾ : ಬಳ್ಳಾರಿ ನಗರದಲ್ಲಿ ವಿವಿಧೆಡೆ ಸಂಚಾರ ಸಂವಿಧಾನ ಮೌಲ್ಯಗಳ ಸ್ಮರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,27- ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವು ಮಾ.01 ರ ವರೆಗೂ ಮುಂದುವರೆದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಜಾಗೃತಿಯನ್ನು ಮೂಡಿಸಲು ಟ್ಯಾಬ್ಲೊ ಮೂಲಕ ಜಾಥಾವು ಸೋಮವಾರದಂದು ನಗರದ ವಿವಿಧ ಕಾಲೇಜುಗಳಿಗೆ ಸಂಚರಿಸಿತು.
ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನ, ಹೆಚ್.ಆರ್.ಗವಿಯಪ್ಪ ವೃತ್ತ, ಎಸ್.ಪಿ.ವೃತ್ತ, ದುರ್ಗಮ್ಮಗುಡಿ ಮಾರ್ಗದ ಮೂಲಕ ಗಾಂಧಿ ನಗರದ ಅಲ್ಲಂ ಸುಮಂಗಳಮ್ಮ ಕಾಲೇಜಿಗೆ ಆಗಮಿಸುತ್ತಿದ್ದಂತೆಯೇ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಜಾಥಾವನ್ನು ಸ್ವಾಗತಿಸಿದರು. ಕಾಲೇಜಿನ ಪಾಚಾರ್ಯರು ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಭೋಧಿಸಿದರು.
ಅತಿಥಿ ಉಪನ್ಯಾಸಕರಾದ ಸುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಗ್ರತೆ, ಭ್ರಾತೃತ್ವ ಹಾಗೂ ಸಮಾನತೆಗಳ ಕುರಿತು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಕಾಲ ಹಗಲು-ರಾತ್ರಿ ಶ್ರದ್ಧೆಯಿಂದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪ್ರಸ್ತಾವನೆಯು ಮಹತ್ವದ್ದಾಗಿದೆ. ಸಂವಿಧಾನವು ನಮ್ಮೆಲ್ಲರಿಗೆ ಶ್ರೇಷ್ಠವಾಗಿದ್ದು, ಸಂವಿಧಾನದ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಬದ್ಧರಾಗಿರಬೇಕಿದೆ ಎಂದರು.
ಬಳಿಕ ಜಾಗೃತಿ ಜಾಥಾವು ಟ್ಯಾಬ್ಲೊ ಮೂಲಕ ಗಾಂಧಿನಗರದ ಶ್ರೀ ಗುರುತಿಪ್ಪೇರುದ್ರ ಕಾಲೇಜಿಗೆ ತೆರಳಿತು. “ಸಂವಿಧಾನ ಜಾಗೃತಿ ಜಾಥಾ”ವನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು ಸ್ವಾಗತ ಮಾಡಿಕೊಂಡರು.
ಕಾಲೇಜಿನ ಪ್ರಾಂಶುಪಾಲರು ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಭೋಧಿಸಿದರು.
ಜಿ.ನಾಗರಾಜ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಒಂದೇ ಜಾತಿ, ಧರ್ಮಕ್ಕೆ ಸಂಬಂಧಿಸಿಲ್ಲ, ಬದಲಾಗಿ ಎಲ್ಲಾ ವರ್ಗದವರಿಗೂ ಸಂಬಂಧಿಸಿದೆ. ಹೀಗಾಗಿ ನಾವೆಲ್ಲರೂ ಸಂವಿಧಾನವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನೀತರರು ಪಾಲ್ಗೊಂಡಿದ್