
ಸಾಹಿತ್ಯ ಲೋಕದ ಅಮೂಲ್ಯ ರತ್ನ
ಅಕ್ಬರ್ ಸಿ. ಕಾಲಿಮಿರ್ಚಿ ಅವರ ಜೀವನದ ಸಮಗ್ರ ಪರಿಚಯ
ಸಾಹಿತ್ಯ ಮತ್ತು ಸಾಮಸ್ಕೃತಿಕ ಅನುಸಂಧಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೪- ಗ್ರಾಮೀಣ ಭಾಗದಿಂದ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ,ಸಂಘಟನೆ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನೂ ತಾವೂ ತೊಡಗಿಸಿಕೊಂಡ ಸರಳತೆಯ ಮೂರ್ತಿ ಅಕ್ಬರ್ ಸಿ. ಕಾಲಿಮಿರ್ಚಿಯವರು.
ವೃತಿ ಗೌರವದೊಂದಿ ಸಾಹಿತ್ಯ ಕೃಷಿ ಮೂಲಕ ಸಾಹಿತ್ಯ ಲೋಕದ ಮಿನುಗುತಾರೆ ಯಾಗಿರುವ ಇವರು ಅವರ ಕವನಗಲ ಮೂಲಕ ಸಾಹಿತ್ಯ ಲೋಕದ ಪ್ರತಿ ಮನೆ-ಮನದಲ್ಲೂ ವಾಸವಾಗಿದ್ದರೆ.
ರಾಜ್ಯಮಟ್ಟದ ಹೆಸರು ಮಾಡಿದ ಕೊಪ್ಪಳ ಸಾಹಿತಿಗಳಲ್ಲಿ ಇವರುಸಹ ಒಬ್ಬರು ಕೊಪ್ಪಳದ ಸಾಹಿತ್ಯ ಕ್ಷೇತ್ರದ ಇವರ ಸೇವೆ ನಾಡಿನ ಹೆಸಾರಾಮತ ಸಾಹಿತಿಗಳಾಗಿ ನಿಂತ್ತಿದ್ದು ನಮಗೇಲ್ಲ ಹೆಮ್ಮಯ ವಿಷಯ.
ಅವರ ಸಾಹಿತ್ಯದ ಆರು ಪ್ರಕಾರಗಳ 30 ಕೃತಿಗಳ ಸಮಗ್ರ ಚರ್ಚೆ ವಿಮರ್ಶೆ ಹಾಗೂ ಅವರ ಜಿವನದ ಕೊಡುಗೆಗಳ ಸಮಗ್ರ ಚಿಂತೆ ನಿಮ್ಮ ಮುಂದೆ …
ಕೊಪ್ಪಳ ಜಿಲ್ಲೆಯಲಬುರ್ಗಾ ತಾಲೂಕು (ಈಗಿನ ಕುಕನೂರ) ಮಂಗಳೂರು ಗ್ರಾಮ ಜನಿಸಿದ ಊರು.ತಂದೆ ಚಂದುಸಾಬ ಕಾಲಿಮಿರ್ಚಿ, ತಾಯಿ ಮರಿಂಬಿ. ಕೃಷಿಕ ಕುಟುಂಬದಲ್ಲಿ ೦೧-೦೬-೧೯೬೫ರಲ್ಲಿ ಜನಿಸಿದ್ದಾರೆ.ಔಷದ ವಿಜ್ಞಾನ ಪದವಿ ಪಡೆದಿದ್ದಾರೆ. ಸಾಹಿತ್ಯ, ಸಮಾಜ, ಹೋರಾಟ, ಸಾಂಸ್ಕೃತಿಕಚಟುವಟಿಕೆಇವರ ಹವ್ಯಾಸಗಳು, ಗ್ರಾಮದಲ್ಲಿ ಹಲವಾರು ಸಂಘಟನೆಗಳ ಹುಟ್ಟು ಹಾಕಿ ಎಲ್ಲಾ ಸಮುದಾಯಗಳಲ್ಲಿ ಜೀವಪರ, ಜನಪರ ಕಾಳಜಿ ಹೊಂದಿರುತ್ತಾರೆ. ಸಮಾಜಮುಖಿ ಕಾರ್ಯಗಳು ನಿರಂತರವಾಗಿವೆ.
ಅವರು ಸಂಘಟನೆ ಹಾಗೂ ಸೇವೆ
: ಅಧ್ಯಕ್ಷರು :ಕನ್ನಡ ಕಲಾ ಹವ್ಯಾಸಿ ಸಂಘ(ರಿ) ಮಂಗಳೂರು ಗ್ರಾಮ, ಕೊಪ್ಪಳ ಜಿಲ್ಲೆ (೧೯೮೬-೧೯೯೬)
ಸಂಚಾಲಕರು : ಪಿ. ಲಂಕೇಶರ “ಕರ್ನಾಟಕ ಪ್ರಗತಿರಂಗರಾಯಚೂರುಜಿಲ್ಲೆ
ಸAಚಾಲಕರು : ಕೊಪ್ಪಳ ಜಿಲ್ಲಾ ಹೋರಾಟಸಮಿತಿ, ಯಲಬುರ್ಗಾತಾಲೂಕು
ಗೌರವಕಾರ್ಯದರ್ಶಿ :ತಾಲೂಕಾ ಪತ್ರಕರ್ತರ ಸಂಘ, ಯಲಬುರ್ಗಾ
ಗೌರವಕೋಶಾಧಿಕಾರಿ :ತಾಲೂಕುಯುವ ಮಹಾಮಂಡಳ ಯಲಬುರ್ಗಾ
ಸಂಚಾಲಕರು :ಕರ್ನಾಟಕ ಸಾಂಸ್ಕೃತಿಕ ಸಂಘ
ಜಿಲ್ಲಾಕಾರ್ಯದರ್ಶಿ :ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ (೨೦೧೨-೨೦೧೫)
ವರದಿಗಾರರು : ಬಿ. ವೈಕುಂಠರಾಜುಅವರ ವಾರ ಪತ್ರಿಕೆ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಅಂಗಳದ ಬಯಲಲ್ಲೇ ಬಡಮಕ್ಕಳಿಗೆ ಉಚಿತ ಪಾಠಮಾಡಿರುವುದು, ಸಾಮಾಜಿಕ, ಕಲೆ, ಸಾಹಿತ್ಯ ಸಂಗೀತಕಾರ್ಯಕ್ರಮ ಮಾಡಿ ಪ್ರತಿಭೆಗಳ ಗುರುತಿಸುವ ಕೆಲಸ ಮಾಡಿರುವುದು.
ಪ್ರಕಟಿತ ಕವನ (ಕಾವ್ಯ) ಸಂಕಲನ
ಆಶಯ (೧೯೯೩), ಕಾಚಕ್ಕಿ (೨೦೧೦), ಅಮಲ (೨೦೧೧), ಕತ್ತಲೆಯ ಪ್ರೀತಿಗೆ (೨೦೧೩), ಈ ಕೃತಿಗೆಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಅಮರಗುಂಡಪ್ಪ ಆರಳಿ ಕಾವ್ಯ ಪ್ರಶಸ್ತಿ ಬಂದಿದೆ.ಗಾಳಿ ಜೋಗುಳ (೨೦೧೫), ಒಡಲ ಉರಿಯ ನೆನೆದು (೨೦೧೭). ಬಂದೂಕಿಗೆಜೀವವಿಲ್ಲ (೨೦೧೮) ಈ ಸಂಕಲನಕ್ಕೆ ಮಂಡ್ಯದಡಾ. ಹೆಬ್ರಿಅವರದತ್ತಿ ಪ್ರಶಸ್ತಿ ಹಾಗೂ ಅಡ್ಡಸ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಹಸಿವು ಮತ್ತು ತಲ್ಲಣಗಳು ನದಿ (೨೦೨೧) ಬಳ್ಳಾರಿಯ ಕಾರಾಂತರAಗ ಲೋಕದ ಸಂಸ್ಥೆಯಿಂದ ‘ಕಾರಂತ ಸಾಹಿತ್ಯರತ್ನ’ ಪ್ರಶಸ್ತಿ ಮತ್ತು ಬೆಳಗಾವಿ ಜಿಲ್ಲೆ ಹಾರೋಗೇರಿಯಆಜೂರ ಪ್ರತಿಷ್ಠಾನ ಪ್ರಶಸ್ತಿ ಲಭಿಸಿದೆ.
ಸರ್ಕಾರದ ಮತ್ತು ಸಂಘ ಸಂಸ್ಥೆಗಳ ಪ್ರಶಸ್ತಿಗಳು
ಭಾರತ ಸರ್ಕಾರದರಾಯಚೂರಿನಜಿಲ್ಲಾ ನೆಹರು ಯುವ ಕೇಂದ್ರದಿಂದ ಸಮುದಾಯ, ಯುವಅಭಿವೃದ್ಧಿ ಗುರುತಿಸಿ, ಜಿಲ್ಲಾ ಆಡಳಿತದಿಂದ ‘ಅತ್ಯುತ್ತಮ ಜಿಲ್ಲಾಯುವ ಪ್ರಶಸ್ತಿ’ ನೀಡಿ ೧೯೯೩ರಲ್ಲಿ ಗೌರವಿಸಿದೆ.
ಕರ್ನಾಟಕ ಸರ್ಕಾರದಯುವ ಸಬಲೀಕರಣಇಲಾಖೆಯಿಂದಯುವಜನಅಭಿವೃದ್ಧಿ ಮತ್ತು ಸಮುದಾಯ ಸೇವೆ ಪರಿಗಣಿಸಿ ೧೯೯೫ರಲ್ಲಿ ‘ರಾಜ್ಯಯುವ ಪ್ರಶಸ್ತಿ’ ನೀಡಿ ಗೌರವಿಸಿದೆ.
ವಿಶ್ವಕ್ರಾಂತಿಯುವಕ ಸಂಘ(ರಿ) ಮಂಗಳೂರು ಗ್ರಾಮದ ನನ್ನ ಹುಟ್ಟೂರಲ್ಲಿ ‘ಯುವ ನೇತಾರ” ಪ್ರಶಸ್ತಿ ೧೯೯೮ರಲ್ಲಿ ನೀಡಿ ಗೌರವಿಸಿದೆ.
ಕನ್ನಡ ಸಾಂಸ್ಕೃತಿಕ ಇಲಾಖೆ ಹಾಗೂ ಮಂದಾರ ಸಾಂಸ್ಕೃತಿಕ ಸಂಘ(ರಿ) ಬೀದರ್‌ಇವರ ಸಂಯುಕ್ತಆಶ್ರಯದಲ್ಲಿ ‘ಕಾರಾಂತರತ್ನ ಪ್ರಶಸ್ತಿ’ ನೀಡಿ ೨೦೧೯ರಲ್ಲಿ ಗೌರವಿಸಿದೆ.
ಚೆನ್ನಕೇಶವ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಸೇಡಂತಾಲೂಕಿನ ಮೇರುಗ್ರಾಮದಲ್ಲಿ ‘ಅಕ್ಷರ ಲೋಕದ ನಕ್ಷತ್ರ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೨೦
ಸಾಹಿತ್ಯ ಸೇವೆ ಗುರುತಿಸಿ ಬೆಳಗಾವಿಯ ಹಾರೋಗೇರಿ ಪ್ರತಿಷ್ಠಿನ ಇವರಿಂದ ‘ಆಜೂರ ಸಾಹಿತ್ಯ ಪ್ರಶಸ್ತಿ’ ನೀಡಿ ೨೦೨೨ರಲ್ಲಿ ಗೌರವಿಸಿದೆ.
ಕೇಂದ್ರಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ‘ಎಲ್. ಬಸವರಾಜುದತ್ತಿ ಪ್ರಶಸ್ತಿ’ ನೀಡಿ ೨೦೧೮ರಲ್ಲಿ ಗೌರವಿಸಿದೆ.
ಎಸ್.ಎ.ನಿಂಗೋಜಿ ಶಿಕ್ಷಣ ಸಂಸ್ಥೆ ಸಾಹಿತ್ಯ ಸೇವೆ ಗುರುತಿಸಿ ೨೦೨೦ರಲ್ಲಿ ಗೌರವಿಸಿದೆ. ದಾವಣಗೆರೆಯಕನ್ನಡ ಸಾಂಸ್ಕೃತಿಕಗತವೈಭವ ಸಂಸ್ಥೆ ‘ಆಝಾದಕಥಾ ಸಾಧಕ ಪ್ರಶಸ್ತಿ’ಯನ್ನು ೨೦೨೨ರಲ್ಲಿ ನೀಡಿ ಗೌರವಿಸಿದೆ.
ಹೊಸಪೇಟೆಯ ಕಲೆ ಹಾಗೂ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಕಲ್ಲಂಭಟ್ಸ್ಇವರಿಂದ ‘ಸಮಾಜಸೇವಾ ಭಾರ್ಗವ ಪ್ರಶಸ್ತಿ’ ೨೦೨೦ ನೀಡಿ ಗೌರವಿಸಿದೆ.
ಕೊಪ್ಪಳ ಜಿಲ್ಲೆ ಭಾಗ್ಯನಗರ ಪಟ್ಟಣ ಪಂಚಾಯತಿ ಆಡಳಿತದಿಂದ ೨೦೨೩ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯಸೇವೆ ಪರಿಗಣಿಸಿ ‘ನಾಗರಿಕ ಸನ್ಮಾನ’ ನೀಡಿ ಗೌರವಿಸಿದೆ.
ಮಕ್ಕಳ ಸಾಹಿತ್ಯ ಸಂಕಲನ
ಬಾಪು ಪಾಪು (೨೦೧೨), ಈ ಕೃತಿಗೆ ಸರ್ ಎಂ.ವಿಶ್ವೇಶ್ವರಯ್ಯರಾಜ್ಯ ಪ್ರಶಸ್ತಿ ಮತ್ತು ಬೆಳ್ಳಿ ಪದಕ ಲಭಿಸಿದೆ.
ರೈಲುಗಾಡಿ (೨೦೧೩), ಪುಟ್ಟಿಯ ಆಸೆ (೨೦೨೦).
ವ್ಯಕ್ತಿ ಚರಿತ್ರೆಗಳು
‘ನಮ್ಮಚಿಲಗೋಡರು’ (೨೦೧೧) ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿಯ ಭರಮಪ್ಪಚಿಲಗೋಡುಅವರಜೀವನಚರಿತ್ರೆ ಪ್ರಕಟವಾಗಿದೆ.
‘ಲೋಕದ ಸಂತೆಯಲ್ಲಿ ನಿಂತು ಸಂತ’ (೨೦೨೨) ಬಾಗಲಕೋಟದಖ್ಯಾತಕತೆಗಾರಅಬ್ಬಾಸ್ ಮೇಲಿನಮನಿ ಅವರುಜೀವನಚರಿತ್ರೆ ಪ್ರಕಟವಾಗಿದೆ.
ಅವಧೂತರುಜೀವನ ಚರಿತ್ರೆಗಳು
‘ಸಿದ್ಧಿ ಪುರುಷಯಲ್ಲಪ್ಪನವರು’ (೨೦೦೯) ಬೆಳಗಾವಿ ಜಿಲ್ಲೆರಾಮದುರ್ಗತಾಲೂಕಿನ ಕಟಕೋಳ ಗ್ರಾಮದ ಈ ಊರಿನ ೨೦೦ ವರ್ಷಗಳ ಪರಂಪರೆಯುಳ್ಳ ಪೂಜಾರಿ ಮನೆತನದಚರಿತ್ರೆ ಪ್ರಕಟವಾಗಿದೆ.
‘ಕಟಕೋಳ ಸಿದ್ಧರಾಯಜ್ಜನವರು’ (೨೦೧೨) ಪೂಜಾರಿ ಮನೆತನದಎರಡನೇಚರಿತ್ರೆಯಿದು.
‘ತಾರಾನಗರದ ಹಿರೇಸ್ವಾಮಿಗುರುವಾರ ಬಡೇಸಾಬನ ಅವತಾರ’ (೨೦೧೬) ಬಳ್ಳಾರಿ ಜಿಲ್ಲೆಯ ಸಂಡೂರುತಾಲ್ಲೂಕಿನಅವಧೂತ ಪರಂಪರೆಗೆ ಸೇರಿದ ಬಡೇಸಾಬರಚರಿತ್ರೆಯಿದು.
‘ದೇಶನೂರಿನಅವಧೂತೆಈಶ್ವರಮ್ಮನವರು’ (೨೦೦೩) ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನದೇಶನೂರಿನಲ್ಲಿ ಶತಾಯುಷಿಯಾಗಿ ಬಾಳಿಹೋದ ಈಶ್ವರಮ್ಮನವರಜೀವನಗಾಥೆ.
ಗದ್ಯ ಬರಹದ ಸಂಕಲನ
ಕಾಲಿಮಿರ್ಚಿ ಪ್ರಶ್ನೆಗಳು (೧೯೯೧)
ಜೀವ ಮಿಡಿತಗಳ ಧ್ಯಾನ (೨೦೧೭)
ನೆಲದ ನೆರಳು ವಿಮರ್ಶೆ (೨೦೨೨)
ಕಥಾ ಸಂಕಲನಗಳು
‘ದೇವ್ರಮಗಳು’ (೨೦೧೮) ದೀಪಾವಳಿ ಕಥಾಸ್ಪರ್ಧೆಯ ಪ್ರಥಮ ಬಹುಮಾನ ಪಡೆದಕಥೆ, ಕೇಂದ್ರಕನ್ನಡ ಸಾಹಿತ್ಯ ಪರಿಷತ್ತುಅಮೃತ ಮಹೋತ್ಸವದ ಸವಿನೆನಪಿನ ಎಲ್.ಬಸವರಾಜುಅವರದತ್ತಿ ಪ್ರಶಸ್ತಿ, ಕಲಬುರ್ಗಿಜಿಲ್ಲೆಯ ಸೇಡಂತಾಲೂಕಿನ ಮೇದಕಗ್ರಾಮದಚೆನ್ನಕೇಶವ ಶಿಕ್ಷಣ ಸಂಸ್ಥೆ ಕೊಡಮಾಡುವ ನಾಗಮ್ಮ ಭೋಪಾಲ್ ಸ್ಮರಣಾರ್ಥದತ್ತಿ ಪ್ರಶಸ್ತಿ ಲಭಿಸಿದೆ.
‘ಹೆಣದದಿಬ್ಬ’ (೨೦೨೦) ಈ ಕೃತಿಗೆದಾವಣಗೆರೆಯಕನ್ನಡ ಸಾಂಸ್ಕೃತಿಕಗತವೈಭವ ಸಂಸ್ಥೆ ಯುರಾಜ್ಯಮಟ್ಟದಆಝಾದ್‌ಕಥಾ ಸಾಧಕ ಪ್ರಶಸ್ತಿ ನೀಡಿದೆ.
ಅಭಿನಂದನಾ ಗ್ರಂಥ
‘ಯುವಸಿರಿ’ (೧೯೯೬) ಆಕ್ಟರ್ ಸಿ ಕಲಿಮಿರ್ಚಿಅವರುಕುರಿತ…. ಸಂಪಾದಕರು :ರಾಮಚಂದ್ರೇಗೌಡ ಬಿ ಗೊಂಡಬಾಳ
ಸಂಶೋಧನಾ ಪ್ರಬಂಧ
೨೦೨೩ರ ಎಂ. ಎ. ಕನ್ನಡ ಪದವಿಗಾಗಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ “ಅಕ್ಬರ್ ಕಾಲಿಮಿರ್ಚಿಅವರ ಬದುಕು ಮತ್ತು ಬರಹಗಳ ಸಮೀಕ್ಷೆ” ಸಂಶೋಧನಾ ಪ್ರಬಂಧ ಮಂಡಿಸಿದೆ, ಸಂಶೋಧಕ ವಿಧ್ಯಾರ್ಥಿನಿ ಹನ್ಮಂತಮ್ಮ.
ಸಂಪಾದಿತ ಕೃತಿಗಳು
‘ಹಾಡಕೆಡಸಬ್ಯಾಡ್ರಿ’ ರಾಜ್ಯ ಮಟ್ಟದ ಕವನ ಸಂಕಲನ (೧೯೯೧)
‘ಡಿಂಡಿಮ’ ಕೊಪ್ಪಳ ಜಿಲ್ಲಾಯಲಬುರ್ಗಾತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯರಾಜ್ಯ ಮಹೋತ್ಸವದ ಸ್ಮರಣ ಸಂಚಿಕೆ (೧೯೯೫)
‘ಆಕಾಶಮಲ್ಲಿಗೆ’ ಬಳ್ಳಾರಿ ಜಿಲ್ಲೆ ಬಾಚಿಗೊಂಡನಹಳ್ಳಿಯ ಕೆ. ವಿರೂಪಾಕ್ಷಗೌಡರ ಸಮಗ್ರ ಕವನ ಸಂಕಲನ (೨೦೦೦)
‘ಕೊಪ್ಪಳ ಜಿಲ್ಲಾ ಮಾಹಿತಿ ಕೋಶ’ (೨೦೧೧)
‘ಬೆಸುಗೆ’ (ವೀಣಾ ಬಡಿಗೇರ ಮದುವೆ ನೆನಪಿನ ಕವನ ಸಂಕಲನ) ೨೦೧೪
‘ಕೊಪ್ಪಳ ಜಿಲ್ಲಾ ಕಸಾಪ ಮಾಹಿತಿ ಕೋಶ’ (೨೦೧೫)
ಭಾಗವಹಿಸಿದ ಗೋಷ್ಠಿಗಳು
೭೯ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಕವಿಗೋಷ್ಠಿ: ವಿಜಯಪುರ ೨೦೧೨
೮೦ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡುನುಡಿ ಸೇವೆಗಾಗಿ ವಿಶೇಷ ಸನ್ಮಾನ, ಮಡಿಕೇರಿ: ೨೦೧೪
ಜಿಲ್ಲಾ ಆಡಳಿತ ಕೊಪ್ಪಳದಿಂದ ಜರುಗಿದ ಆನೆಗೊಂದಿ ಉತ್ಸವದ ಕವಿಗೋಷ್ಠಿ ೨೦೧೬
ಕರ್ನಾಟಕ ಸಾಹಿತ್ಯಅಕಾಡೆಮಿ ಕವಿಗೋಷ್ಠಿ, ಕನಕಗಿರಿ ೨೦೧೭
ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷಆಹ್ವಾನ, ಬೆಳಗಾವಿ ೨೦೧೧
ಜಿಲ್ಲಾ ಆಡಳಿತ ಬಾಗಲಕೋಟಿ, ಮುಧೋಳ ‘ರನ್ನ ವೈಭವ’ ಕವಿಗೋಷ್ಠಿ ೨೦೧೨
ಜಿಲ್ಲಾ ಆಡಳಿತ ಬಾಗಲಕೋಟಜಿಲ್ಲೆಯ ಬಾದಾಮಿಚಾಲುಕ್ಯೋತ್ಸವದ ಕವಿಗೋಷ್ಠಿ ೨೦೧೪
ಕನ್ನಡ ಪುಸ್ತಕ ಪ್ರಾಧಿಕಾರದ ಕವಿಗೋಷ್ಠಿ, ಮಂಡ್ಯದ ಶ್ರೀರಂಗಪಟ್ಟಣ ೨೦೧೬
ಕನ್ನಡ ಸಾಂಸ್ಕೃತಿಕ ಇಲಾಖೆ ಹಾಗೂ ಧಾರವಾಡ ಸಾಹಿತ್ಯ ಸಂಭ್ರಮದ ಕವಿಗೋಷ್ಠಿ ೨೦೧೫
ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಸಾಹಿತ್ಯ ಕವಿಗೋಷ್ಠಿ, ಧಾರವಾಡ ೨೦೧೬
ಕರ್ನಾಟಕ ಸರ್ಕಾರದ ವಿಶ್ವವಿಖ್ಯಾತ ಮೈಸೂರುದಸರಾ ಕವಿಗೋಷ್ಠಿ, ಮೈಸೂರು ೨೦೨೨
ಮಾನವಧರ್ಮಪೀಠದಚನ್ನಮಲ್ಲ. ವೀರಭದ್ರಸ್ವಾಮಿಅವರ ಪೀಠಾರೋಹಣದರಾಜ್ಯಮಟ್ಟದರಜತ ಮಹೋತ್ಸವದ ಕವಿಗೋಷ್ಠಿ, ರವೀಂದ್ರಕಲಾಕ್ಷೇತ್ರ ಬೆಂಗಳೂರು ೨೦೧೬
ಕೊಪ್ಪಳ ಜಿಲ್ಲಾ ಆಡಳಿತದ ರಜತ ಮಹೋತ್ಸವ ಕವಿಗೋಷ್ಠಿ, ಕೊಪ್ಪಳ ಫೆಬ್ರುವರಿ ೨೦೨೩.
ಹಿರಿಯ ಸಾಹಿತಗಳ ಕಂಡಂತೆ – ಅಕ್ಬರ್ ಸಿ. ಕಾಲಿಮಿರ್ಚಿ ಯವರು
ಚಿಕ್ಕ ವಯಸ್ಸಿನಲ್ಲಿ ಗ್ರಾಮೀಣದಲ್ಲಿದ್ದುಕೊಂಡುಯುವ ಸಂಘಟನೆಕಟ್ಟಿಕೊAಡು ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕಕಾರ್ಯ ನಡೆಸುವುದಕಂಡು ಸಂತಸವಾಯಿತು. ಸಾಹಿತ್ತಿಕ ಬರವಣಿಗೆಯೂಇದ್ದುಉದಾತ್ತ ವಿಚಾರಗಳಿಂದ ಮುಂದೆ ನಾಡಿನತುಂಬ ಬೆಳಗುತ್ತೀರೆಂಬ ಭರವಸೆಯಿದೆ. ಶುಭಾಶಯಗಳು. – ರಾಷ್ಟಕವಿ ಕುವೆಂಪು
ಅಕ್ಬರ್ ಮುಖ ನನ್ನ ಹೃದಯ ಹಿಂಡುತ್ತಲೇಇದೆ.ಅಕ್ಬರ್‌ತರಹ ಲಕ್ಷಾಂತರಜನರ ಬದುಕೇ ಈ ದೃಷ್ಟವಾತಾವರಣದಲ್ಲಿ ಮಣ್ಣುಗೂಡುತ್ತಿರುವುದು ನನ್ನಲ್ಲಿದುಃಖ ಮೂಡಿಸಿತ್ತು.ಇದು ನಾನು ಗಾಂಧೀಜಿಯಲ್ಲಆತನಅನುಕರಣೆತಪ್ಪುಎAದೇಇದನ್ನೆಲ್ಲ ನಿಮ್ಮೆದೆರುಇಟ್ಟಿದ್ದೇನೆ.
– ಪಿ. ಲಂಕೇಶ್ (‘ಟೀಕೆಟಿಪ್ಪಣಿ’ ಲಂಕೇಶ ಪತ್ರಿಕೆ ೨೦-೧೦-೧೯೮೯)
ನಾಡು ನುಡಿಯ ಬಗ್ಗೆ ಅಗಾಧವಾದ ಪ್ರೀತಿ ಸಂಕಲನದುದ್ದಕ್ಕೂ ಗುಪ್ತ ಗಾಮಿನಿಯಾಗಿ ಹರಿದಿದೆ.ಇಂಥ ಅನೇಕ ಸಾಲು ಬರೆಯಬಲ್ಲ ಕವಿ ನಮಗರಿವಿಲ್ಲದಂತೆ ನಮ್ಮದನಿಯನ್ನೇ ಮರು ನುಡಿಯುತ್ತಾನೆ. – ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)
ಅಕ್ಬರ್ ಗಾಳಿ ಜೋಗುಳ ತುಂಬಾ ಹಿಡಿಸಿತು.ಗುಬ್ಬಿಯ ಬದುಕು, ದೇವರು ಹುಟ್ಟಿದ್ದು, ಮರಮರಅಮರ, ಆ ಹೆಂಗಸು, ಒಂದು ಎಳೆಯಾದರೂ ಸಿಗಲಿ, ಬೆಳಕು, ನಿನ್ನಗುರುತಿಸುವರಾರು, ಯಾವಕವಿತೆ ಹೇಳುವುದ ಬಿಟ್ಟೆಅನ್ನುವಂತಿಲ್ಲ. ಮುಂದೆ ಬಹುದೊಡ್ಡದಾದ ಸ್ಥಾನದ ಲಕ್ಷಣಗಳಿವೆ. ಶುಭಗಳು. – ಚೆನ್ನವೀರಕಣವಿ, ಧಾರವಾಡ
ಹೊಸಬರಿಗೆಒಂದು ವೇದಿಕೆಯನ್ನು ಕಲ್ಪಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ ಅಭಿನಂದನೆಗಳು. – ಡಾ. ಹಾ. ಮಾ. ನಾಯಕ
ಲವಲವಿಕೆಯ ಕವನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. – ರಹಮತ್‌ತರೀಕೆರೆ, ಹೊಸಪೇಟೆ
ಕೆಲವು ಸೂಕ್ಷö್ಮಗಳನ್ನು ಬಹಿರಂಗವಾಗಿ ಹೇಳುತ್ತೀರಿ.ನಾಡಿನ ಬಗೆಗಿನ ಕಾಳಜಿ ಸಾಮಾಜಿಕ ಸ್ಪಂದನ ಕಂಡು ಸಂತೋಷವಾಯಿತು. – ಬೋಳುವಾರ ಮಹ್ಮದಕುಂಇ
ಹೆಣ್ಣಿನ ಶೋಷಣೆಗೆತುಂಬಾ ಮಿಡಿಯುತ್ತೀರಿ. ಹೆಣ್ಣಿನ ಬಗೆಗಿರುವ ಹೃದಯವಂತಿಕೆಗೆ ನಾನು ಕೃತಜ್ಞ. – ಡಾ. ಸಾರಾಅಬೂಬಕ್ಕರ್
ನಿಮ್ಮ ಸಂಘಟನೆ, ಬರಹಗಳ ಕುರಿತು ಕೇಳಿದ್ದೇನೆ. ಪತ್ರಿಕೆಗಳಲ್ಲೂ ಓದಿದ್ದೇನೆ. ನಿಮ್ಮ ಕ್ರಿಯಾಶೀಲ ಮನಸ್ಸಿಗೆ ಹಾರೈಸುತ್ತೇನೆ. – ಫಕೀರಮಹ್ಮದ ಕಟ್ಪಾಡಿ
ನಿಸರ್ಗದ ಮುಕ್ತ ವ್ಯವಸ್ಥೆಯನ್ನುಅವರುತಮ್ಮಕಾವ್ಯ ಪ್ರತಿಪಾದನೆಗಾಗಿ ವಸ್ತು ಪ್ರತಿರೂಪವಾಗಿ ಪಡೆದುಕೊಂಡಿದ್ದಾರೆ.ಅವರನ್ನು ಪ್ರಕೃತಿ ಕವಿ ಎಂದೇಕರೆಯಬಹುದು.- ಪ್ರೊ. ಸಿದ್ಧರಾಜ ಪೂಜಾರಿ
ಬೆಂಕಿಬೆಟ್ಟದಲ್ಲಿ ಅರಳಿದ ಹೂವು ನೀವಾಗಿದ್ದೀರಿ. – ಡಾ. ಮಲ್ಲಿಕಾರ್ಜುನಕುಂಬಾರ
ಕತ್ತಲೆಯ ಪ್ರೀತಿಗೆ ಓದಿ ಆನಂದಿಸಿದೆ.ಈ ಕೃತಿಕಣ್ಣೀರು ಹರಿಸಿದೆ ಹಗುರಗೊಳಿಸಿದೆ. – ಡಾ. ಸಾ. ಶಿ. ಮರುಳಯ್ಯ
ಕಿರಿದಾದ ವಯಸ್ಸಲ್ಲಿಉತ್ತಮ ಪ್ರತಿಭೆ ಹೊಂದಿರುವಅಕ್ಬರಅವರ ಸೇವಾಕಾರ್ಯ ಸ್ಮರಣೀಯ. – ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು.
ಇಂದಿನ ಯುವಕರಲ್ಲಿಅವರೊಬ್ಬಘನಸಾಮರ್ಥ್ಯದ ವ್ಯಕ್ತಿ.ನಮ್ಮ ಹಳ್ಳಿಯ ಸಮ್ಮೇಳನದಲ್ಲಿ ಕಂಡು ಸಂತೋಷವಾಯಿತು. – ದೇವೇಂದ್ರಕುಮಾರ ಹಕಾರಿ.
ನಮ್ಮಜಿಲ್ಲೆಯ ಹೆಮ್ಮೆಯ ಪುತ್ರ.ಅವರ ಸಾಮಾಜಿಕ ಸೇವೆ ಆದರ್ಶಪ್ರಾಯವಾಗಿದೆ. – ಡಾ. ಬಿ. ವಿ. ಶಿರೂರು.
ಅಕ್ಬರ್‌ನಲ್ಲೇನೋಒಂದು ವಿಶೇಷತೆಇದೆ.ಎಂದುಕೊAಡದ್ದು ಸುಳ್ಳಾಗಲಿಲ್ಲ. ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ.ಇದೆಲ್ಲವನ್ನು ಮೀರಿಅಕ್ಬರ್ ಬೆಳೆಯಲೆಂದು ಅಭಿನಂದಿಸುವೆ. – ವಿಠ್ಠಪ್ಪಗೋರಂಟ್ಲಿ.
ನಿತ್ಯ ಬದುಕಿನತಾಪತ್ರೆಯ ಮೀರಿ, ಸಾಹಿತ್ಯ ಸಂಘಟನೆ ಹುಟ್ಟುಹಾಕಿಯುವಕರನ್ನು ತೊಡಗಿಸಿ ತಾನು ಬೆಳೆಯುವುದರ ಜೊತೆಗೆ ಸುತ್ತಲಿನ ಪರಿಸರದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆ ಎನಿಸಿದೆ.ಸ್ವತಃ ಕವಿ ಹಾಗೂ ಬರಹಗಾರಅವರಿಗೆ ಅಭಿನಂದನೆಗಳು. – ಟಿ. ವಿ. ಮಾಗಳದ.
ಸಾಹಿತ್ಯ ಹಾಗೂ ಸಂಘಟನೆಗಳು ಒಂದೇ ವ್ಯಕ್ತಿಯಲ್ಲಿ ಮೇಳೈಸುವುದು ಬಹಳ ಅಪರೂಪ. ಅಪರೂಪದ ವ್ಯಕ್ತಿಯೇಅಕ್ಬರ್‌ಆಗಿದ್ದಾರೆ. – ಲಕ್ಷಣ ಅಳವಂಡಿ
ಕವಿತೆಗಳ ಓದಿ ಸಂತಸಪಟ್ಟೆ, ಈ ಕವಿತೆಗಳನ್ನು ನಮ್ಮ ಶಾಲಾ ಶಿಕ್ಷಕರು ಮಕ್ಕಳಿಗೆ ಕಲಿಸಿದರೆ ಅವು ಹೆಚ್ಚು ಪ್ರಯೋಜನವಾಗುತ್ತದೆ. – ಡಾ. ನಾ. ಡಿಸೋಜ.