
ಸಾವಿನಲ್ಲೂ ಒಂದಾದ ಸಹೋದರರು
ಕರುನಾಡ ಬೆಳಗು ಸುದ್ದಿ
ಲಕ್ಷ್ಮೇಶ್ವರ,16- ಸಹೋದರರಿಬ್ಬರೂ ಒಂದೇ ದಿನ ಸಾವನ್ನಪ್ಪಿದ ಘಟನೆ ತಾಲೂಕಿನ ಗೋವನಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬಸವನಗೌಡ ಶಿವನಗೌಡ ಭುವನಗೌಡ್ರ (75) ಹಾಗೂ ಸಹೋದರ ಯಲ್ಲಪ್ಪಗೌಡ ಶಿವನಗೌಡ ಭುವನಗೌಡ್ರ ವಯಸ್ಸು (72) ಸಾವಿನಲ್ಲೂ ಒಂದಾದ ಸಹೋದರರು. ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದ ಇವರು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ಕಳೆದ ಎಂಟು ವರ್ಷಗಳಿಂದ ಅಣ್ಣ ಬಸನಗೌಡ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇತ್ತ ತಮ್ಮ ಯಲ್ಲಪ್ಪಗೌಡ ಒಂದು ವಾರದ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು.
ಬುಧವಾರ ಬೆಳಗಿನ ಜಾವ 3:15ಕ್ಕೆ ಬಹುದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಬಸವನಗೌಡ ಸಾವಿಗೀಡಾಗಿದ್ದಾರೆ. ಅಣ್ಣನ ಸಾವಿನ ಸುದ್ದಿ ತಮ್ಮ ಯಲ್ಲಪ್ಪಗೌಡರಿಗೆ 4.15ಕ್ಕೆ ವಿಷಯ ತಿಳಿಯುತ್ತಿದ್ದಂತೆ ತಕ್ಷಣದಲ್ಲಿ ಸಾವಿಗೀಡಾಗಿದ್ದಾರೆ. ಮೃತ ಸಹೋದರರ ಕುಟುಂಬದವರಿಗೆ ಒಂದೇ ದಿನ ಇಬ್ಬರ ಸಾವು ಬರಸಿಡಿಲು ಬಡಿದಂತಾಗಿದೆ.
ಮೃತ ಸಹೋದರರ ಪತ್ನಿಯರು ಈಗಾಗಲೇ ನಿಧನ ಹೊಂದಿದ್ದಾರೆ. ಬಸವನಗೌಡ ಭುವನಗೌಡ್ರ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಯಲ್ಲಪ್ಪಗೌಡ ಭುವನಗೌಡ್ರ ಅವರಿಗೂ ಸಹ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.