
ಹಳೆಕೋಟೆ: ನರೇಗಾ ಕೂಲಿ ಕಾರ್ಮಿಕರಿಗೆ ಅರಿವು ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 28- ಕಾರ್ಮಿಕರ ಜೀವನ ಶೈಲಿ ಸುರಕ್ಷತೆ ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಬಳ್ಳಾರಿ ಜಿಲ್ಲೆ ಯುವ ಪರಿವರ್ತಕ ಖಾಸಿಂ ವಲಿ ಹೇಳಿದರು.
ಸಿರುಗುಪ್ಪ ತಾಲೂಕು ಹಳೆಕೋಟೆ ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಜನ ಆರೋಗ್ಯ ಕೇಂದ್ರ ನಿಮಾನ್ಸ್ ಜಿಲ್ಲಾ ಯುವ ಸ್ಪಂದನ ಕೇಂದ್ರದಿಂದ ಹಮ್ಮಿಕೊಂಡ ಮಹಾತ್ಮ ಗಾಂಧಿ ನರೇಗಾ ಕೂಲಿ ಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸರಕಾರಗಳು ಎಲ್ಲಾ ಬಡ ವರ್ಗಗಳ ಹಿತಸಕ್ತಿ ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿ ನರೇಗಾ ಯೋಜನೆ ಜಾರಿಗೆ ತಂದಿದೆ ಬಡವರಿಗೆ ತುಂಬಾ ಉಪಯುಕ್ತವಾಗಿದೆ ಇದರಿಂದ ಬಡವರ ಜೀವನ ಸುಧಾರಣೆ ಸಾಧ್ಯವಾಗಿದೆ ನಗರ ಮಹಾನಗರ ಪಶ್ಚಿಮ ಘಟ್ಟಗಳಿಗೆ ಗುಳೇ ಹೋಗದೆ ನರೇಗಾ ಕಾಮಗಾರಿ ಮಾಡಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲಕಾಲಕ್ಕೆ ಕೂಲಿ ಹಣ ಬಿಡುಗಡೆಗೆ ಸರಕಾರ ಆದೇಶ ನೀಡಿದೆ ಯಾವುದೇ ಕಾರಣಕ್ಕೂ ಕೂಲಿಕಾರರಿಗೆ ನೆರವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ ಸಮರ್ಥವಾಗಿ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ತಮ್ಮ ಮಕ್ಕಳ ಬದುಕು ರೂಪಿಸಲು ಮುಂದೆ ಬರಬೇಕು ಎಂದರು.
ಹಳೆಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ವೀರೇಶ ಉಪಾಧ್ಯಕ್ಷರು ಮತ್ತು ಸದಸ್ಯರು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ ಗ್ರಾಮ ಪಂಚಾಯತ್ ಪಿಡಿಒ ಬಿ ರಾಜೇಶ್ವರಿ ಅರಿವು ಕಾರ್ಯಕ್ರಮದಲ್ಲಿ ಇದ್ದರು.