
ಹೋಳಿ ಹಬ್ಬ : ಕುಟುಂಬಗಳಿಗೆ ಭೂರಿ-ಭೋಜನದ ವ್ಯವಸ್ಥೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,26- ಜಯನಗರದ ಸತ್ಯನಾರಾಯಣ ಪೇಟೆಯ ಏಳನೇ ಕ್ರಾಸ್ ನಲ್ಲಿರುವ ‘ಸತ್ಯನಾರಾಯಣಪೇಟೆ ಸೂಪರ್ ವಿಮೆನ್ಸ್’ ಗ್ರುಪ್‌ನ ಸದಸ್ಯೆಯರು ಮಂಗಳವಾರ ಹೋಳಿಹಬ್ಬವನ್ನು ಸಾಮೂಹಿಕವಾಗಿ ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದರು.
ಬಣ್ಣಗಳನ್ನು ಪರಸ್ಪರ ಎರಚಿಕೊಂಡು, ಸಾಮರಸ್ಯ, ಬಾಂಧವ್ಯಕ್ಕೆ ಬೆಸುಗೆ ಹಾಕಿದರು. ಈ ಸಂದರ್ಭದಲ್ಲಿ ಓಣಿಯ ಹತ್ತಾರು ಮಕ್ಕಳು, ಮಹಿಳೆಯರಿಗೆ ಸಾಥ್ ನೀಡಿದ್ದವು. ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ, ಹಾಡು ಹೇಳಿ, ಕುಣಿದು ನಲಿದಾಡಿದರು.
ಓಣಿಯ ಹಿರಿಯ ಸದಸ್ಯೆಯರು ಹೋಳಿ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರು. ಬಳಕ ಸದಸ್ಯೆಯರು ಸಾಮೂಹಿಕವಾಗಿ ಅಡುಗೆ ತಯಾರಿಸಿ, ರಾತ್ರಿ ಓಣಿಯಲ್ಲಿರುವ ಎಲ್ಲಾ ಕುಟುಂಬಗಳ ಸದಸ್ಯರಿಗೆ ಭೂರಿ-ಭೋಜನದ ವ್ಯವಸ್ಥೆ ಮಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ದೊಡ್ಡಬಸಮ್ಮ ಗುರುವಿನ್‌ಮರ್, ಜೈತ್ರಾ, ಅಂಬಿಕಾ, ಲಕ್ಷ್ಮಿ, ದೊಡ್ಡಬಸಮ್ಮ, ಗಾಯಿತ್ರಿ, ಸುಧಾ, ಹಂಪಾದೇವಿ, ಪೂರ್ಣಿಮಾ, ಶಾಂತಾ, ಅಶ್ವಿನಿ, ವಿಜಯಲಕ್ಷ್ಮಿ, ಜ್ಯೋತಿ, ಆಸ್ಮಾ, ಸೇರಿದಂತೆ ಇತರರಿದ್ದರು.