
ಅಂಜನಾದ್ರಿ ಹುಂಡಿ ಏಣಿಕೆ : 27.71 ಲಕ್ಷ ಸಂಗ್ರಹ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 6 – ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯ ನಡೆಯಿತು.
ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಡೆದ ಹಿನ್ನೆಲೆ ಕೇವಲ ೨೨ ದಿನಕ್ಕೆ ಆಂಜನೇಯನ ಹುಂಡಿ ತುಂಬಿದ್ದು, ಬರೋಬ್ಬರಿ 27.71 ಲಕ್ಷ ರೂ.ಹಣ ಸಂಗ್ರಹವಾಗಿದೆ.
ಪೊಲೀಸ್ ಬಂದೋಬಸ್ತ ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು.
ಗಂಗಾವತಿ ತಹಸೀಲ್ದಾರ್ ವಿಶ್ವನಾಥ ಮುರಡಿ ಅವರ ನೇತೃತ್ವದಲ್ಲಿ ಹುಂಡಿ ಏಣಿಕೆ ಕಾರ್ಯ ಆರಂಭಿಸಲಾಗಿದ್ದು,
ಕಂದಾಯ ಇಲಾಖೆಯ ಸುಮಾರು 25 ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆವರೆಗೆ ಹಣ ಏಣಿಕೆ ಮಾಡಿದ್ದಾರೆ.
ಒಟ್ಟು 27,71,761 ರೂ ಜೊತೆಗೆ ಎರಡು ನೇಪಾಳ ದೇಶದ ನೋಟು ಮತ್ತು 2 ವಿದೇಶಿ ನಾಣ್ಯ ಸಂಗ್ರಹವಾಗಿವೆ.
ಗ್ರೇಡ್ 9 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರ ಮೈಬೂಬ ಅಲಿ, ಶಿರಸ್ತೆದಾರ ಮಂಜುನಾಥ ಹಿರೇಮಠ, ಕಂದಾಯ ಇಲಾಖೆ ಸಿಬ್ಬಂದಿ ಕೃಷ್ಣವೇಣಿ, ನರ್ಮದಾ ಬಾಯಿ ಉಪಸ್ಥೀತರಿದ್ದರು.