IMG-20240121-WA0025

ನೇರ ನಿಷ್ಠರ ನಡೆಯವರು ಅಂಬಿಗರ ಚೌಡಯ್ಯ ಶರಣರು – ಕುಲಕರ್ಣಿ

 

ಕರುನಾಡ ಬೆಳಗು ಸುದ್ದಿ

ಕುಕನೂರ, 21- ಪಟ್ಟಣದ ಹರಿಶಂಕರ್ ಬಂಡಿ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ಭಾವಚಿತ್ರಕ್ಕೆ ಶನಿವಾರ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ಗಂಗಾಮತ ಸಮಾಜದ ಮುಖಂಡರು ಆಚರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರೇಟು ತಹಶಿಲ್ದಾರ್ ಮುರುಳಿದ ರಾವ್ ಕುಲಕರ್ಣಿ ಮಾತನಾಡಿ, ದಾರ್ಕ್ಷಣಿಕ ಶರಣರಲ್ಲಿ ಒಬ್ಬರಾದ ನಿಜಶರಣ ಅಂಬಿಗರ ಚೌಡಯ್ಯರೊಬ್ಬರು ನೇರ ಹಾಗೂ ನಿಷ್ಟೂರ ವಾದಿ ಶರಣರಾಗಿದ್ದು ಇವರು ರಚಿಸಿದ ಸಾಹಿತ್ಯ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಪ್ರತಿಯೊಬ್ಬರೂ ಅವರ ಆದರ್ಶಕ್ಕೆ ಪಾತ್ರರಾಗಿ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಬೇಕು, ಯಾರಿಗೂ ಹೆದರದೆ ಅಳುಕದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಕಾಯಕ ನಿಷ್ಠೆ ಉಳ್ಳವರು ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿ ಇದ್ದವರಿಗೆ ಸಾಂತ್ವನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಅಧ್ಯಕ್ಷ ಬುಡ್ಡಪ್ಪ ಬಾರ್ಕೆರ್, ಕಾರ್ಯದರ್ಶಿ ಬಾಳಪ್ಪ ಬಾರ್ಕೆರ್, ಗುದ್ನೆಪ್ಪ ಈಟಿ, ಮಂಜುನಾಥ್ ಬಾರ್ಕೆರ್, ಲಿಂಗರಾಜ್ ಕೊನಾರಿ, ಬಾಳಪ್ಪ ಈಟಿ , ಹನುಮಂತಪ್ಪ ಬಾರ್ಕೆರ್, ಯಮನಪ್ಪ ಅಂಬಿಗರ, ಸಿದ್ಲಿಂಗಪ್ಪ ವಾಲಿಕಾರ್, ಬಸವ ರಾಜ ಕೊನಾರಿ, ಪಕೀರಪ್ಪ ಕೊನಾರಿ, ರಾಮಪ್ಪ ಬಾರ್ಕೆರ್, ಗುರು ಬಾರ್ಕೆರ್, ಶಿವಪುತ್ರಪ್ಪ ಮಡ್ಡಿ ಮುತ್ತು ಸಮಾಜದ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!