
ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ರೂಡಿಸಿಕೊಳ್ಳಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,26- ಭಾರತದ ಸಂವಿಧಾನವು ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನವನ್ನು ಮುಂದಿನ ಯುವ ಪೀಳಿಗೆಗೆ ಅರ್ಥ ಮಾಡಿಕೊಡಿಸುವ ಕೆಲಸವನ್ನು ಮಾಡಬೇಕಾದುದು ಎಲ್ಲರ ಕರ್ತವ್ಯವಾಗಿದೆ ಎಂದು ಸಿದ್ದಲಿಂಗಪ್ಪ ಚೌಕಿಯ ಹಿರಿಯ ಮುಖಂಡ ಕೃಷ್ಣಯ್ಯ ಅಭಿಪ್ರಾಯಪಟ್ಟರು.
ಅವರು ಸಿದ್ದಲಿಂಗಪ್ಪ ಚೌಕಿಯ ಶ್ರೀ ರಾಮ ಭಜನೆ ಮಂದಿರದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡುತ್ತ ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ರೂಡಿಸಿಕೊಳ್ಳಿ ಎಂದರು. ಇದೇ ವೇಳೆ ಮತದಾನ ಜಾಗೃತಿಗಾಗಿ ಪ್ರತಿಜ್ಞಾವಿಧಿಯನ್ನು ಭೋಧಿಸಲಾಯಿತು.
ಶಾಲಾ ಬಾಲಕರಿಗೆ ಈ ವೇಳೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ಗೋವಿಂದ, ಅಂಬೇಡ್ಕರ್ ಸಂಘದ ವಾರ್ಡಿನ ಘಟಕದ ಅಧ್ಯಕ್ಷರಾದ ಕೊಲ್ಲಾಪುರಿ,ಶ್ರೀನಿವಾಸ, ಸಣ್ಣ ಗೋವಿಂದ ಇನ್ನಿತರರು ಭಾಗವಯಿಸಿದ್ದರು.