
ಅಂಬೇಡ್ಕರ್ ಕಾಂಗ್ರೆಸ್‌ನಿಂದ ಅಪಮಾನಕ್ಕೆ ಒಳಗಾದರು : ಕಾರ್ಯಪ್ಪ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 31- ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ಕಾಂಗ್ರೆಸ್ ಪಕ್ಷದ ನಾಯಕರಿಂದ ಅಪಮಾನ ಒಳಗಾದರು ಎಂದು ಸಾಹಿತಿ, ಕಲಾವಿದ, ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ನಗರದ ವೀರ ಸಾವರ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಪ್ ಬರೋಡಾದ ಸಮೀಪದ ಸಾವರ್ಕರ್ ವೃತ್ತದಲ್ಲಿ ಸಾವರ್ಕರ್ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನವನ್ನು ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ನಿಧನರಾದಾಗ ಅವರ ಅಂತ್ಯ ಸಂಸ್ಕಾರ ಮಾಡಲು ದೆಹಲಿಯಲ್ಲಿ ಈ ಕಾಂಗ್ರೆಸ್ ನಾಯಕರು ಅವಕಾಶ ನೀಡಲಿಲ್ಲ. ದಾವಣಗೆರೆಯ ಪೊಲೀಸರು ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯನ್ನು ಚನ್ನಗಿರಿ ಪೊಲೀಸ್ ಠಾಣೆಗೆ ಕರೆತಂದು ಕೇವಲ ಏಳು ನಿಮಿಷದಲ್ಲಿ ಮೂರ್ಚೆ ರೋಗದಿಂದ ಬಳಲುತ್ತಿದ್ದ ಆತ ಸಾವನ್ನಪ್ಪಿದ್ದ. ಈ ಬಗ್ಗೆ ವೈದ್ಯಕೀಯ ವರದಿಗಳು ದೃಢಪಡಿಸಿವೆ. ಆದರೆ ಮೃತ ವ್ಯಕ್ತಿಯ ಕುಟುಂಬಿಕರು ಹಾಗೂ ಪುಡಿರೌಡಿಗಳು ಗುಂಪುಕಟ್ಟಿಕೊAಡು ಠಾಣೆಯ ಮೇಲೆ ದಾಳಿ ಮಾಡಿ ಗಲಭೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಹನ್ನೊಂದು ಜನ ಪೊಲೀಸರಿಗೆ ಗಾಯಗಳಾಗಿವೆ. ಮೂರು ಜನ ಸ್ಥಿತಿ ಚಿಂತಾಜನಕವಾಗಿದೆ. ಆದರೆ ಸಿದ್ದರಾಮಯ್ಯನ ಸರಕಾರ ಮಟ್ಕಾ ಬುಕ್ಕಿಯನ್ನು ಬಂಧಿಸಿ ಕರೆತಂದ ಮೂವ್ವರು ಪೊಲೀಸರನ್ನು ಅಮಾನತ್ತು ಮಾಡಿದೆ. ಈ ಮೂಲಕ ಪೊಲೀಸರ ನೈತಿಕತೆ ಕಸಿಯಲು ಯತ್ನಿಸಿದೆ. ಪೊಲೀಸರು ಮೊದಲು ಸಿದ್ಗರಾಮಯ್ಯರಿಗೆ ಬುದ್ಧಿವಾದ ಹೇಳಬೇಕು.
ಸತ್ಯ ಹೇಳಿದರೆ ವಿವಾದವಾಗುತ್ತದೆ. ಸತ್ಯ ಹೇಳದೇ ಹೋದರೆ ನಮ್ಮ ಇತಿಹಾಸವನ್ನು ನಮ್ಮ ಪೀಳಿಗೆಗೆ ತಲುಪಿಸದೇ ಹೋದ ಅಪಮಾವಾಗುತ್ತದೆ. ಹೀಗಾಗಿ ಭಾರತದ ಇತಿಹಾಸದುದ್ದಕ್ಕೂ ನಕಲಿ ಹೋರಾಟಗಾರರೇ ತುಂಬಿಕೊAಡಿದ್ದಾರೆ. ನೈಜ ಹೋರಾಟಗಾರರನ್ನು ನೇಪಥ್ಯಕ್ಕೆ ಸರಿಸಲಾಗಿದೆ ಭಾರತದ ಸ್ವತಂತ್ರಕ್ಕಾಗಿ ಸತತ ೬೮ ದಿನಗಳ ಕಾಲ ಉಪವಾಸ ಮಾಡಿ ಖುದಿರಾಮ್ ಎಂಬುವವರು ಪ್ರಾಣತ್ಯಾಗ ಮಾಡಿದರು. ಇತನ ಉಪವಾಸದ ಬಗ್ಗೆ ಭಾರತದ ಸ್ವತಂತ್ರ ಹೋರಾಟದ ಇತಿಹಾಸದಲ್ಲಿ ಉದ್ದೇಶಪೂರ್ವಕ ದಾಖಲಿಸಿಲ್ಲ. ಆದರೆ ಎರಡು-ಮೂರು ದಿನ ಸತ್ಯಾಗ್ರಹ ಮಾಡುವ ಮೂಲಕ ಗಾಂಧಿಯ ಬಗ್ಗೆ ಪುಂಖಾನುಪುಖವಾಗಿ ಬರೆಯಲಾಗಿದೆ.
ಈ ಖುದಿರಾಮನ ಬಗ್ಗೆ ಬರೆದರೆ ಗಾಂಧಿಯAತವರ ಹೋರಾಟದ ನೈಜತೆ ಅನಾವರಣವಾಗುತ್ತದೆ. ಜನರ ಮುಂದೆ ಮಸುಕಾಗುತ್ತಾರೆ ಎಂಬ ಭೀತಿಯಿಂದ ಕಾಂಗ್ರೆಸ್ ನಾಯಕರು ವ್ಯವಸ್ಥಿತವಾಗಿ ಸ್ವತಂತ್ರ ಹೋರಾಟದ ದಿಕ್ಕನ್ನು ತಪ್ಪಿಸಿದ್ದಾರೆ.
ವಿನಾಯಕ ದಾಮೋದರ ಸಾವರ್ಕರ್ ಮೂಲತಃ ಬ್ರಾಹ್ಮಣ. ಆದರೆ ಎಂದಿಗೂ ತಮ್ಮ ಜಾತಿಯನ್ನು ಎಲ್ಲಿಯೂ ವ್ಯಕ್ತಪಡಿಸಿಲ್ಲ. ತಾವೊಬ್ಬ ಹಿಂದು ಎಂದೇ ಬಿಂಬಿಸಿಕೊAಡವರು.
ದಲಿತರ ಸ್ಥಿತಿಯನ್ನು ಕಂಡು ಮರುಗಿದಿ ಸಾವರ್ಕರ್, ಅವರಿಗಾಗಿ ಪತೀತ ಪಾವನಿ ಮಂದಿರ ನಿರ್ಮಾಣ ಮಾಡಿಕೊಟ್ಟವರು.
ಸಾವರ್ಕರ್ ಅವರಿಗೆ ದಲಿತರ ಬಗ್ಗೆ ಇದ್ದ ಪ್ರೀತಿಯೇ ಸಹಜವಾಗಿ ಅಂಬೇಡ್ಕರ್ ಅವರನ್ನು ಸೆಳೆಯುವಂತೆ ಮಾಡಿತ್ತು. ಸ್ವತಃ ಅಂಬೇಡ್ಕರ್ ಕೂಡ ಸಾವರ್ಕರ್ ಅನುಯಾಯಿಯಾಗಿದ್ದರು. ಸಾವರ್ಕರ್ ಅವರ ಹಿಂದುತ್ವವನ್ನು ಸ್ವತಃ ಅಂಬೇಡ್ಕರ್ ಒಪ್ಪಿಕೊಂಡಿದ್ದರು. ಎಲ್ಲಿಯೂ ಅಂಬೇಡ್ಕರ್ ಹಿಂದುತ್ವದ ವಿರೋಧಿ ಭಾವನೆ ವ್ಯಕ್ತಪಡಿಸಿಲ್ಲ ಎಂದರು.
ಈ ಸಂದರ್ಭದಲ್ಲಿ ವಾಗ್ಮಿ, ಭಾಷಣಕಾರ ಹಾರಿಕಾ ಮಂಜುನಾಥ, ಆರ್‌ಎಸ್‌ಎಸ್ ನಗರ ಸಂಚಾಲಕ ದುರ್ಗಾದಾಸ ಭಂಡಾರ್ಕರ್, ಮಾಜಿಶಾಸಕ ಪರಣ್ಣ ಮುನವಳ್ಳಿ, ಜಿ.ಶ್ರೀಧರ ಸಿಂಗನಾಳ, ವಿರೂಪಾಕ್ಷಪ್ಪ, ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಅಮರಜ್ಯೋತಿ ನರಸಪ್ಪ ಜೋಗದ, ಹನುಮಂತಪ್ಪ ನಾಯಕ ಉಪಸ್ಥಿತರಿದ್ದರು.