
ಅಕ್ರಮ ಮಧ್ಯ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 2- ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ದಲಿತ ಸಂಘಟನಾ ಸಮಿತಿ(ಭೀಮ ಘರ್ಜನೆ) ವಿವಿಧ ಸಂಘಟನೆಗಳಿಂದ ಅಕ್ರಮ ಮಧ್ಯ ಮಾರಾಟ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಗ್ರೇಡ್-2 ತಹಶಿಲದಾರ ಮಹಾಂತಗೌಡ, ಅಬಕಾರಿ ಇನ್ಸಪೇಕ್ಟರ ಶಕುಂತಲಾ,ವಿಜಯರೆಡ್ಡಿ ಮನವಿ ಸ್ವಿಕರಿಸಿದರು.
ಅಬಕಾರಿ ಅಧಿಕಾರಿಗಳನ್ನು ಸಂಘಟನೆಗಳು ತರಾಟೆಗೆ ತೆಗೆದುಕೊಂಡು ಅಬಕಾರಿ ತಾಲೂಕ ಅಧಿಕಾರಿ ವಿಠಲ ಪಿರಗಣ್ಣವರ ರಾಜಕಾರಣ ಮಾಡಿ ಬಾರ ಮಾಲಿಕರುಗಳ ಕೈಗೋಂಬೆಯಾಗಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಬರಲು ಹಿಂದೆಟು ಹಾಕುತ್ತಿದ್ದಾರ ಎಂದು ಪ್ರತಿಭಟನಾ ಸ್ಥಳದಲ್ಲಿ ಅಬಕಾರಿ ಇನ್ಸಪೇಕ್ಟರ ಶಕುಂತಲಾ,ವಿಜಯರೆಡ್ಡಿ ಮೇಲೆ ಹರಿಹಾಯ್ದರು.
ಕಿಷ್ಕಿಂಧ ಕಲ್ಯಾಣ ರಕ್ಷಣಾ ವೇದಿಕೆ ದೇವಣ್ಣ ಐಹೋಳೆಜನಜಾಗೃತಿ ಸಮಿತಿ ಗಣೇಶ ಮಚ್ಚಿ,ದಲಿತ ಸಂಘಟನಾ ಸಮಿತಿ(ಭೀಮ ಘರ್ಜನೆ) ಅಜಯಕುಮಾ ಚಲವಾದಿ ಮಾತನಾಡಿ ನಗರದ ದಲಿತ ಕೇರಿಗಳಲ್ಲಿ ಅಕ್ರಮವಾಗಿ ಮಧ್ಯವನ್ನು ತೆಗೆದುಕೊಂಡು ದಲಿತ ಜನಾಂಗದವರಿಗೆ ಮ್ಯ ಮಾರಾಟ ಮಾಡುತ್ತಿದ್ದಾರೆ.
ಸಿಎಲ್-೨ ಬಾರಗಳಲ್ಲಿ ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಪರವಾನಿಗೆ ಇಲ್ಲದೇ ಇರುವಂತಹ ಖಾಸಗಿ ಹೋಟಲ್‌ಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆ.
ಅಬಕಾರಿ ನಿತಿ ಉಲ್ಲಂಘನೆಯಾದರೂ ಅಬಕಾರಿ ಅಧಿಕಾರಿಗಳು ನಿರ್ಲಕ್ಷ ಭಾವನೆ ತಾಳಿ ಬಾರ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ತಹಶಿಲದಾರರು ಅಕ್ರಮ ಮರಳು ಮಾಪಿಯಾ ,ಮಟಕಾ,ಇಸ್ಟೇಟ್ ಮುಂತಾದವುಗಳನ್ನು ಬಂದ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಕೇಶ, ಡಿ ರಮೇಶ ಭೋವಿ, ಸಂತೋಷ, ಜಂಬಣ್ಣ ಮುಂತಾದವರು ಉಪಸ್ಥೀತರಿದ್ದರು.