
ಅಕ್ಷಯ ತೃತೀಯ ಅಂಗವಾಗಿ ರಾಯರ ಮಠದಲ್ಲಿ ವಿಶೇಷ ಪೂಜೆಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ಅಕ್ಷಯ ತೃತೀಯ ಅಂಗವಾಗಿ ಶುಕ್ರವಾರದಂದು ನಗರದಲ್ಲಿರುವ ಸತ್ಯನಾರಾಯಣಪೇಟೆ ಭಾಗದ ರಾಯರ ಮಠದಲ್ಲಿ, ವಿಶೇಷ ಪೂಜೆಗಳು ಆಚರಿಸಲಾಯಿತು.
ಪ್ರಾತಃಕಾಲದಲ್ಲಿ ರಾಯರ ಬೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮಹಾ ಅಭಿಷೇಕದ ನಂತರ, ಬೃಂದಾವನಕ್ಕೆ ಶ್ರೀಗಂಧ ಲೇಪನ, ಮತ್ತು ವಿಶೇಷ ಅಲಂಕಾರವನ್ನು ಅರ್ಚಕರನೇತೃತ್ವದಲ್ಲಿ ಮಾಡಲಾಯಿತು.
ವೇದ ಮಂತ್ರಗಳಿಂದ ಕೂಡಿದ ವಿಶೇಷ ಪೂಜೆಗಳು ನಡೆದವು. ನಗರದ ನಾನಾ ಭಾಗದಿಂದ ಭಕ್ತರು ಆಗಮಿಸಿರಾಯರ ದರ್ಶನವನ್ನು ಪಡೆದರು.