
ಅಕ್ಷರ ನೀಡಿದ ವಿದ್ಯಾಸಂಸ್ಥೆಯನ್ನ ಮರೆಯಲಾಗದು
ಉದ್ಯಮಿ ಅನಿಲ್ ಜನಾದ್ರಿ
ಕರುನಾಡ ಬೆಳಗು ಸುದ್ದಿ
ಕುಕನೂರು 0೩-ಅಕ್ಷರ ಅನ್ನ ನೀಡಿದ ವಿದ್ಯಾಸಂಸ್ಥೆಯನ್ನ ಎಂದೆಂದಿಗೂ ಮರೆಯಲಾಗದು ಜೊತೆಯಲ್ಲಿ ಕಲಿತ ಸಹಪಾಠಿ ಸ್ನೇಹಿತರನ್ನ ಕಾಣುವುದೇ ಒಂದು ಸಂತಸದ ಕ್ಷಣ ಎಂದು ವಿದ್ಯಾನಂದ ಗುರುಕುಲದ 1986 ರಿ ಬ್ಯಾಚಿನ ಹಳೆಯ ವಿದ್ಯಾರ್ಥಿ, ಉದ್ಯಮಿ ಅನಿಲ್ ಜನಾದ್ರಿ ಹೇಳಿದರು.
ಕುಕನೂರು ಪಟ್ಟಣದ ಪ್ರತಿಷ್ಠಿತ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಮಾಸಿಕ ಧ್ವಜಾರೋಹಣವನ್ನು ನೆರವೇರಿಸಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದವರು, ಪ್ರತಿಷ್ಠಿತ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯು ಸತತ ನೂರು ವರ್ಷಗಳಿಂದ ಈ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿ ಬದುಕು ಕಟ್ಟಿಕೊಟ್ಟ ಮಾತೃ ಹೃದಯ ಸಂಸ್ಥೆ ಇದಾಗಿದ್ದು . ಶತಮಾನದ ಹೊಸ್ತಿಲಲ್ಲಿ ಇರುವ ಸಂಸ್ಥೆಯು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ನನ್ನಂತ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸಿದಂತ ವಿದ್ಯಾನಂದ ಗುರುಕುಲ ಎಂದೆಂದಿಗೂ ಅಜರಾಮರ. ನನ್ನನ್ನು ಗುರುತಿಸಿ ಪ್ರತಿ ತಿಂಗಳ ಎರಡನೇ ತಾರೀಕಿನೆಂದು ಜರಗುವ ಮಾಸಿಕ ಧ್ವಜಾರೋಹಣಕ್ಕೆ ಈ ಬಾರಿ ನನ್ನನ್ನು ಗುರುತಿಸಿ ಆಹ್ವಾನಿಸಿ ಧ್ವಜಾರೋಹಣ ನೆರವೇರಿಸಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾ ನಂದ ಗುರುಕುಲ ಶಿಕ್ಷಣ ಸಂಸ್ಥೆಯ ಜಿ ವಿ ಜಾಗೀರ್ದಾರ್, ಶರಣಪ್ಪ ಹೊಸಮನಿ, ಎನ್ ಆರ್ ಕುಕನೂರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಸಾಹಿತಿ ಶ್ರೀಕಾಂತ್ ಪೂಜಾರ್, ಶಿಕ್ಷಕರಾದ ಸೋಮಶೇಖರ್ ನಿಲೋಗಲ್, ಸೇರಿದಂತೆ ಪದವಿಪೂರ್ವ ಕಾಲೇಜಿನ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿ ಬಳಗ ಇತರರು ಉಪಸ್ಥಿತರಿದ್ದರು.