
ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಪ್ಪಳ ಆಗ್ರಹಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೨೨- ರಾಜ್ಯ ಸರಕಾರ 2022-23 Bd ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿಧ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಶುಕ್ರವಾರದಂದು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು. ಮನವಿಯಲ್ಲಿ ರಾಜ್ಯದಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಪಾಯಕಾರಿ. ಅಸುರಕ್ಷಿತ, ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಸರಕಾರಗಳು ಬದ್ಧವಾಗಿರಬೇಕು ಎಂದು ಒತ್ತಯಿಸಿದರು.
ಕಾರ್ಯಕ್ರಮವನ್ನು ನವಂಬರ್ 09 ರಂದು ಮಾಡಿದೆ ಆದರೆ ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಆಗದೆ ಬಡ ವಿದ್ಯಾರ್ಥಿಗಳ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟಿ ಆಡುತ್ತಿರುವುದು ಖಂಡನೀಯ.ಎ ಲ್ಲ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಂಡಿದ್ದ ಹಿಂದಿನ ಸರ್ಕಾರ ಎಲ್ಲರಿಗೂ ಸಹಾಯ ಹಸ್ತವನ್ನು ಚಾಚಿತ್ತು. ಜೊತೆಗೆ, ಎಲ್ಲ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಹಿಂದೆ ಇದ್ದ ವಿದ್ಯಾರ್ಥಿ ವೇತನಕ್ಕಿಂತ ಶೇ.50ರಷ್ಟು ಸಹಾಯಧನ ಹೆಚ್ಚಳ ಮಾಡಿತ್ತು. ಆದರೆ, ಇಂದಿನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಇಲಾಖೆಯಲ್ಲಿ ಹಣವಿಲ್ಲವೆಂದು ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನದ ಶೇ.60 ಮೊತ್ತವನ್ನು ಕಡಿತಗೊಳಿಸಿ ಆದೇಶ ಹೊರಡಿಸಿರುವ ಸರಕಾರದ ನಡೆಯನ್ನು ವಿದ್ಯಾರ್ಥಿ ಪರಿಷತ್ ಖಂಡಿಸಿದೆ.
ಪ್ರಮುಖ ಬೇಡಿಕೆಗಳು : 2022-23 ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ತಕ್ಷಣ ಜಮೆ ಮಾಡಬೇಕು. ಯಾವುದೇ ರೀತಿ ಕಡಿತ ಮಾಡದೆ ಪೂರ್ಣ ವಿದ್ಯಾರ್ಥಿ ವೇತನವನ್ನು ನೀಡಬೇಕು. ವಿದ್ಯಾರ್ಥಿ ವೇತನಕ್ಕೆ ಸಲ್ಲಿಕೆ ಮಾಡಿದ್ದ 4 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ರದ್ದುಗೊಳಿಸಿರುವ ಸರಕಾರ ಎಲ್ಲರಿಗೂ ವಿದ್ಯಾರ್ಥಿ ನೀಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದ ರಾಜ್ಯ ಸರ್ಕಾರ ವಿರುದ್ಧ. ವಿದ್ಯಾರ್ಥಿ ವೇತನ ಬಿಡುಗಡೆಗೆ ಮಾಡಬೇಕೆಂದು.
ಪ್ರತಿಭಟನೆ ನೇತೃತ್ವವನ್ನು ಸಂಚಾಲಕ ಶಶಾಂಕ್ ಪಾಟೀಲ್, ನಗರ ಕಾರ್ಯದರ್ಶಿ ಹಮ್ಮಿಗೇಶ್ ತಾಲೂಕ ಸಂಚಾಲಕ ಕೃಷ್ಣ,ಶಶಿ ಕುಮಾರ್, ನವೀನ್, ಆದಿತ್ಯ, ಗುರುಬಸವ, ರಾಧಿಕಾ, ಸುಮಂಗಲ ಅಕ್ಷತಾ, ಲಲಿತಾ,ರೇಣುಕಾ, ಇತರರಿದ್ದರು.